ಕರ್ನಾಟಕ

karnataka

ETV Bharat / sitara

ಫೆ. 7ರಂದು ಮಾಲ್ಗುಡಿ ಡೇಸ್​​ ಬಿಡುಗಡೆ: ವಿಜಯ್​ ರಾಘವೇಂದ್ರ - ನಿರ್ದೇಶಕ ಕೆ ರತ್ನಾಕರ್

ಮಾಲ್ಗುಡಿ ಡೇಸ್ ಚಿತ್ರದಲ್ಲಿ ಲಕ್ಷ್ಮೀ ನಾರಾಯಣ ಮಾಲ್ಗುಡಿ ಎಂಬ ಸಾಹಿತಿ ಪಾತ್ರದಲ್ಲಿ ಅಭಿನಯ ಮಾಡಿದ್ದೇನೆ. ಇದಕ್ಕಾಗಿ ದಿನದಲ್ಲಿ 4 ಗಂಟೆಗಳ ಕಾಲ ಮೇಕಪ್ ಮಾಡಿಕೊಂಡಿದ್ದೇನೆ. ಅಲ್ಲದೇ 52 ದಿನಗಳಲ್ಲಿ 24 ಕೆಜಿ ತೂಕ ಕಳೆದುಕೊಂಡಿದ್ದೇನೆ ಎಂದು ನಟ ವಿಜಯ್​ ರಾಘವೇಂದ್ರ ಹೇಳಿದರು‌.

ವಿಜಯ ರಾಘವೇಂದ್ರ
ವಿಜಯ ರಾಘವೇಂದ್ರ

By

Published : Feb 3, 2020, 1:00 PM IST

ಹುಬ್ಬಳ್ಳಿ:ಪಕ್ಕಾ ಫ್ಯಾಲಿಮಿ ಎಂಟರ್​ಟೈನ್​ಮೆಂಟ್​​ ಮಾಲ್ಗುಡಿ ಡೇಸ್ ಸಿನಿಮಾ ಫೆ. 7ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ನಟ ವಿಜಯ್​ ರಾಘವೇಂದ್ರ ಹೇಳಿದರು‌.

ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಲ್ಗುಡಿ ಡೇಸ್ ಎಂದ ಕೂಡಲೇ ನೆನಪಿಗೆ ಬರುವುದು ಶಂಕರ ನಾಗ್ ನಿರ್ದೇಶನದ ಮಾಲ್ಗುಡಿ ಡೇಸ್ ಧಾರಾವಾಹಿ. ಆದರೆ ಇದೀಗ ನಾವು ಹೇಳಲು ಹೊರಟಿರುವುದು ಹೊಸ ಮಾಲ್ಗುಡಿ ಡೇಸ್ ಬಗ್ಗೆ. ಈ ಸಿನಿಮಾಗೂ ಮಾಲ್ಗುಡಿ ಡೇಸ್​ಗೂ ಯಾವುದೇ ಸಂಬಂಧ ಇಲ್ಲ. ಬದಲಾಗಿ ಶಂಕರ ನಾಗ್ ಅವರ ಮೇಲಿನ ಗೌರವದಿಂದ ಈ ಹೆಸರು ಇಡಲಾಗಿದೆ ಎಂದರು.
ಮಾಲ್ಗುಡಿ ಡೇಸ್ ಸುದ್ದಿಗೋಷ್ಠಿ

ಕುಟುಂಬದಲ್ಲಿನ ಭಾವನೆ ಹಾಗೂ ಸಂಬಂಧಗಳ ಬಗ್ಗೆ ಹೇಳುವ ಸಿನಿಮಾ ಮಾಲ್ಗುಡಿ ಡೇಸ್ ಆಗಿದ್ದು, ಇದರಲ್ಲಿ ಲಕ್ಷ್ಮೀ ನಾರಾಯಣ ಮಾಲ್ಗುಡಿ ಎಂಬ ಸಾಹಿತಿ ಪಾತ್ರದಲ್ಲಿ ಅಭಿನಯ ಮಾಡಿದ್ದೇನೆ. ಇದಕ್ಕಾಗಿ ದಿನದಲ್ಲಿ 4 ಗಂಟೆಗಳ ಕಾಲ ಮೇಕಪ್ ಮಾಡಿಕೊಂಡಿದ್ದೇನೆ. ಅಲ್ಲದೇ 52 ದಿನಗಳಲ್ಲಿ 24 ಕೆಜಿ ತೂಕ ಕಳೆದುಕೊಂಡಿದ್ದೇನೆ ಎಂದರು.

ಚಿತ್ರದಲ್ಲಿ ಎರಡು ಜನರೇಷನ್​ನ ಕಥೆ ಹೇಳಲಾಗಿದೆ. ಈಗಾಗಲೇ ಚಿತ್ರದ ಟೀಜರನ್ನು ನಟ ಶಿವರಾಜ್​ ಕುಮಾರ್ ಬಿಡುಗಡೆ ಮಾಡಿದ್ದು, ಚಿತ್ರದ ಹಾಡನ್ನು ರವಿಚಂದ್ರನ್ ಬಿಡುಗಡೆಗೊಳಿಸಿದ್ದಾರೆ. ಇವುಗಳು ಸೋಶಿಯಲ್ ಮೀಡಿಯಾಗಳಲ್ಲಿ ಬಹಳ ಸದ್ದು ಮಾಡುತ್ತಿದ್ದು, ಜನರ ಮೆಚ್ಚುಗೆ ಪಡೆದಿವೆ. ಮಾಲ್ಗುಡಿ ಡೇಸ್ ಸಿನಿಮಾ ಒಳ್ಳೆಯ ಕಥೆಯುಳ್ಳ ಸಿನಿಮಾ. ಫೆ. 7ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದ್ದು, ಕುಟುಂಬ ಸಮೇತವಾಗಿ ಚಿತ್ರವನ್ನು ವಿಕ್ಷಣೆ ಮಾಡಬೇಕೆಂದು ಮನವಿ ಮಾಡಿದರು.

ನಂತರ ಮಾತನಾಡಿದ ನಿರ್ದೇಶಕ ಕೆ.ರತ್ನಾಕರ್, ಮಾಲ್ಗುಡಿ ಡೇಸ್ ಇದೇ ತಿಂಗಳು 7ರಂದು ರಾಜ್ಯದಾದ್ಯಂತ ಬಿಡುಗಡೆಯಾಗುತ್ತಿದೆ. ಇದು ಫ್ಯಾಮಿಲಿ ಎಂಟರ್​ಟೈನ್​ಮೆಂಟ್​ ಸಿನಿಮಾಗಿದೆ. ಎಲ್ಲರೂ ಸಿನಿಮಾ ಪ್ರೋತ್ಸಾಹಿಸಿ ಸಿನಿಮಾವನ್ನು ಚಿತ್ರಮಂದಿರಗಳಲ್ಲೇ ಬಂದು ನೋಡಿ ಎಂದು ಪ್ರೇಕ್ಷಕರಿಗೆ ಮನವಿ ಮಾಡಿದ್ರು.

ABOUT THE AUTHOR

...view details