ಕರ್ನಾಟಕ

karnataka

ETV Bharat / sitara

ಮರು ಪ್ರಸಾರವಾಗಲಿದೆ ಶಂಕರ್​ ನಾಗ್​ ನಿರ್ದೇಶನದ ‌ಮಾಲ್ಗುಡಿ‌ ಡೇಸ್! - ಶಂಕರ್​​ನಾಗ್​ ನಿರ್ದೇಶನ

ಶಂಕರ್​​ ನಾಗ್​ ನಿರ್ದೇಶನದ ಕನ್ನಡದ ಜನಪ್ರಿಯ ನಟರು ಅಭಿನಯಿಸಿರುವ ಮಾಲ್ಗುಡಿ ಡೇಸ್​​ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಮರು ಪ್ರಸಾರವಾಗಲಿದೆ.

Malgudi Days re-broadcast
ಮತ್ತೆ ಬರಲಿದೆ ಶಂಗ್ರಣ್ಣ ನಿರ್ದೇಶನದ ‌ಮಾಲ್ಗುಡಿ‌ ಡೇಸ್

By

Published : May 1, 2020, 5:32 PM IST

Updated : May 2, 2020, 3:52 PM IST

ಮಾಲ್ಗುಡಿ ಡೇಸ್ ಎಂಬ ಹೆಸರು ಕೇಳಿದ ಕೂಡಲೇ ಥಟ್ ಅಂತ ನೆನಪಾಗುವುದು ಶಂಕರ್ ​ನಾಗ್. ಆರ್.ಕೆ.ನಾರಾಯಣ್ ಅವರ ಕಥೆಗಳನ್ನು ಆಧರಿಸಿ ಶಂಕರ್​ನಾಗ್ ನಿರ್ದೇಶಿಸಿದ ಮಾಲ್ಗುಡಿ ಡೇಸ್ ಧಾರಾವಾಹಿಯನ್ನು ಯಾರು ತಾನೆ ಮರೆಯುತ್ತಾರೆ? ಹಿಂದಿಯಲ್ಲಿ ಮೂಡಿ ಬಂದಿದ್ದ ಮಾಲ್ಗುಡಿ ಡೇಸ್​​​ ವೆಬ್ ಸಿರೀಸ್ ವೀಕ್ಷಕರ ಮನಸ್ಸು ಗೆದ್ದಿತ್ತು. ಇದೀಗ ಲಾಕ್​ಡೌನ್ ಹಿನ್ನೆಲೆ ಮಾಲ್ಗುಡಿ ಡೇಸ್ ಮತ್ತೆ ಮರು ಪ್ರಸಾರ ಕಾಣಲಿದೆ.

ಮತ್ತೆ ಬರಲಿದೆ ಶಂಕ್ರಣ್ಣ ನಿರ್ದೇಶನದ ‌ಮಾಲ್ಗುಡಿ‌ ಡೇಸ್

1986ರಲ್ಲಿ ಪ್ರಸಾರ ಕಂಡ ಮಾಲ್ಗುಡಿ ಡೇಸ್ ಧಾರಾವಾಹಿ ಇದೀಗ ಜೀ ಕನ್ನಡ ವಾಹಿನಿಯಲ್ಲಿ ಮತ್ತೆ ಮರು ಪ್ರಸಾರ ಆಗಲಿದೆ. ಅಂದಹಾಗೆ ಹಿಂದಿ ಭಾಷೆಯಲ್ಲಿ ಪ್ರಸಾರ ಕಂಡಿದ್ದ ಮಾಲ್ಗುಡಿ ಡೇಸ್​​ನಲ್ಲಿ ಕನ್ನಡದ ಕಲಾವಿದರು ಮಾತ್ರವಲ್ಲದೇ ತಂತ್ರಜ್ಞರು ಕೂಡಾ ಇದ್ದರು. ಆದರೆ ಪ್ರೇಕ್ಷಕರ ಒತ್ತಾಯದ ಮೇರೆಗೆ ಅದು ಕನ್ನಡ ಭಾಷೆಗೆ ಡಬ್​​​ ಆಗಿ ಪ್ರಸಾರವಾಗಿತ್ತು.

ಹಿಂದಿ ಭಾಷೆಯಲ್ಲಿ ಬಹಳ ಅದ್ಭುತವಾಗಿ ಮೂಡಿ ಬಂದಿದ್ದ ಮಾಲ್ಗುಡಿ ಡೇಸ್ ಶೂಟಿಂಗ್ ಆಗಿದ್ದು ಆಗುಂಬೆಯಲ್ಲಿ. ಬೆಂಗಳೂರು, ತುಮಕೂರು, ದೇವರಾಯನ ದುರ್ಗ ಬಳಿಯೂ ಚಿತ್ರೀಕರಣ ನಡೆದಿದೆ. ಪಕ್ಕಾ ಹಳ್ಳಿಯ ಪರಿಸರದ ಕಥೆಯನ್ನು ಒಳಗೊಂಡಿರುವ ಮಾಲ್ಗುಡಿ ಡೇಸ್​​ನಲ್ಲಿ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದ ಮಾಸ್ಟರ್ ಮಂಜುನಾಥ್ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾದರು.

ಮಾಸ್ಟರ್ ಮಂಜುನಾಥ್ ಜೊತೆಗೆ ವೈಶಾಲಿ ಕಾಸರವಳ್ಳಿ, ಬಿ.ಜಯಶ್ರೀ, ಅನಂತ್ ನಾಗ್‌, ರಾಜೇಶ್ ನಟರಂಗ, ಗಿರೀಶ್‌ ಕಾರ್ನಾಡ್‌, ವಿಷ್ಣುವರ್ಧನ್‌, ರಮೇಶ್ ಭಟ್‌, ಅರುಂಧತಿ ನಾಗ್‌ ಮುಂತಾದ ಜನಪ್ರಿಯ ಕಲಾವಿದರು ಈ ಧಾರಾವಾಹಿಯಲ್ಲಿ ನಟಿಸಿದ್ದರು.

ಮಾಲ್ಗುಡಿ ಡೇಸ್ ಇದೀಗ ಜೀ ಕನ್ನಡ ವಾಹಿನಿಯಲ್ಲಿ ಮರು ಪ್ರಸಾರ ಆಗುವುದು ಲಾಕ್​ಡೌನ್ ಸಮಯದಲ್ಲಿ ವೀಕ್ಷಕರಿಗೆ ಮನರಂಜನೆಯ ಮಹಾಪೂರ ಸಿಕ್ಕಂತಾಗಲಿದೆ.

Last Updated : May 2, 2020, 3:52 PM IST

ABOUT THE AUTHOR

...view details