ಕರ್ನಾಟಕ

karnataka

ETV Bharat / sitara

ಆಸ್ಕರ್ ಪ್ರಶಸ್ತಿಗೆ ಭಾರತದಿಂದ 'ಜಲ್ಲಿಕಟ್ಟು' ಚಿತ್ರ ಆಯ್ಕೆ - ಭಾರತದಿಂದ ಆಸ್ಕರ್ ಪ್ರಶಸ್ತಿಗೆ ಜಲ್ಲಿಕಟ್ಟು ನಾಮನಿರ್ದೇಶನ

2019ರ ಅಕ್ಟೋಬರ್‌ನಲ್ಲಿ ಬಿಡುಗಡೆಯಾದ ಜಲ್ಲಿಕಟ್ಟು ಚಿತ್ರಕ್ಕೆ ಭಾರತದಿಂದ ಆಸ್ಕರ್‌ಗೆ ಅಧಿಕೃತ ಪ್ರವೇಶ ಸಿಕ್ಕಿದ್ದು, 93ನೇ ಅಕಾಡೆಮಿ ಪ್ರಶಸ್ತಿ ವಿಭಾಗದಲ್ಲಿ ನಾಮನಿರ್ದೇಶನ ಮಾಡಲು ಆಯ್ಕೆ ಮಾಡಲಾಗಿದೆ.

Jallikattu is India's official Oscar entry
ಜಲ್ಲಿಕಟ್ಟು ಸಿನಿಮಾ

By

Published : Nov 25, 2020, 5:01 PM IST

Updated : Nov 25, 2020, 6:53 PM IST

ನವದೆಹಲಿ: ಅತ್ಯುತ್ತಮ ಅಂತಾರಾಷ್ಟ್ರೀಯ ಚಲನಚಿತ್ರಗಳ ವಿಭಾಗದಲ್ಲಿ ಲಿಜೊ ಜೋಸ್ ಪೆಲ್ಲಿಸ್ಸೆರಿ ನಿರ್ದೇಶನದ ಜಲ್ಲಿಕಟ್ಟು ಚಲನಚಿತ್ರವನ್ನು ಪ್ರತಿಷ್ಠಿತ ಆಸ್ಕರ್ ಅವಾರ್ಡ್​ನ 93ನೇ ಅಕಾಡೆಮಿ ಪ್ರಶಸ್ತಿ ವಿಭಾಗದಲ್ಲಿ ಭಾರತದಿಂದ ಅಧಿಕೃತವಾಗಿ ಆಯ್ಕೆ ಮಾಡಲಾಗಿದೆ.

2019ರ ಅಕ್ಟೋಬರ್‌ನಲ್ಲಿ ಬಿಡುಗಡೆಯಾದ ಮಲಯಾಳಂ ಚಿತ್ರಕ್ಕೆ ಭಾರತದಿಂದ ಆಸ್ಕರ್‌ಗೆ ಅಧಿಕೃತ ಪ್ರವೇಶ ಸಿಕ್ಕಿದ್ದು, ಚಿತ್ರಕ್ಕೆ ಗಿರೀಶ್ ಗಂಗಾಧರನ್ ಅವರ ಛಾಯಾಗ್ರಹಣ ಇದೆ. ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾದ 14 ಸದಸ್ಯರ ಸಮಿತಿಯು ಮಲಯಾಳಂ ಚಿತ್ರವನ್ನು ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲು ಆಯ್ಕೆ ಮಾಡಲಾಗಿದೆ ಎಂದು ಪ್ರಕಟಿಸಿದೆ.

ಜಲ್ಲಿಕಟ್ಟು ಸಿನಿಮಾ

9 ವರ್ಷಗಳ ನಂತರ ಸಲೀಮ್ ಅಹಮದ್ ಅವರ ಆಡಮಿಂಟೆ ಮಕನ್ ಅಬು (ಅಬು, ಸನ್ ಆಫ್ ಆಡಮ್) ನಂತರ ಮಲಯಾಳಂ ಚಿತ್ರವನ್ನು ಆಸ್ಕರ್​ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲು ಆಯ್ಕೆ ಮಾಡಲಾಗಿದೆ.

ಆಂಟನಿ ವರ್ಗೀಸ್, ಚೆಂಬನ್ ವಿನೋದ್ ಮತ್ತು ಸಂತಿ ಬಾಲಚಂದ್ರನ್ ಮುಖ್ಯ ಪಾತ್ರದಲ್ಲಿ ನಟಿಸಿರುವ ಜಲ್ಲಿಕಟ್ಟು ಚಿತ್ರ, ಹರೀಶ್ ಅವರ ಮಾವೋವಾದಿ ಎಂಬ ಸಣ್ಣ ಕಥೆಯನ್ನು ಆಧರಿಸಿದೆ. ಈ ಕಥೆಯು ತಪ್ಪಿಸಿಕೊಂಡ ಎಮ್ಮೆ ಮತ್ತು ಪ್ರಾಣಿಗಳ ಮಾಂಸಕ್ಕಾಗಿ ಗ್ರಾಮಸ್ಥರ ಕಠಿಣ ಹೋರಾಟದ ಸುತ್ತ ಸುತ್ತುತ್ತದೆ.

ಲಿಜೋ ಜೋಸ್ ಪೆಲ್ಲಿಸ್ಸೆರಿ 2019ರಲ್ಲಿ ನಡೆದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಜಲ್ಲಿಕಟ್ಟು ಚಿತ್ರಕ್ಕಾಗಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಪಡೆದಿದ್ದರು.

Last Updated : Nov 25, 2020, 6:53 PM IST

ABOUT THE AUTHOR

...view details