ಮಕ್ಕಳು ಏನೇ ತಪ್ಪು ಮಾಡಿದರೂ ತಾಯಿ ಆ ತಪ್ಪನ್ನು ಮುಚ್ಚಿಡಲು ಪ್ರಯತ್ನಿಸುತ್ತಾಳೆ. ಆದರೆ ಇಲ್ಲಿ ಮಗ ಮಾಡಿದ ತಪ್ಪಿಗೆ ತಾಯಿಯೊಬ್ಬರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಮಗನ ವಿರುದ್ಧವೇ ಪೊಲೀಸರಿಗೆ ದೂರು ನೀಡಿದ ನಟಿ..ಆತ ಮಾಡಿದ ತಪ್ಪಾದ್ರೂ ಏನು..? - ಮಾಲ ಪಾರ್ವತಿ ಪುತ್ರ ಅನಂತ್ ಕೃಷ್ಣನ್
ಮಲಯಾಲಂ ನಟಿ ಮಾಲ ಪಾರ್ವತಿ ತನ್ನ ಪುತ್ರ ಅನಂತ್ ಕೃಷ್ಣನ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಮೇಕಪ್ ಆರ್ಟಿಸ್ಟ್ ಜೊತೆ ಪುತ್ರ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ಆರೋಪ ಕೇಳಿ ಬಂದ ಹಿನ್ನೆಲೆ ಪಾರ್ವತಿ ದೂರು ಸಲ್ಲಿಸಿದ್ದಾರೆ.
ಮಲಯಾಳಂ ನಟಿ ಮಾಲ ಪಾರ್ವತಿ ಎಂಬುವವರು ತಮ್ಮ ಪುತ್ರ ಅನಂತ್ ಕೃಷ್ಣನ್ ಮೇಲೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಸೀಮಾ ವಿನೀತ್ ಎಂಬ ತೃತೀಯಲಿಂಗಿ ಮೇಕಪ್ ಆರ್ಟಿಸ್ಟ್ ಬಳಿ ತಮ್ಮ ಪುತ್ರ ಅನಂತ್ ಕೆಟ್ಟದಾಗಿ ನಡೆದುಕೊಂಡಿದ್ದಾರೆ ಎಂಬ ಕಾರಣಕ್ಕೆ ಪಾರ್ವತಿ ಹೀಗೆ ಮಾಡಿದ್ದಾರೆ. ಮೇಕಪ್ ಆರ್ಟಿಸ್ಟ್ ಸೀಮಾ ವಿನೀತ್, ಅನಂತ್ ಕೃಷ್ಣನ್ ನನಗೆ ಅಸಭ್ಯ ಫೋಟೋ ಹಾಗೂ ಸಂದೇಶ ಕಳಿಸುತ್ತಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದರು. ವಿಷಯ ತಿಳಿದ ಕೂಡಲೇ ಪಾರ್ವತಿ ಅವರು ಸೀಮಾಗೆ ಕರೆ ಮಾಡಿ ಕ್ಷಮೆ ಕೇಳಿದ್ದರು. ಅಷ್ಟೇ ಅಲ್ಲ ತಾವೇ ಸ್ವತ: ಪೊಲೀಸ್ ಠಾಣೆಗೆ ತೆರಳಿ ದೂರು ಸಲ್ಲಿಸಿದ್ದರು.
'ಸೀಮಾ ವಿನೀತ್ ಹಾಗೂ ಅನಂತ್ ಬಹಳ ವರ್ಷಗಳಿಂದ ಸ್ನೇಹಿತರು. ನಾನು ಸೀಮಾ ಜೊತೆ ಅಸಭ್ಯವಾಗಿ ವರ್ತಿಸಿಲ್ಲ ಎಂದು ಮಗ ನನ್ನ ಬಳಿ ಹೇಳಿಕೊಂಡಿದ್ದಾನೆ. ಆದರೆ ನಿಜ ಏನು ಎಂಬುದು ಹೊರಗೆ ಬರಬೇಕು. ಈ ಕಾರಣಕ್ಕಾಗಿ ನಾನೇ ಖುದ್ದು ಪೊಲೀಸರಿಗೆ ದೂರು ನೀಡಿದ್ದೇನೆ. ಅನಂತ್ ಬಳಸುತ್ತಿದ್ದ ಮೊಬೈಲ್ ಈಗ ಪೊಲೀಸರ ಬಳಿ ಇದೆ. ನಾನು ಸೀಮಾ ಪರ ನಿಂತಿದ್ದೇನೆ. ಹಾಗೆಂದ ಮಾತ್ರಕ್ಕೆ ಮಗನ ವಿರುದ್ಧ ಇಲ್ಲ. ಒಂದು ವೇಳೆ ನನ್ನ ಮಗ ನಿಜವಾಗಲೂ ತಪ್ಪು ಮಾಡಿದ್ದಲ್ಲಿ ಅವರಿಗೆ ಶಿಕ್ಷೆ ಆಗಲಿ' ಎಂದು ಪಾರ್ವತಿ ಹೇಳಿದ್ದಾರೆ.