ಕೊರೊನಾ ವೈರಸ್ಗೆ ಇಡೀ ದೇಶವೇ ತತ್ತರಿಸಿ ಹೋಗಿದೆ. ರಾಜ್ಯದಲ್ಲಿಯೂ ಇದರ ಆರ್ಭಟ ಹೆಚ್ಚಾಗುತ್ತಿದ್ದು, ದಿನವೊಂದಕ್ಕೆ ನೂರಾರು ಜನ ಈ ಹೆಮ್ಮಾರಿಗೆ ಪ್ರಾಣ ಚೆಲ್ಲುತ್ತಿದ್ದಾರೆ. ಇದೀಗ ನಟಿ ಮಾಳವಿಕಾ ಅವಿನಾಶ್, ಪತ್ರಕರ್ತರಂತೆ ಸಿನಿಮಾ ಕಲಾವಿದರನ್ನೂ ಫ್ರೆಂಟ್ಲೈನ್ ವಾರಿಯರ್ಸ್ ಅಂತ ಪರಿಗಣಿಸಿ ಎಂದು ಸಿಎಂಗೆ ಮನವಿ ಮಾಡಿಕೊಂಡಿದ್ದಾರೆ.
ಸಿನಿಮಾ ಕಲಾವಿದರನ್ನೂ ಫ್ರೆಂಟ್ಲೈನ್ ವಾರಿಯರ್ಸ್ ಅಂತ ಪರಿಗಣಿಸಿ: ಸಿಎಂಗೆ ಮಾಳವಿಕಾ ಮನವಿ - cinema acters consder as to be a corona warriors
ಪತ್ರಕರ್ತರಂತೆ ಸಿನಿಮಾ ಕಲಾವಿದರನ್ನೂ ಫ್ರೆಂಟ್ಲೈನ್ ವಾರಿಯರ್ಸ್ ಅಂತ ಪರಿಗಣಿಸಿ ಎಂದು ನಟಿ ಮಾಳವಿಕಾ ಅವಿನಾಶ್ ಅವರು ಸಿಎಂಗೆ ಮನವಿ ಮಾಡಿಕೊಂಡಿದ್ದಾರೆ.
![ಸಿನಿಮಾ ಕಲಾವಿದರನ್ನೂ ಫ್ರೆಂಟ್ಲೈನ್ ವಾರಿಯರ್ಸ್ ಅಂತ ಪರಿಗಣಿಸಿ: ಸಿಎಂಗೆ ಮಾಳವಿಕಾ ಮನವಿ Malavika Avinash](https://etvbharatimages.akamaized.net/etvbharat/prod-images/768-512-11806871-thumbnail-3x2-sanju.jpg)
ಮಾಳವಿಕಾ ಅವಿನಾಶ್
ನಟಿ ಮಾಳವಿಕಾ ಅವಿನಾಶ್
ಕೇಂದ್ರ ಸರ್ಕಾರ 18 ರಿಂದ 45 ವರ್ಷ ಮೇಲ್ಪಟ್ಟವರು ಕೂಡ ಕೊರೊನಾ ಲಸಿಕೆಯನ್ನ ಹಾಕಿಸಿಕೊಳ್ಳಬೇಕು ಎಂದು ತಿಳಿಸಿದೆ. ಈಗಾಗಲೇ ಲಕ್ಷಾಂತರ ಜನ ಕೊರೊನಾ ಲಸಿಕೆಯನ್ನ ಹಾಕಿಸಿಕೊಂಡಿದ್ದಾರೆ. ಹೀಗಾಗಿ ಸಿನಿಮಾ ಕಾರ್ಮಿಕರು, ತಂತ್ರಜ್ಞಾನರು, ಕಲಾವಿದರು ಸೇರಿದಂತೆ ಪ್ರತಿಯೊಬ್ಬರು ಲಸಿಕೆ ಹಾಕಿಸಿಕೊಳ್ಳಬೇಕು ಎಂದು ನಟಿ ಮಾಳವಿಕಾ ಅವಿನಾಶ್ ಕೇಳಿಕೊಂಡಿದ್ದಾರೆ.