ತಮಿಳು ಹಿರಿಯ ನಟ ಮತ್ತು ಮಕ್ಕಳ್ ನೀಧಿ ಮಯ್ಯಂ ಪಕ್ಷದ ಸಂಸ್ಥಾಪಕ ಕಮಲ್ ಹಾಸನ್ ದೀರ್ಘಕಾಲದ ಸಹೋದ್ಯೋಗಿ ರಜನಿಕಾಂತ್ರನ್ನು ಭೇಟಿಯಾಗಿದ್ದಾರೆ. ರಜನಿ ರಾಜಕೀಯಕ್ಕೆ ಪ್ರವೇಶಿಸುವುದಿಲ್ಲ ಎಂದು ಕೆಲವು ವಾರಗಳ ಹಿಂದೆ ಘೋಷಿಸಿದ್ದು, ಇದೀಗ ಇಬ್ಬರು ಗಣ್ಯರ ಭೇಟಿ ಕುತೂಹಲ ಕೆರಳಿಸಿದೆ. ಆದ್ರೆ ಸದ್ಯ ನಡೆದ ಸಭೆಯಯಲ್ಲಿ ಯಾವುದೇ ರಾಜಕೀಯ ಸಂಬಂಧಿ ಚರ್ಚೆಗಳು ನಡೆದದಿಲ್ಲ ಎಂದು ಮೂಲಗಳು ತಿಳಿಸಿವೆ.
ರಜನಿಯನ್ನು ಭೇಟಿಯಾದ ಕಮಲ್ ಹಾಸನ್ - ರಜನಿಕಾಂತ್ ಸುದ್ದಿ
ತಮಿಳು ಹಿರಿಯ ನಟ ಮತ್ತು ಮಕ್ಕಳ್ ನೀಧಿ ಮಯ್ಯಂ ಪಕ್ಷದ ಸಂಸ್ಥಾಪಕ ಕಮಲ್ ಹಾಸನ್ ದೀರ್ಘಕಾಲದ ಸಹೋದ್ಯೋಗಿ ರಜನಿಕಾಂತ್ರನ್ನು ಭೇಟಿಯಾಗಿದ್ದಾರೆ.
![ರಜನಿಯನ್ನು ಭೇಟಿಯಾದ ಕಮಲ್ ಹಾಸನ್ ರಜನಿಯನ್ನು ಭೇಟಿಯಾದ ಕಮಲ್ ಹಾಸನ್](https://etvbharatimages.akamaized.net/etvbharat/prod-images/768-512-10703855-thumbnail-3x2-giri.jpg)
ರಜನಿಯನ್ನು ಭೇಟಿಯಾದ ಕಮಲ್ ಹಾಸನ್
ಕಳೆದ ಡಿಸೆಂಬರ್ನಲ್ಲಿ ರಜನಿಕಾಂತ್ ತಮ್ಮ ರಾಜಕೀಯ ಪಕ್ಷವನ್ನು ಪ್ರಾರಂಭಿಸುವುದಾಗಿ ಹೇಳಿದ್ದರು. ಆದ್ರೆ ಅವರ ಆರೋಗ್ಯದಲ್ಲಿ ಏರುಪೇರಾದ ಕಾರಣ ಸದ್ಯದ ಮಟ್ಟಿಗೆ ನಾನು ರಾಚಕೀಯಕ್ಕೆ ಬರುವುದಿಲ್ಲ ಎಂದು ಹೇಳಿದ್ದರು.
ಮತ್ತೊಂದೆಡೆ ಕಮಲ್ ಹಾಸನ್ ರಾಜಕೀಯ ಪಕ್ಷವನ್ನು 2018ರಲ್ಲಿ ಪ್ರಾರಂಭಿಸಿದ್ದು, ಈಗಾಗಲೇ ಮಕ್ಕಳ್ ನೀಧಿ ಮಯ್ಯಂ ಪಕ್ಷವು ಚುನಾವಣಾ ಪ್ರಚಾರದಲ್ಲಿ ತೊಡಗಿದೆ. ಕೆಲ ದಿನಗಳ ಹಿಂದೆ ಕಮಲ್ ಹಾಸನ್ ಪ್ರಚಾರಕ್ಕಾಗಿ ರಜನಿಕಾಂತ್ ಅವರ ಬೆಂಬಲವನ್ನು ಪಡೆಯುವುದಾಗಿ ಹೇಳಿದ್ದರು.