ಸ್ಯಾಂಡಲ್ವುಡ್ಗೆ ಸಾಕಷ್ಟು ಹೊಸಬರು ಹೊಸ ಕಾನ್ಸೆಪ್ಟ್ ಇಟ್ಟುಕೊಂಡು ಬರುತ್ತಿದ್ದಾರೆ. ಈಗ ಇಲ್ಲೊಂದು ಹೊಸ ಟೀಂ, 'ತ್ರಿನೇತ್ರಂ' ಎಂಬ ಟೈಟಲ್ನೊಂದಿಗೆ ಗಾಂಧಿನಗರಕ್ಕೆ ಎಂಟ್ರಿ ಕೊಟ್ಟಿದೆ. 'ತ್ರಿನೇತ್ರಂ' ಅಂದ್ರೆ ಮೂರು ಕಣ್ಣುಗಳು ಎಂದರ್ಥ.
ಮಂಗಳಮುಖಿ ಕುರಿತ 'ತ್ರಿನೇತ್ರಂ' ಚಿತ್ರಕ್ಕೆ ಯುವ ನಿರ್ದೇಶಕನಿಂದ ಆ್ಯಕ್ಷನ್ ಕಟ್ - ಯುವ ನಿರ್ದೇಶಕ ಮನು ಗೌಡ
ತಮಿಳು ಚಿತ್ರರಂಗದ ಮೇಕಪ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ ಮನು ಕುಮಾರ್ ಎಂಬುವವರು ಇದೀಗ ಕನ್ನಡದಲ್ಲಿ 'ತ್ರಿನೇತ್ರಂ' ಎಂಬ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾ ಮಂಗಳಮುಖಿ ಕುರಿತ ಸಿನಿಮಾವಾಗಿದೆ.
ಇದು ನಾಯಕ, ನಾಯಕಿ ಹಾಗೂ ಒಬ್ಬ ಮಂಗಳಮುಖಿ ನಡುವೆ ನಡೆಯುವ ಕಥೆ. ತಮ್ಮ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಯುವ ನಿರ್ದೇಶಕ ಮನು ಕುಮಾರ್, ಯುವ ನಟ ಅರ್ಪಿತ್ ಗೌಡ, ಕವಿತಾ ಗೌಡ, ಸುಶಾಂತ್ ಹಾಗೂ 'ತ್ರಿನೇತ್ರಂ' ತಂಡ ಮಾಧ್ಯಮದ ಮುಂದೆ ಉಪಸ್ಥಿತಿ ಇದ್ದರು. ತಮಿಳು ಚಿತ್ರರಂಗದ ಮೇಕಪ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ ಮನುಗೌಡ, ಈ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳುವ ಮೂಲಕ ನಿರ್ದೇಶಕನಾಗಿ ಬಡ್ತಿ ಪಡೆಯುತ್ತಿದ್ದಾರೆ. ಮಡಿಕೇರಿಯ ಮಂಗಳಮುಖಿಯೊಬ್ಬರ ಕಥೆಯನ್ನು ನಿರ್ದೇಶಕರು ತೆರೆ ಮೇಲೆ ತರಲು ರೆಡಿ ಇದ್ದಾರೆ.
ಈ ಸಿನಿಮಾ ಮೂಲಕ ಕವಿತಾ ಗೌಡ ನಾಯಕಿಯಾಗಿ ಹಾಗೂ ನಿರ್ಮಾಪಕಿಯಾಗಿ ಎಂಟ್ರಿ ಕೊಡುತ್ತಿದ್ದಾರೆ. ಇನ್ನು ಮಂಗಳಮುಖಿ ಪಾತ್ರದಲ್ಲಿ ಯುವ ಪ್ರತಿಭೆ ಸುಶಾಂತ್ ಗೌಡ ನಟಿಸುತ್ತಿದ್ದಾರೆ. ಖಳ ನಾಯಕನಾಗಿ ಗೋವಿಂದ ರಾಜ್ ಎಂಬುವವರು ನಟಿಸುತ್ತಿದ್ದಾರೆ. ರಾಘವೇಂದ್ರ ವಿ. ಈ ಚಿತ್ರಕ್ಕೆ ಐದು ಹಾಡುಗಳನ್ನು ಕಂಪೋಸ್ ಮಾಡಿದ್ದು, ವಿನಯ್ ಕೊಪ್ಲ ಸಂಭಾಷಣೆ ಬರೆದಿದ್ದಾರೆ. ಮುಂದಿನ ವಾರದಿಂದ ಮಡಿಕೇರಿ, ಮೈಸೂರು, ಮಂಡ್ಯ ಭಾಗಗಳಲ್ಲಿ ಚಿತ್ರದ ಶೂಟಿಂಗ್ ಜರುಗಲಿದೆ.