ಕರ್ನಾಟಕ

karnataka

ETV Bharat / sitara

ನಗಿಸುವ ಟ್ಯಾಲೆಂಟ್ ಇದ್ರೆ​​ ಮಜಾಭಾರತದಲ್ಲಿದೆ ಸುವರ್ಣಾವಕಾಶ... ಆಡಿಶನ್​ ಹೇಗೆ ನಡೆಯುತ್ತೆ? - ​​ ಮಜಾಭಾರತ

ನಿಮಗೆ ನಗಿಸುವ ಟ್ಯಾಲೆಂಟ್​​ ಇದ್ರೆ ಇಲ್ಲಿದೆ ಸುವರ್ಣಾವಕಾಶ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮಜಾ ಭಾರತ ಕಾರ್ಯಕ್ರಮದಕ್ಕೆ ಆಡಿಷನ್​​​ ನಡೆಯುತ್ತಿದ್ದು ನಿಮಗೆ ಆಸಕ್ತಿ ಇದ್ದರೆ ಭಾಗವಹಿಸಿ.

majabarata audition
ನಗಿಸುವ ಟ್ಯಾಲೆಂಟ್​​ ಮಜಾಭಾರತದಲ್ಲಿದೆ ಸುವರ್ಣಾವಕಾಶ

By

Published : Apr 22, 2020, 7:39 AM IST

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮಜಾ ಭಾರತ ಕಾರ್ಯಕ್ರಮದ ಹೊಸ ಸೀಸನ್ ಆರಂಭವಾಗಲಿದೆ. ಅದಕ್ಕಾಗಿ ಆಡಿಶನ್ ಕೂಡಾ ನಡೆಯಲಿದೆ. ಅರೇ...! ಲಾಕ್ ಡೌನ್​ ಸಮಯದಲ್ಲಿ ಆಡಿಶನ್ ಮಾಡ್ತಾರಾ? ಎಂದು ಆಶ್ವರ್ಯ ಪಡಬೇಡಿ. ಯಾಕೆಂದರೆ ಈ ಆಡಿಶನ್ ನೀವು ಅಟೆಂಡ್​​ ಮಾಡಬೇಕಾದುದು ನಿಮ್ಮ ಮನೆಯಿಂದಲೇ.

ಕಾಮಿಡಿ ಮಾಡುವ ಮೂಲಕ ನಿಮ್ಮ ಸುತ್ತ ಮುತ್ತ ಇರುವವರನ್ನು ನೀವು ನಗಿಸಬಲ್ಲಿರಾ? ಆ ಟ್ಯಾಲೆಂಟ್ ನಿಮಗಿದ್ದರೆ ಸಾಕು ನೀವು ಈ ಆಡಿಷನ್​ಲ್ಲಿ ಭಾಗವಹಿಸಬಹುದು.

ಅಂದ ಹಾಗೇ ನೀವು ಈ ಆಡಿಶನ್​ನಲ್ಲಿ ಭಾಗವಹಿಸಲು ಮಾಡಬೇಕಾದದ್ದು ಇಷ್ಟೇ. ನೀವು ಮಾಡಿದ ಕಾಮಿಡಿ ಪ್ರಹಸನದ ವಿಡಿಯೋ ತುಣುಕನ್ನು ವಾಟ್ಸ್​​ ಆ್ಯಪ್​ ಮಾಡಿದರೆ ಆಡಿಶನ್ ಕಂಪ್ಲೀಟ್ ಆದಂತೆ.

ನೆನಪಿನಲ್ಲಿಡಿ ವಿಡಿಯೋದ ಜೊತೆಗೆ ನೀವು ಬರೆದಂತಹ ಸ್ಕ್ರಿಪ್ಟ್​​​ನ ಪ್ರತಿಯನ್ನು 9980296737 ನಂಬರ್​​ಗೆ ವಾಟ್ಸ್ ಆ್ಯಪ್​ ಮಾಡಿ. ಆಡಿಶನ್​ನಲ್ಲಿ ಆಯ್ಕೆಯಾದವರನ್ನು ವಾಹಿನಿಯವರೇ ನೇರವಾಗಿ ಸಂಪರ್ಕಿಸುತ್ತಾರೆ. ಗಮನಿಸಿ, ನೀವು ಕಳಿಸುವ ವಿಡಿಯೋ ಕೇವಲ ಒಂದು ನಿಮಿಷದ್ದಾಗಿರಲಿ. ಡಬ್ಬಿಂಗ್ ಮಾಡಿರುವಂತಹ ವಿಡಿಯೋಗಳಿಗೆ ಅವಕಾಶವಿಲ್ಲ.

ABOUT THE AUTHOR

...view details