ಕರ್ನಾಟಕ

karnataka

ETV Bharat / sitara

ನಗುವಿನ ಅಲೆ ಎಬ್ಬಿಸಲು ಆಗಸ್ಟ್‌ 29 ರಿಂದ ಬರ್ತಿದೆ‌ 'ಮಜಾ ಟಾಕೀಸ್' - ಮಜಾ ಟಾಕೀಸ್​

ಮಸ್ತ್​-ಮಸ್ತ್​ ಕಾಮಿಡಿಗಳ ಮೂಲಕ ಹಾಸ್ಯಪ್ರಿಯರ ಮನಗೆದ್ದ ಮಜಾ ಟಾಕೀಸ್​ ಇದೀಗ ಮತ್ತೆ ನಗುವಿನ ಅಲೆ ಎಬ್ಬಿಸಲು ಸಜ್ಜಾಗಿದ್ದು,ಇದೇ ಆ. 29 ರಿಂದ ಮಜಾ ಟಾಕೀಸ್​-3 ಆರಂಭವಾಗಲಿದೆ.

maja talkies season three date announce
ಕನ್ನಡದ ಜನಪ್ರಿಯ ಕಾಮಿಡಿ ಶೋ

By

Published : Aug 21, 2020, 10:32 PM IST

ಬೆಂಗಳೂರು: ಕನ್ನಡದ ಜನಪ್ರಿಯ ಕಾಮಿಡಿ ಶೋ ಮಜಾ ಟಾಕೀಸ್ ಸೀಸನ್- 3 ಸದ್ಯದಲ್ಲೇ ಪ್ರಸಾರವಾಗಲಿದೆ ಎಂಬ ಮಾತು ಕಿರುತೆರೆ ವೀಕ್ಷಕರಿಗೆಲ್ಲಾ ತಿಳಿದಿರುವ ವಿಚಾರ. ಆದರೆ ಯಾವಾಗ ಪ್ರಾರಂಭವಾಗುತ್ತೆ ಎಂಬ ಕುತೂಹಲ ವೀಕ್ಷಕರಿಗೆ, ಅದರಲ್ಲೂ ಮಜಾ ಟಾಕೀಸ್ ಪ್ರಿಯರಿಗಿತ್ತು. ಇದೀಗ ವೀಕ್ಷಕರ ಕುತೂಹಲಕ್ಕೆ ಫುಲ್ ಸ್ಟಾಪ್ ಇಟ್ಟಿದ್ದಾರೆ ಮಜಾ ಟಾಕೀಸ್ ರೂವಾರಿ ಸೃಜನ್ ಲೋಕೇಶ್.

ಸೃಜನ್ ಲೋಕೇಶ್‌

ಮುಂದಿನ ವಾರಾಂತ್ಯ ಅಂದರೆ ಆಗಸ್ಟ್ 29ರಂದು ಮಾಜಾ ಟಾಕೀಸ್ ಸೀಸನ್ 3 ರ ಮೊದಲ ಸಂಚಿಕೆ ಪ್ರಸಾರ ಕಾಣಲಿದೆ. ತದ ನಂತರ ಪ್ರತಿ ವಾರಾಂತ್ಯ ರಾತ್ರಿ 8 ಗಂಟೆಗೆ ಮಜಾ ಟೀಮ್ ನಿಮ್ಮ ಮನೆ ಮನದಲ್ಲಿ ನಗುವಿನ ಅಲೆ ಹರಿಸಲಿದೆ.

ಹಿಂದಿಯ ಕಾಮಿಡಿ ಟಾಕ್ ಶೋ ಕಾಫಿ ವಿತ್ ಕರಣ್ ನ ರಿಮೇಕ್ ಆದ ಮಜಾ ಟಾಕೀಸ್ ತನ್ನ ವಿಭಿನ್ನವಾದ ಹಾಸ್ಯದೊಂದಿಗೆ ಕನ್ನಡಿಗರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ಪ್ರತಿ ಸಂಚಿಕೆಯಲ್ಲೂ ನವಿರಾದ ಹಾಸ್ಯ, ಸೆಲೆಬ್ರಿಟಿ ಅತಿಥಿಗಳ ಮಾತುಕತೆ ನಡೆಸುವ ಮಜಾ ಟಾಕೀಸ್ ಹಿಂದೆ 500 ಸಂಚಿಕೆಗಳನ್ನು ಪೂರೈಸಿತ್ತು.

ಹೀಗಾಗಿ ಈ ಶೋ ಮರಳಿ ಹೊಸ ಸೀಸನ್ ನೊಂದಿಗೆ ಬರುತ್ತಿರುವುದು ಕಿರುತೆರೆ ವೀಕ್ಷಕರ ಸಂತಸ ಹೆಚ್ಚಿಸಿದೆ. ಮಜಾ ಟಾಕೀಸ್ ನ ಹೊಸ ಪ್ರೋಮೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇಷ್ಟು ದಿನ ತೆರೆಯ ಮೇಲೆ ಮಾತಿನ ಮಲ್ಲ, ಟಾಕಿಂಗ್ ಸ್ಟಾರ್ ಸೃಜನ್ ಅವರನ್ನು ಮಿಸ್ ಮಾಡುತ್ತಿದ್ದ ಜನರಿಗೆ ಮುಂದಿನ ವಾರಾಂತ್ಯದಿಂದ ಅವರನ್ನು ಕಾಣುವ ಅವಕಾಶ ಸಿಗಲಿದೆ.

ABOUT THE AUTHOR

...view details