ಮಜಾ ಟಾಕೀಸ್ ರಾಣಿ ಎಂದೇ ಜನಪ್ರಿಯರಾಗಿರುವ ಶ್ವೇತಾ ಚಂಗಪ್ಪ ಇದೀಗ ಡಬ್ಬಲ್ ಖುಷಿಯಲ್ಲಿದ್ದಾರೆ! ಯಾಕಂತೀರಾ? ಅದಕ್ಕೆ ಕಾರಣ ಹುತ್ತರಿ ಹಬ್ಬ. ಕೊಡಗಿನಾದ್ಯಂತ ಹುತ್ತರಿ ಹಬ್ಬವನ್ನು ಬಹಳ ಅದ್ಧೂರಿಯಾಗಿ ಆಚರಿಸುತ್ತಾರೆ. ಹೊಸ ಅಕ್ಕಿ, ಭತ್ತದ ಕದಿರನ್ನು ಮನೆಗೆ ತರುವ ಸುಗ್ಗಿ ಹಬ್ಬವಾಗಿರುವ ಹುತ್ತರಿ ಎಂದರೆ ಫೇಮಸ್ಸು. ವ್ಯವಸಾಯವನ್ನೇ ನಂಬಿರುವಂತಹ ಕೊಡವರು ಈ ಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಿಸುತ್ತಾರೆ.
ಮುದ್ದು ಮಗನ ಜೊತೆ ಮಜಾ ಟಾಕಿಸ್ ರಾಣಿಯಿಂದ ಕೊಡವ ಡ್ಯಾನ್ಸ್ - ಮಜಾ ಟಾಕೀಸ್ ಶ್ವೇತ
ಹುತ್ತರಿ ಹಬ್ಬದ ಸಂತಸದಲ್ಲಿರುವ ಮಜಾ ಟಾಕೀಸ್ ರಾಣಿ ಶ್ವೇತಾ ಈ ವರ್ಷದ ಹಬ್ಬವನ್ನು ಬಹಳ ಸಂಭ್ರಮ, ಸಡಗರದಿಂದ ಆಚರಣೆ ಮಾಡುತ್ತಿದ್ದಾರೆ. ಅದಕ್ಕೆ ಕಾರಣ ಅವರ ಮುದ್ದು ರಾಜಕುಮಾರ. ಶ್ವೇತಾ ಗಂಡು ಮಗುವಿಗೆ ಜನ್ಮ ನೀಡಿದ್ದು, ಅವರ ಮಗನಿಗೆ ಇದು ಮೊದಲನೇ ಹುತ್ತರಿ ಹಬ್ಬ ಎಂದು ಬಹಳ ಹುರುಪಿನಿಂದ ಹೇಳಿದ್ದಾರೆ.

ತಮ್ಮ ಇನ್ಸ್ಟಾಗ್ರಾಂನಲ್ಲಿ ಒಂದು ವಿಡಿಯೋವನ್ನು ಶ್ವೇತಾ ಚಂಗಪ್ಪ ಹಾಕಿದ್ದು, "ಎಲ್ಲರಿಗೂ ಹುತ್ತರಿ ಹಬ್ಬದ ಶುಭಾಶಯಗಳು. ಇದು ನನ್ನ ಮಗನ ಮೊದಲ ಹುತ್ತರಿ ಹಬ್ಬದ ಸೆಲಬ್ರೇಶನ್. ನಿಮ್ಮ ಪ್ರೀತಿ ಮತ್ತು ಆಶೀರ್ವಾದ ಸದಾ ಕಾಲ ಅವನ ಮೇಲೆ ಇರಬೇಕು. ಜೊತೆಗೆ ಇದೇ ಮೊದಲ ಬಾರಿಗೆ ಅಮ್ಮನೊಂದಿಗೆ ಡ್ಯಾನ್ಸ್ ಮಾಡುತ್ತಿದ್ದಾನೆ. ಬಹಳ ಸಂತಸದಿಂದ ನಾನು ಈ ವಿಡಿಯೋ ಶೇರ್ ಮಾಡುತ್ತಿದ್ದೇನೆ" ಎಂದು ಬರೆದುಕೊಂಡಿದ್ದಾರೆ. ಆದರೆ ಅವರು ಎಲ್ಲಿಯೂ ತಮ್ಮ ಮುದ್ದು ರಾಜಕುಮಾರನ ಮುಖವನ್ನು ತೋರಿಸಿಲ್ಲ.