ETV Bharat Karnataka

ಕರ್ನಾಟಕ

karnataka

ETV Bharat / sitara

'ಜೋಗಿ' ಸಿನಿಮಾ ಸಕ್ಸಸ್​​​​​​​ಗೆ ಕಾರಣವಾದ ಪ್ರಮುಖ ಅಂಶಗಳಿವು - Mother son sentiment film Jogi

ಅಭಿನಯದ ಓಂ ಸಿನಿಮಾ ಇತ್ತೀಚೆಗೆ 25 ವರ್ಷಗಳನ್ನು ಪೂರೈಸಿತ್ತು. ಇದೀಗ 2005 ರಲ್ಲಿ ಬಿಡುಗಡೆಯಾದ ಅಮ್ಮ-ಮಗನ ಸೆಂಟಿಮೆಂಟ್ ಇರುವ 'ಜೋಗಿ' ಸಿನಿಮಾ 15 ವಸಂತಗಳನ್ನು ಪೂರೈಸಿದೆ.

Jogi movie successful
'ಜೋಗಿ'
author img

By

Published : Aug 20, 2020, 1:18 PM IST

2005 ರಲ್ಲಿ ತೆರೆ ಕಂಡು ಬ್ಲಾಕ್ ಬ್ಲಸ್ಟರ್ ಸೂಪರ್ ಹಿಟ್ ಆದ ಚಿತ್ರ 'ಜೋಗಿ'. ಪ್ರೇಮ್ ನಿರ್ದೇಶನದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯಿಸಿರುವ ಜೋಗಿ ಚಿತ್ರಕ್ಕೆ 15ನೇ ವರ್ಷದ ಸಂಭ್ರಮ. ಈ ಕೊರೊನಾ ಸಮಸ್ಯೆ ಇಲ್ಲದಿದ್ರೆ ಬಹುಶ: ಈ ಸಿನಿಮಾ ಮತ್ತೆ ರೀ ರಿಲೀಸ್ ಆಗುವ ಸಾಧ್ಯತೆ ಇತ್ತು.

ಶಿವರಾಜ್ ಕುಮಾರ್ ಅಭಿಮಾನಿಗಳು ಜೋಗಿ ಸಿನಿಮಾದ 15ನೇ ವರ್ಷದ ಸಂಭ್ರಮವನ್ನು ವಿಶೇಷವಾದ ಡಿಪಿ ತಯಾರಿಸುವ ಮೂಲಕ ಸೋಷಿಯಲ್ ಮೀಡಿಯಾ ಮೂಲಕ ಆಚರಿಸಿದ್ದಾರೆ. ಜೋಗಿ ಸಿನಿಮಾ ಸೂಪರ್ ಹಿಟ್ ಆಗೋದಿಕ್ಕೆ, ಕಾರಣ ಏನು..? ಎಷ್ಟು ಕೋಟಿ ಬಜೆಟ್​​​​​​​​​​​​​​ನಲ್ಲಿ ಈ ಸಿನಿಮಾ ನಿರ್ಮಾಣ ಮಾಡಲಾಗಿತ್ತು...?ಈ ಚಿತ್ರದ ಕಥೆಗೆ ಯಾರು ಸ್ಫೂರ್ತಿ..? ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.

ಸಿಹಿ ಜೊತೆಗೆ ಆನಂದ ಹಂಚಿಕೊಂಡ ಶಿವಣ್ಣ, ಪ್ರೇಮ್
  • ಜೋಗಿ ಸಿನಿಮಾ ಶತಕ ಬಾರಿಸೋಕೆ ಮುಖ್ಯ ಕಾರಣ, ಶಿವರಾಜ್ ಕುಮಾರ್ ಮುಗ್ಧ ನಟನೆ, ಜೊತೆಗೆ ಹಿರಿಯ ನಟಿ ಆರುಂಧತಿ ನಾಗ್ ಅವರ ಅಮೋಘ ಅಭಿನಯ. ನೂರು ಸಿನಿಮಾಗಳ ಸರದಾರ ಅಂತಾ ಕರೆಸಿಕೊಂಡಿರುವ ಹ್ಯಾಟ್ರಿಕ್ ಹೀರೊಗೆ 2005ರಲ್ಲಿ ರಾಕ್ಷಸ ಹಾಗು ವಾಲ್ಮೀಕಿ ಸಿನಿಮಾಗಳು ಸೋಲಿನ ಕಹಿ ನೀಡಿತ್ತು. ಆ ಟೈಮಲ್ಲಿ ರಿಲೀಸ್ ಆದ ಜೋಗಿ ಚಿತ್ರ, ಶಿವರಾಜ್ ಕುಮಾರ್​​​​​​​​​​​​​​​​​​​​​​​ಗೆ, ದೊಡ್ಡ ಮಟ್ಟದ ಯಶಸ್ಸಿನ‌ ಜೊತೆಗೆ ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ ನಿರ್ಮಿಸುವಂತೆ ಮಾಡಿತು.
  • ಡಾ. ರಾಜ್​​​​​​​​​​​​​ಕುಮಾರ್, ಪಾರ್ವತಮ್ಮ ರಾಜ್​​​​​​ಕುಮಾರ್ ಹಾಗೂ ರೆಬಲ್ ಸ್ಟಾರ್ ಅಂಬರೀಶ್ ಜೋಗಿ ಚಿತ್ರಕ್ಕೆ ಕ್ಲ್ಯಾಪ್ ಮಾಡಿದ್ದರು. ಅಂದು ಅಣ್ಣಾವ್ರು ಈ ಸಿನಿಮಾ ಹಿಟ್ ಆಗುತ್ತೆ ಅಂತಾ ನಿರ್ದೇಶಕ ಜೋಗಿ ಪ್ರೇಮ್ ಬಳಿ ಹೇಳಿದ್ರು. ತಾಯಿ-ಮಗನ ಸೆಂಟಿಮೆಂಟ್ ಕಥೆ ಜೊತೆಗೆ, ಕೆಸರು ಗದ್ದೆಯಲ್ಲಿ ಶಿವರಾಜ್ ಕುಮಾರ್ ಹಾಗೂ ಅರುಂಧತಿ ನಾಗ್ ಹಾಕಿದ ಸ್ಟೆಪ್ಸ್​​​​​​ ಆ ದಿನಗಳಲ್ಲಿ ಬಹಳ ಫೇಮಸ್ ಆಗಿತ್ತು.
    ಶಿವರಾಜ್​ಕುಮಾರ್
  • ರೌಡಿಸಂ, ಕಥೆ ಜೊತೆಗೆ ತಾಯಿ ಪ್ರೀತಿ ಹೊಂದಿದ್ದ ಜೋಗಿ ಸಿನಿಮಾ, ಬರೋಬ್ಬರಿ 65ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸೆಂಚುರಿ ಬಾರಿಸಿತ್ತು. ಅಷ್ಟೇ ಅಲ್ಲ ಶಿವರಾಜ್ ಕುಮಾರ್ ಹೇರ್​ಸ್ಟೈಲ್​ ಹಾಗೂ ಕಾಸ್ಟ್ಯೂಮನ್ನು ನಂತರ ಬಂದ ಹಲವಾರು ಸಿನಿಮಾಗಳಲ್ಲಿ ಬಳಸಿಕೊಳ್ಳಲಾಗಿದೆ. ಕರಿಯ ಹಾಗೂ ಎಕ್ಸ್​​​​​​​​​​​​​​​​​​​​​ಕ್ಯೂಜ್ ಮಿ ಸಿನಿಮಾ ಮಾಡಿ ಗಮನ ಸೆಳೆದಿದ್ದ ನಿರ್ದೇಶಕ ಪ್ರೇಮ್, ಈ ಸಿನಿಮಾ ಮೂಲಕ ಹ್ಯಾಟ್ರಿಕ್ ಡೈರೆಕ್ಟರ್ ಅಂತಾ ಅನಿಸಿಕೊಂಡರು.
  • ಜೋಗಿ ಸಿನಿಮಾ ಕಥೆಗೆ ಸ್ಫೂರ್ತಿ, ನಿರ್ದೇಶಕ ಪ್ರೇಮ್ ತಾಯಿ ಭಾಗ್ಯಮ್ಮ. ಹೀಗಾಗಿ ಈ ಪಾತ್ರವನ್ನು ಹಿರಿಯ ನಟಿ ಅರುಂಧತಿ ನಾಗ್ ಅವ್ರ ಕೈಯಲ್ಲಿ ಮಾಡಿಸಬೇಕು ಅಂದುಕೊಂಡಿದ್ರಂತೆ. ಅದೇ ರೀತಿ ಪ್ರೇಮ್ ತಮ್ಮ ತಾಯಿಯನ್ನು ಸ್ಫೂರ್ತಿಯಾಗಿ ಇಟ್ಟುಕೊಂಡು ಅರುಂಧತಿ ನಾಗ್ ಕೈಯಲ್ಲಿ ಈ ಪಾತ್ರ ಮಾಡಿಸುವಲ್ಲಿ ಯಶಸ್ವಿಯಾದರು.
    ಜೋಗಿ ಮುಹೂರ್ತ ಸಮಾರಂಭ
  • ಈ ಚಿತ್ರದ ಮತ್ತೊಂದು ಹೈಲೆಟ್ಸ್ ಅಂದ್ರೆ, ಸಂಗೀತ ನಿರ್ದೇಶಕ ಗುರು ಕಿರಣ್ ಅವರ ಸೂಪರ್ ಹಿಟ್ ಹಾಡುಗಳು. ಪ್ರೇಮ್ ತಮ್ಮ ತಾಯಿಯನ್ನು ನೆನೆದು ಹಾಡುವ 'ಬೇಡುವೆನು ವರವನ್ನು ಕೊಡೆ ತಾಯಿ ಜನ್ಮವನು' ಹಾಡು ಎಷ್ಟು ಫೇಮಸ್ ಆಗಿತ್ತೆಂದರೆ ಕೆಲವು ವರ್ಷಗಳ ಕಾಲ ಯಾವುದೇ ಕಾರ್ಯಕ್ರಮ ನಡೆದರೂ ಈ ಹಾಡನ್ನು ತಪ್ಪದೆ ಪ್ಲೇ ಮಾಡಲಾಗುತ್ತಿತ್ತು.
  • ಇದೆಲ್ಲದರ ಜೊತೆಗೆ ಜೋಗಿ ಸಿನಿಮಾ ಹಿಟ್ ಆಗಲು ಮತ್ತೊಂದು ಪ್ರಮುಖ ಕಾರಣ ಈ ಚಿತ್ರದ ಡೈಲಾಗ್​​​ಗಳು. ಸಂಭಾಷಣೆಕಾರ ಮಳವಳ್ಳಿ ಸಾಯಿಕೃಷ್ಣ ಅವರ ಕಿಕ್ ಕೊಡುವ ಡೈಲಾಗ್ ಗಳು ಈ ಚಿತ್ರಕ್ಕೆ ಜೀವಾಳ ಆಗಿದ್ದವು.
  • 2005ರಲ್ಲಿ ನಿರ್ಮಾಪಕ ಕೃಷ್ಣ ಪ್ರಸಾದ್ ಆ ಕಾಲದಲ್ಲೇ ಬರೋಬ್ಬರಿ 8 ಕೋಟಿ ಬಜೆಟ್​​​​​​​​​​​ನಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದರು. ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಕೊಳ್ಳೆ ಹೊಡೆದಿದ್ದು ಬರೋಬ್ಬರಿ 16 ಕೋಟಿ ರೂಪಾಯಿ. ಇನ್ನು ಈ ಚಿತ್ರದಿಂದ ಟಿವಿ ರೈಟ್ಸ್, ರೀಮೇಕ್​​​​​ ರೈಟ್ಸ್ ಅಂತಾ ಸೇರಿ ಬರೋಬ್ಬರಿ 20 ಕೋಟಿ ರೂಪಾಯಿ ಲಾಭ ಆಗಿತ್ತು.
    ತೆಲುಗು ಸಿನಿಮಾ ಯೋಗಿ
  • ಜೋಗಿ ಚಿತ್ರ ಸೂಪರ್ ಹಿಟ್ ಆದ ನಂತರ ತೆಲುಗಿನಲ್ಲಿ‌ ರೀಮೇಕ್ ಮಾಡಲಾಯಿತು. ಡಾರ್ಲಿಂಗ್ ಪ್ರಭಾಸ್‌ ಅಭಿನಯದ 'ಯೋಗಿ' ಸಿನಿಮಾವೇ ಕನ್ನಡ ಜೋಗಿ ಚಿತ್ರ. ಈ ಚಿತ್ರದ ಮೂಲಕ, ಆದಿ ಲೋಕೇಶ್, ನಟಿ ಜೆನಿಫರ್ ಕೊತ್ವಾಲ್, ಗಾಯಕ ಗುರುರಾಜ್ ಹೊಸಕೋಟೆ, ಸೇರಿದಂತೆ ಹಲವಾರು ಕಲಾವಿದರು ಫೇಮಸ್ ಆದ್ರು.
  • ಹೀಗೆ ಹಲವಾರು ವಿಶೇಷತೆಗಳನ್ನು ಹೊಂದಿರುವ ಜೋಗಿ ಸಿನಿಮಾದ 15ನೇ ವರ್ಷದ, ಸಂಭ್ರಮವನ್ನು ನಿರ್ದೇಶಕ ಪ್ರೇಮ್ , ಶಿವರಾಜ್ ಕುಮಾರ್​​ಗೆ ಸಿಹಿ ತಿನ್ನಿಸುವ ಮೂಲಕ ಆಚರಿಸಿಕೊಂಡಿದ್ದಾರೆ.

ABOUT THE AUTHOR

...view details