'ಡಿಯರ್ ಡ್ರಗ್ಸ್..ನಿನ್ನ ಅಗತ್ಯತೆ ನನಗಿಲ್ಲ. ಈಗಾಗಲೇ ನಾನು ಮಹೇಶ್ ಬಾಬು ವ್ಯಸನಿ ಆಗಿಬಿಟ್ಟಿದ್ದೇನೆ'. ಹೀಗೊಂದು ವಿಶೇಷವಾದ ಸಂದೇಶವೊಂದು ಸೌತ್ ಸೂಪರ್ ಸ್ಟಾರ್ ಮಹೇಶ್ ಬಾಬು ಅವರಿಗೆ ಬಂದಿದೆ.
ಈ ಮೇಲಿನ ಸಾಲು ಟಾಲಿವುಡ್ ಪ್ರಿನ್ಸ್ ಮೇಲಿರುವ ಪ್ರೀತಿಯನ್ನು ಸಾರುತ್ತಿದೆ. ಹೀಗೆ ಈ ಹ್ಯಾಂಡ್ಸಮ್ ಹಂಕ್ಗೆ ಸಾಗರದಷ್ಟು ಪ್ರೀತಿಯ ಧಾರೆಯೆರೆದಿರುವುದು ಅವರ ಪತ್ನಿ ನಮ್ರತಾ ಶಿರೋಡ್ಕರ್.
ಹೌದು, ಟಾಲಿವುಡ್ನ ಕ್ಯೂಟ್ ಕಪಲ್ಗಳಲ್ಲಿ ಮಹೇಶ್-ನಮ್ರತಾ ಜೋಡಿಯು ಒಂದು. ಈ ಸ್ವೀಟ್ ಕಪಲ್ ದಾಂಪತ್ಯ ಜೀವನಕ್ಕೆ ಕಾಲಿಟ್ಟು 14 ವರ್ಷಗಳು ತುಂಬಿವೆ. ಇಂದಿಗೂ ಕೂಡ ಎಂದೂ ಬತ್ತದ ಪ್ರೀತಿಯ ಚಿಲುಮೆಯಂತಿದೆ ಈ ದಂಪತಿ.
ಪತಿ ಪ್ರಿನ್ಸ್ ಅವರನ್ನು ಎಲ್ಲಿಲ್ಲದಂತೆ ಪ್ರೀತಿಸುವ ನಮ್ರತಾ, ನಿನ್ನೆ 'ಡಿಯರ್ ಡ್ರಗ್ಸ್..ನಿನ್ನ ಅಗತ್ಯತೆ ನನಗಿಲ್ಲ. ಈಗಾಗಲೇ ನಾನು ಮಹೇಶ್ ಬಾಬು ವ್ಯಸನಿ ಆಗಿಬಿಟ್ಟಿದ್ದೇನೆ' ಎನ್ನುವ ಫೋಸ್ಟ್ ಮಾಡಿ ಪತಿ ಮೇಲಿನ ಪ್ರೀತಿಯನ್ನು ಸೋಷಿಯಲ್ ಮೀಡಿಯಾದಲ್ಲಿ ತೋರ್ಪಡಿಸಿದ್ದಾರೆ.
ಕಳೆದ ಕೆಲ ದಿನಗಳಿಂದ ಮಹೇಶ್ ಬಾಬು ಅಭಿಮಾನಿಗಳು 'ಡಿಯರ್ ಡ್ರಗ್ಸ್..ನಿನ್ನ ಅಗತ್ಯತೆ ನನಗಿಲ್ಲ. ಈಗಾಗಲೇ ನಾನು ಮಹೇಶ್ ಬಾಬು ವ್ಯಸನಿ ಆಗಿಬಿಟ್ಟಿದ್ದೇನೆ, ಎನ್ನುವ ಅಭಿಯಾನ ಪ್ರಾರಂಭಿಸಿದ್ದಾರೆ. ಈ ಮೂಲಕ ನಾವು ಪಕ್ಕಾ ಪ್ರಿನ್ಸ್ ಫ್ಯಾನ್ಸ್. ನಮಗೆ ಅವರೇ ಎಲ್ಲಾ, ಮತ್ತಿನ್ನೇನೂ ಬೇಕಿಲ್ಲ ಎಂದು ಸಾರಿ ಸಾರಿ ಹೇಳುತ್ತಿದ್ದಾರೆ. ಅಭಿಮಾನಿಗಳು ಈ ಅಭಿನಾಯಕ್ಕೆ ಪ್ರಿನ್ಸ್ ಪತ್ನಿ ಕೂಡ ಸಾಥ್ ಕೊಟ್ಟಿದ್ದಾರೆ.