ಕರ್ನಾಟಕ

karnataka

ETV Bharat / sitara

ಆ ಎರಡು ಸಮಸ್ಯೆಗಳಿಂದ ಒದ್ದಾಡುತ್ತಿದೆ ಮಹರ್ಷಿ ಸಿನಿಮಾ...! - ಅಲ್ಲರಿ ನರೇಶ್

ಹಲವಾರು ಬಾರಿ ಚಿತ್ರದ ಬಿಡುಗಡೆ ದಿನಾಂಕ ಮುಂದೂಡುತ್ತಲೇ ಬಂದಿರುವ ಮಹರ್ಷಿ ಚಿತ್ರತಂಡ ಈಗ ಮೇ 9ಕ್ಕೆ ಥಿಯೇಟರ್ ಅಂಗಳಕ್ಕೆ ಬರುವುದಾಗಿ ಘೋಷಣೆ ಮಾಡಿದೆ. ಆದ್ರೆ ಹಾಡುಗಳ ಚಿತ್ರೀಕರಣ ಹಾಗೂ ವಿದೇಶದಲ್ಲಿ ಚಿತ್ರ ವಿತರಣೆ ಸಮಸ್ಯೆಯನ್ನು ಮಹರ್ಷಿ ಎದುರಿಸುತ್ತಿದ್ದಾನೆ ಎಂದು ಹೇಳಲಾಗಿದೆ.

ಮಹರ್ಷಿ

By

Published : Apr 2, 2019, 1:35 AM IST

ಟಾಲಿವುಡ್​ ಸೂಪರ್​​ಸ್ಟಾರ್​ ಮಹೇಶ್​ ಬಾಬು ಅಭಿನಯದ 25ನೇ ಸಿನಿಮಾ ಮಹರ್ಷಿ ಶೂಟಿಂಗ್​ನ ಕೊನೆ ಹಂತದಲ್ಲಿದೆ. ಈ ನಡುವೆ ಎರಡು ಸಮಸ್ಯೆಯಿಂದ ಪ್ರಿನ್ಸ್ ಹೊಸ ಚಿತ್ರ ಒದ್ದಾಡುತ್ತಿದೆ.

ಹಲವು ಬಾರಿ ಚಿತ್ರದ ಬಿಡುಗಡೆ ದಿನಾಂಕ ಮುಂದೂಡುತ್ತಲೇ ಬಂದಿರುವ ಮಹರ್ಷಿ ಚಿತ್ರತಂಡ, ಸದ್ಯಕ್ಕೆ ಮೇ 9ಕ್ಕೆ ಥಿಯೇಟರ್ ಅಂಗಳಕ್ಕೆ ಬರುವುದಾಗಿ ಘೋಷಣೆ ಮಾಡಿದೆ.ಶೂಟಿಂಗ್ ಕೊನೆ ಹಂತದಲ್ಲಿದ್ದು, ಕೆಲ ಹಾಡುಗಳ ಚಿತ್ರೀಕರಣ ಮಾತ್ರ ಬಾಕಿ ಇದೆ. ಏಪ್ರಿಲ್ ಮೊದಲ ವಾರ ಚಿತ್ರದ ಪ್ರಥಮ ಪ್ರತಿ ಸಿದ್ಧವಾಗಲಿದೆ ಎಂದು ಚಿತ್ರತಂಡ ಹೇಳಿಕೊಂಡಿತ್ತು. ಆದರೆ ಮೂಲಗಳ ಪ್ರಕಾರ ಮಹರ್ಷಿ ಚಿತ್ರೀಕರಣ ಮುಕ್ತಾಯವಾಗಲು ಇನ್ನೂ ಮೂರು ವಾರಗಳು ಬೇಕು ಎನ್ನಲಾಗಿದೆ.

ಮಹರ್ಷಿ ಸಿನಿಮಾದ ಪೋಸ್ಟರ್​​

ಹಾಡುಗಳ ಶೂಟಿಂಗ್​​ ಅನ್ನಪೂರ್ಣ ಸ್ಟುಡಿಯೋದಲ್ಲಿ ಮುಗಿಸಿ ಪ್ರಿನ್ಸ್ ಟೀಮ್​​ ಅಬುದಾಬಿಯಲ್ಲಿ ಮಾತಿನ ಭಾಗದ ಶೂಟಿಂಗ್ ನಡೆಸಲಿದೆ ಎನ್ನುವ ಸುದ್ದಿ ಕೇಳಿಬಂದಿದೆ.

ಮಹಿರ್ಷಿ ಸಿನಿಮಾದ ಮತ್ತೊಂದು ಸಮಸ್ಯೆ ಎಂದರೆ ಅದು ಹೊರದೇಶದ ವಿತರಣೆಯ ಹಕ್ಕು. ನಿರ್ಮಾಪಕರು ಹೊರದೇಶದ ವಿತರಣೆ ಹಕ್ಕಿಗೆ 18 ಕೋಟಿ ನಿಗದಿಪಡಿಸಿದ್ದಾರೆ. ಇಷ್ಟೊಂದು ಮೊತ್ತವನ್ನು ಭರಿಸಲು ಇಲ್ಲಿಯವರೆಗೆ ಯಾವುದೇ ವಿತರಕರು ಮುಂದೆ ಬಂದಿಲ್ಲ. ಹೀಗಾಗಿ ನಿರ್ಮಾಪಕರು 12 ಕೋಟಿಗೆ ಇಳಿಕೆ ಮಾಡಿದ್ದಾರೆ. ಒಂದು ವೇಳೆ 12 ಕೋಟಿ ಸಿಗದಿದ್ದಲ್ಲಿ ನಿರ್ಮಾಪಕರೇ ಹೊರದೇಶದ ವಿತರಣೆ ಮಾಡಲಿದ್ದಾರೆ ಎನ್ನಲಾಗಿದೆ.

ಮಹರ್ಷಿ ಸಿನಿಮಾದ ಪೋಸ್ಟರ್​​

ಮಹರ್ಷಿ ಚಿತ್ರದಲ್ಲಿ ಮಹೇಶ್ ಬಾಬು, ಅಲ್ಲರಿ ನರೇಶ್ ಹಾಗೂ ಪೂಜಾ ಹೆಗ್ಡೆ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ವಂಶಿ ಪೈಡಿಪಲ್ಲಿ ಒಂದೊಳ್ಳೆ ಸಾಮಾಜಿಕ ಸಂದೇಶವಿರುವ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಅಶ್ವಿನಿ ದತ್​, ದಿಲ್​ ರಾಜು ಹಾಗೂ ಪ್ರಸಾದ್ ವಿ ಪೊಟ್ಲೂರಿ ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ.

ABOUT THE AUTHOR

...view details