ಕರ್ನಾಟಕ

karnataka

ETV Bharat / sitara

ಪ್ರಿನ್ಸ್​​​​ ಅಭಿಮಾನಿಗಳಿಗೆ ಹಬ್ಬದೂಟದಂತಿದೆ 'ಸರಿಲೇರು ನೀಕೆವ್ವರು' ಟೀಸರ್​..! - ಸರಿಲೇರು ನೀಕೆವ್ವರು ಟೀಸರ್ ರಿಲೀಸ್

ಅನಿಲ್ ರವಿಪುಡಿ ನಿರ್ದೇಶನದ ಈ ಚಿತ್ರದಲ್ಲಿ ಮಹೇಶ್​ ಬಾಬುಗೆ ಜೋಡಿಯಾಗಿ ಕನ್ನಡತಿ ರಶ್ಮಿಕಾ ಮಂದಣ್ಣ ನಟಿಸಿದ್ದಾಳೆ. ಆದರೆ, ಟೀಸರ್​ನಲ್ಲಿ ರಶ್ಮಿಕಾ ಒಂದು ದೃಶ್ಯದಲ್ಲೂ ಕಾಣಿಸಿಲ್ಲ ಎನ್ನುವುದು ವಿಶೇಷ.

ಮಹೇಶ್​ ಬಾಬು

By

Published : Nov 22, 2019, 6:37 PM IST

ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ನಟನೆಯ 'ಸರಿಲೇರು ನೀಕೆವ್ವರು' ಚಿತ್ರದ ಟೀಸರ್ ಇಂದು ಬಿಡುಗಡೆಯಾಗಿದೆ. ಪಕ್ಕಾ ಮಾಸ್ ಮಸಾಲ ಚಿತ್ರದ ಟೀಸರ್​​ನಲ್ಲಿ ಪ್ರಿನ್ಸ್​ ಡೈಲಾಗ್​ ಡೆಲಿವರಿ ಅಭಿಮಾನಿಗಳನ್ನು ರಂಜಿಸುತ್ತಿದೆ.

ಸೈನಿಕರ ನಿಸ್ವಾರ್ಥ ಸೇವೆಯನ್ನ ಹಿನ್ನೆಲೆಯಲ್ಲಿ ಹೇಳುತ್ತಾ ಸಾಗುವ ಮಹೇಶ್ ಬಾಬು ಸಹ ಕೆಲ ಸೆಕೆಂಡ್ ಆರ್ಮಿ ಡ್ರೆಸ್​​ನಲ್ಲಿ ಕಾಣಿಸುತ್ತಾರೆ. ನಂತರದಲ್ಲಿ ಪೋಷಕ ಪಾತ್ರಧಾರಿಗಳಾದ ವಿಜಯಶಾಂತಿ, ರಾಜೇಂದ್ರ ಪ್ರಸಾದ್ ಹಾಗೂ ಹಿರಿಯ ನಟ ಪ್ರಕಾಶ್ ರೈ ಅವರನ್ನು ಟೀಸರ್​ನಲ್ಲಿ ತೋರಿಸಲಾಗಿದೆ.

ಟೀಸರ್​​ನಲ್ಲಿ ಡೈಲಾಗ್​ನಷ್ಟೇ ದೇವಿಶ್ರೀ ಪ್ರಸಾದ್ ಹಿನ್ನಲೆ ಸಂಗೀತ ಧೂಳೆಬ್ಬಿಸುತ್ತಿದೆ. ಸ್ಟಾರ್ ಹೀರೋಗೆ ಅಗತ್ಯವಾದ ಅಬ್ಬರ ಮ್ಯೂಸಿಕ್​​ ಝಲಕ್​​ ಟೀಸರ್​​ನಲ್ಲಿ ಕೇಳಿಸುತ್ತಿದೆ. ರತ್ನವೇಲು ಸಿನಿಮಾಟೋಗ್ರಫಿ ಟೀಸರ್​​​ನಲ್ಲಿ ಮತ್ತೊಂದು ಉಲ್ಲೇಖನೀಯ ಅಂಶ. ಮಹೇಶ್ ಬಾಬು ಈ ಚಿತ್ರದಲ್ಲಿ ಮೇಜರ್ ಅಜಯ್ ಕೃಷ್ಣ ಪಾತ್ರದಲ್ಲಿ ನಟಿಸಿದ್ದಾರೆ.

ಅನಿಲ್ ರವಿಪುಡಿ ನಿರ್ದೇಶನದ ಈ ಚಿತ್ರದಲ್ಲಿ ಮಹೇಶ್​ ಬಾಬುಗೆ ಜೋಡಿಯಾಗಿ ಕನ್ನಡತಿ ರಶ್ಮಿಕಾ ಮಂದಣ್ಣ ನಟಿಸಿದ್ದಾಳೆ. ಆದರೆ, ಟೀಸರ್​ನಲ್ಲಿ ರಶ್ಮಿಕಾ ಒಂದೇ ಒಂದು ದೃಶ್ಯದಲ್ಲೂ ಕಾಣಿಸಿಲ್ಲ ಎನ್ನುವುದು ವಿಶೇಷ.

'ಸರಿಲೇರು ನೀಕೆವ್ವರು' ಚಿತ್ರವನ್ನು ಸ್ವತಃ ಹೀರೋ ಮಹೇಶ್ ಬಾಬು, ದಿಲ್ ರಾಜು ಹಾಗೂ ರಾಮಬ್ರಹ್ಮಂ ಸುಂಕಾರ ನಿರ್ಮಾಣ ಮಾಡಿದ್ದಾರೆ. ಈ ಬಹುನಿರೀಕ್ಷಿತ ಸಿನಿಮಾ 2020ರ ಸಂಕ್ರಾಂತಿ ಹಬ್ಬಕ್ಕೆ(ಜ.12) ತೆರೆಗಪ್ಪಳಿಸಲಿದೆ. ಆದರೆ, ಇದೇ ದಿನದಂದು ಅಲ್ಲು ಅರ್ಜುನ್​​​​​ ನಟನೆಯ 'ಅಲಾ ವೈಕುಂಠಪುರಮ್ಲೋ' ಚಿತ್ರ ಸಹ ರಿಲೀಸ್​ ಆಗಲಿದೆ.

ABOUT THE AUTHOR

...view details