'ಸರಿಲೇರು ನೀಕೆವರು' ಮಹೇಶ್ ಬಾಬು ಅಭಿನಯದ 26ನೇ ಸಿನಿಮಾ. ಕನ್ನಡತಿ ರಶ್ಮಿಕಾ ಮಂದಣ್ಣ ಈ ಸಿನಿಮಾದಲ್ಲಿ ಮಹೇಶ್ಗೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಅನಿಲ್ ರಾವಿಪೂಡಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.
ಲೀಕ್ ಆಯ್ತು ಮಹೇಶ್ ಬಾಬು ಅಭಿನಯದ 'ಸರಿಲೇರು ನೀಕೆವರು' ಶೂಟಿಂಗ್ ಸೆಟ್ ಪೋಟೋ - undefined
ಅನಿಲ್ ರಾವಿಪೂಡಿ ನಿರ್ದೇಶನದಲ್ಲಿ ಟಾಲಿವುಡ್ ಸೂಪರ್ಸ್ಟಾರ್ ಮಹೇಶ್ ಬಾಬು ನಟಿಸುತ್ತಿರುವ 'ಸರಿಲೇರು ನೀಕೆವರು' ಚಿತ್ರದ ಶೂಟಿಂಗ್ ಸೆಟ್ ಫೋಟೋವೊಂದು ಲೀಕ್ ಆಗಿದೆ. ಮಹೇಶ್ ಬಾಬು ಈ ಫೋಟೋದಲ್ಲಿ ಮಿಲಿಟರಿ ಯೂನಿಫಾರ್ಮ್ ಧರಿಸಿದ್ದಾರೆ.
ಮಹೇಶ್ ಬಾಬು ಶೂಟಿಂಗ್ ಸೆಟ್ನಲ್ಲಿರುವ ಫೋಟೋವೊಂದು ಲೀಕ್ ಆಗಿದೆ. ಈ ಪೋಟೋದಲ್ಲಿ ಮಹೇಶ್ಬಾಬು ಮಿಲ್ಟ್ರಿ ಅಧಿಕಾರಿಯ ಕಾಸ್ಟ್ಯೂಮ್ನಲ್ಲಿ ಇದ್ದಾರೆ. ಸೆಟ್ನಲ್ಲಿ ತಮ್ಮ ಸಹನಟರೊಂದಿಗೆ ಮಹೇಶ್ ಸೀರಿಯಸ್ ಆಗಿ ಚರ್ಚಿಸುತ್ತಿರುವಂತೆ ಕಾಣುತ್ತಿದೆ . ಶೂಟಿಂಗ್ ನೋಡಲು ಹೋದ ಅಭಿಮಾನಿಯೊಬ್ಬರು ಮಹೇಶ್ ಫೋಟೋ ಕ್ಲಿಕ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ. ಈ ಫೋಟೋ ಈಗ ವೈರಲ್ ಆಗಿದೆ. ಇದಕ್ಕೂ ಮುನ್ನ ಸಿನಿಮಾದ ಫೋಟೋಶೂಟ್ಗಾಗಿ ಮಹೇಶ್ ಈ ಮಿಲಿಟರಿ ಯೂನಿಫಾರ್ಮ್ ಧರಿಸಿದ್ದರು. ಆದರೆ ಚಿತ್ರದ ಶೂಟಿಂಗ್ ಫೋಟೋ ಲೀಕ್ ಆಗಿರುವುದು ಇದೇ ಮೊದಲು.
ಪ್ರಸ್ತುತ ಕಾಶ್ಮೀರದಲ್ಲಿ ಸಿನಿಮಾ ಚಿತ್ರೀಕರಣ ನಡೆಯುತ್ತಿದೆ ಎನ್ನಲಾಗಿದೆ. ಚಿತ್ರದಲ್ಲಿ ವಿಜಯಶಾಂತಿ ಕೂಡಾ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಮೂಲಕ ವಿಜಯಶಾಂತಿ ಸುಮಾರು 13 ವರ್ಷಗಳ ನಂತರ ಮತ್ತೆ ಆ್ಯಕ್ಟಿಂಗ್ಗೆ ವಾಪಸಾಗಿದ್ದಾರೆ. ಮುಂದಿನ ವರ್ಷ ಸಂಕ್ರಾತಿ ವೇಳೆಗೆ ಸಿನಿಮಾ ಬಿಡುಗಡೆಯಾಗಲಿದೆ.