ಇತ್ತೀಚಿನ ದಿನಗಳಲ್ಲಿ ಸೆಲಬ್ರಿಟಿಗಳು ಭೂಮಿ ಖರೀದಿಸಿ ವ್ಯವಸಾಯ ಮಾಡುವುದು ಟ್ರೆಂಡ್ ಆಗಿಹೋಗಿದೆ. ಅದರಲ್ಲೂ ಇವರೆಲ್ಲಾ ಸಾವಯವ ಕೃಷಿ ಪದ್ಧತಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿದ್ದಾರೆ. ಟಾಲಿವುಡ್ ಹೀರೋ ಮಹೇಶ್ ಬಾಬು ಕೂಡಾ ಜಮೀನು ಖರೀದಿಸಿದ್ದು ಪತ್ನಿ ನಮ್ರತಾ ಶಿರೋಡ್ಕರ್ ಇಲ್ಲಿ ಹಣ್ಣು, ತರಕಾರಿಗಳನ್ನು ಬೆಳೆಯುತ್ತಿದ್ದಾರೆ.
ತಮ್ಮ ಜಮೀನಿನ ತರಕಾರಿ ಬೆಳೆ ವಿಡಿಯೋ ಹಂಚಿಕೊಂಡ ಮಹೇಶ್ ಬಾಬು ಪತ್ನಿ - Mahesh babu land
ತಮ್ಮ ಜಮೀನಿನಲ್ಲಿ ಬೆಳೆದ ಹತ್ತಿ, ಬೆಂಡೆಕಾಯಿ, ಮೆಣಸಿನಕಾಯಿ ಬೆಳೆಯ ವಿಡಿಯೋವನ್ನು ಮಹೇಶ್ ಬಾಬು ಪತ್ನಿ ನಮ್ರತಾ ಶಿರೋಡ್ಕರ್ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಮನೆ ಬಳಕೆಗಾಗಿ ಈ ತರಕಾರಿ ಬೆಳೆಯುತ್ತಿದ್ದು ತಾಜಾ ತರಕಾರಿಗಳು ನನಗೆ ಇಷ್ಟ ಎಂದು ಬರೆದುಕೊಂಡಿದ್ದಾರೆ.
ಮಹೇಶ್ ಬಾಬು
ನಮ್ರತಾ ಶಿರೋಡ್ಕರ್ ಬಹಳ ಆಸಕ್ತಿ ವಹಿಸಿ ತಮ್ಮ ಜಮೀನಿನಲ್ಲಿ ತರಕಾರಿ ಬೆಳೆಯುತ್ತಿದ್ದಾರೆ. ಹಾಗೂ ತಾವು ಬೆಳೆದ ತರಕಾರಿಗಳ ವಿಡಿಯೋ ಮಾಡಿ ಅದನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ. ಮೆಣಸಿನಕಾಯಿ, ಟೊಮ್ಯಾಟೋ, ಬೆಂಡೆಕಾಯಿ ಹತ್ತಿ ಹಾಗೂ ಇನ್ನಿತರ ಬೆಳೆಗಳನ್ನು ನಮ್ರತಾ ತಮ್ಮ ಜಮೀನಿನಲ್ಲಿ ಬೆಳೆಯುತ್ತಿದ್ದಾರೆ. 'ಫಾರ್ಮ್ನಿಂದ ತರುವ ತಾಜಾ ತರಕಾರಿಗಳ ಮುಂದೆ ಬೇರೇನೂ ಇಲ್ಲ' ಎಂದು ನಮ್ರತಾ ಕ್ಯಾಪ್ಷನ್ ಹಾಕಿಕೊಂಡಿದ್ದಾರೆ. ಅಭಿಮಾನಿಗಳು ನಮ್ರತಾ ವಿಡಿಯೋಗೆ ಕಮೆಂಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.