ಏರ್ ಡೆಕ್ಕನ್ ಸಂಸ್ಥಾಪಕ ಜಿ.ಆರ್. ಗೋಪಿನಾಥ್ ಜೀವನ ಆಧಾರಿತ ಸಿನಿಮಾ 'ಸೂರರೈ ಪೊಟ್ರು' ಚಿತ್ರಕ್ಕೆ ಪ್ರೇಕ್ಷಕರಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಿನಿಮಾದಲ್ಲಿ ಸೂರ್ಯ ಹಾಗೂ ಅಪರ್ಣ ಬಾಲಮುರಳಿ ಅಭಿನಯಕ್ಕೆ ಸಿನಿಪ್ರಿಯರು ಫಿದಾ ಆಗಿದ್ದಾರೆ.
ನಟ ಸೂರ್ಯ ಆ್ಯಕ್ಟಿಂಗ್ಗೆ ಮಹೇಶ್ ಬಾಬು ಫಿದಾ...ಚಿತ್ರತಂಡಕ್ಕೆ ಅಭಿನಂದನೆ ಹೇಳಿದ ಪ್ರಿನ್ಸ್ - Mahesh babu praised Suriya acting
ಸುಧಾ ಕೊಂಗರ ನಿರ್ದೇಶನದ 'ಆಕಾಶಂ ನೀ ಹದ್ದುರಾ' ಸಿನಿಮಾ ನೋಡಿರುವ ಪ್ರಿನ್ಸ್ ಮಹೇಶ್ ಬಾಬು ಚಿತ್ರತಂಡಕ್ಕೆ ಅಭಿನಂದನೆ ಅರ್ಪಿಸಿದ್ದಾರೆ. ಸೂರ್ಯ ಆ್ಯಕ್ಟಿಂಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಟ್ವಿಟ್ಟರ್ನಲ್ಲಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಪ್ರೇಕ್ಷಕರು ಮಾತ್ರವಲ್ಲ, ಸೆಲಬ್ರಿಟಿಗಳು ಕೂಡಾ 'ಸೂರರೈ ಪೊಟ್ರು' ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು 'ಸೂರರೈ ಪೊಟ್ರು' ತೆಲುಗು ವರ್ಷನ್ 'ಆಕಾಶಂ ನೀ ಹದ್ದುರಾ' ಚಿತ್ರ ನೋಡಿ ಸೂರ್ಯ ಅವರ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ. ''ಆಕಾಶಂ ನೀ ಹದ್ದುರಾ ಒಂದು ಸ್ಫೂರ್ತಿದಾಯಕ ಸಿನಿಮಾ, ಸುಧಾ ಕೊಂಗರ ಅವರ ನಿರ್ದೇಶನ ಬಹಳ ಚೆನ್ನಾಗಿದೆ. ಸೂರ್ಯ ಅವರ ಆ್ಯಕ್ಟಿಂಗ್ ಅದ್ಭುತ, ಚಿತ್ರತಂಡಕ್ಕೆ ಅಭಿನಂದನೆಗಳು'' ಎಂದು ಮಹೇಶ್ ಬಾಬು ಟ್ವೀಟ್ ಮಾಡಿದ್ದಾರೆ. ಮಹೇಶ್ ಬಾಬು ಟ್ವೀಟ್ಗೆ ಪ್ರತಿಕ್ರಿಯಿಸಿರುವ ಸೂರ್ಯ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ. ''ಥ್ಯಾಂಕ್ಯೂ ಬ್ರದರ್, ನೀವು ನಟಿಸುತ್ತಿರುವ 'ಸರ್ಕಾರುವಾರಿ ಪಾಟ' ಚಿತ್ರಕ್ಕಾಗಿ ಎದುರು ನೋಡುತ್ತಿದ್ದೇನೆ'' ಎಂದು ರೀಟ್ವೀಟ್ ಮಾಡಿದ್ದಾರೆ.