ತೆಲಂಗಾಣದಲ್ಲಿ ಪಶು ವೈದ್ಯೆಯ ಅಮಾನವೀಯ ಅತ್ಯಾಚಾರ ಮತ್ತು ಕೊಲೆಯನ್ನು ಖಂಡಿಸಿ ತೆಲುಗು ನಟ ಮಹೇಶ್ ಬಾಬು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಟ್ವೀಟ್ ಮಾಡಿದ್ದಾರೆ.
ಪಶು ವೈದ್ಯೆ ಅತ್ಯಾಚಾರ ಕೊಲೆ ಖಂಡಿಸಿ ಮಹೇಶ್ ಬಾಬು ಟ್ವೀಟ್ - Mahesh Babu tweet about telangala rape issue
ತೆಲಂಗಾಣದಲ್ಲಿ ಪಶು ವೈದ್ಯೆಯ ಮೇಲಿನ ಅತ್ಯಾಚಾರ ಮತ್ತು ಕೊಲೆಯನ್ನು ಖಂಡಿಸಿ ತೆಲುಗು ನಟ ಮಹೇಶ್ ಬಾಬು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಟ್ವೀಟ್ ಮಾಡಿದ್ದಾರೆ.
![ಪಶು ವೈದ್ಯೆ ಅತ್ಯಾಚಾರ ಕೊಲೆ ಖಂಡಿಸಿ ಮಹೇಶ್ ಬಾಬು ಟ್ವೀಟ್ Mahesh Babu](https://etvbharatimages.akamaized.net/etvbharat/prod-images/768-512-5238580-thumbnail-3x2-giri.jpg)
ಟ್ವೀಟ್ನಲ್ಲಿ ಬರೆದುಕೊಂಡಿರುವ ಮಹೇಶ್ ಬಾಬು, ದಿನದಿಂದ ದಿನಕ್ಕೆ, ತಿಂಗಳಿನಿಂದ ತಿಂಗಳಿಗೆ, ವರ್ಷದಿಂದ ವರ್ಷಕ್ಕೆ ನಮ್ಮ ಸಮಾಜದಲ್ಲಿ ಏನೂ ಬದಲಾಗುತ್ತಿಲ್ಲ. ಸರ್ಕಾರಕ್ಕೆ ನನ್ನ ವೈಯಕ್ತಿಕ ಮನವಿ ಏನಂದ್ರೆ, ಇಂತಹ ಕೃತ್ಯಗಳನ್ನು ಎಸಗುವ ಕ್ರೂರಿಗಳಿಗೆ ಶಿಕ್ಷೆ ವಿಧಿಸುವಂತಹ ಕಠಿಣ ಕಾನೂನುಗಳನ್ನು ಜಾರಿಗೆ ತರಬೇಕು. ಈ ರೀತಿ ಹೇಳುತ್ತ ತೆಲಂಗಾಣ ಸರ್ಕಾರ ಮತ್ತು ಪ್ರಧಾನ ಮಂತ್ರಿ ಕಾರ್ಯಾಲಯಕ್ಕೆ ಟ್ವಿಟ್ ಟ್ಯಾಗ್ ಮಾಡಿದ್ದಾರೆ.
ಇನ್ನು ಮೃತ ದುರ್ದೈವಿಗೆ ಸಂತಾಪ ಸೂಚಿಸಿ, ಪಶು ವೈದ್ಯೆ ಕುಟುಂಬಕ್ಕೆ ಸಮಾಧಾನ ಮಾಡಿ ಟ್ವೀಟ್ ಮಾಡಿರುವ ಇವರು, ನಾವೆಲ್ಲರೂ ಒಟ್ಟುಗೂಡಿ ನ್ಯಾಯಕ್ಕಾಗಿ ಹೋರಾಟ ಮಾಡೋಣ. ದೇಶವನ್ನು ಸುರಕ್ಷತೆಯ ಕಡೆ ಸಾಗಿಸೋಣ ಎಂದಿದ್ದಾರೆ.