ಕರ್ನಾಟಕ

karnataka

ETV Bharat / sitara

ಶಿವರಾತ್ರಿ ಹಬ್ಬಕ್ಕೆ ಅಭಿಮಾನಿಗಳಿಗೆ ಶಾಕ್ ನೀಡಿದ ಟಾಲಿವುಡ್ ಪ್ರಿನ್ಸ್! - ಸುಕುಮಾರ್

ಸುಕುಮಾರ್ ಹಾಗೂ ಮಹೇಶ್ ಬಾಬು ಜೊತೆಯಾಗಿ '1 ನೇನೊಕ್ಕಡಿನೆ' ಸಿನಿಮಾ ಮಾಡಿದ್ದರು. ಚಿತ್ರದ ಕಥೆ ಉತ್ತಮವಾಗಿದ್ದರೂ ಗಳಿಕೆ ವಿಚಾರದಲ್ಲಿ ಮ್ಯಾಜಿಕ್ ಮಾಡಲಿಲ್ಲ. ಆ ಬಳಿಕ ಈ ಕಾಂಬಿನೇಷನ್​ನಲ್ಲಿ ಚಿತ್ರ ಮೂಡಿಬರುತ್ತಿದೆ. ಸುಕುಮಾರ್​ ಪ್ರಿನ್ಸ್​ಗಾಗಿ ವಿಶೇಷವಾಗಿ ಕಥೆ ಬರೆದಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು.

ಮಹೇಶ್ ಬಾಬು

By

Published : Mar 5, 2019, 12:24 PM IST

ಹಬ್ಬದ ದಿನ ಎಂದಾಗ ಸಿನಿವಲಯದಲ್ಲಿ ಹುರುಪು ತುಸು ಹೆಚ್ಚೇ ಇರುತ್ತದೆ. ಹೊಸ ಸಿನಿಮಾ ಘೋಷಣೆ, ಫಸ್ಟ್​ಲುಕ್ ರಿಲೀಸ್, ಟ್ರೇಲರ್ ಹೀಗೆ ಚಿತ್ರೋದ್ಯಮದ ಚಟುವಟಿಕೆ ಬಿರುಸಿನಿಂದ ಕೂಡಿರುತ್ತದೆ. ಆದರೆ ಶಿವರಾತ್ರಿ ಹಬ್ಬದ ಸಂದರ್ಭದಲ್ಲಿ ತೆಲುಗು ಸೂಪರ್​ಸ್ಟಾರ್​ ಮಹೇಶ್​ ಬಾಬು ಫ್ಯಾನ್ಸ್​ಗೆ ಶಾಕ್ ನೀಡಿದ್ದಾರೆ.

ಮಹೇಶ್​ ಬಾಬು ಹಾಗೂ ಸುಕುಮಾರ್ ನಿರ್ದೇಶನದಲ್ಲಿ ಮತ್ತೊಂದು ಸಿನಿಮಾ ಬರುತ್ತೆ ಅಂತ ಕಾದಿದ್ದವರಿಗೆ ಶಿವರಾತ್ರಿ ದಿನ ಸೂಪರ್​ಸ್ಟಾರ್ ಬೇಸರ ಸುದ್ದಿ ನೀಡಿದ್ದು, ನಮ್ಮಿಬ್ಬರಲ್ಲಿ ಸೃಜನಾತ್ಮಕ ಹೊಂದಾಣಿಕೆಯ ಸಮಸ್ಯೆ ಎನ್ನುವ ಕಾರಣ ನೀಡಿ ಚಿತ್ರದಿಂದ ಹೊರನಡೆದಿದ್ದಾರೆ.

ಒಂದು ಮೂಲಗಳ ಪ್ರಕಾರ ಸುಕುಮಾರ್ ಮಹೇಶ್ ಬಾಬುಗಾಗಿ ಐತಿಹಾಸಿಕ ಚಿತ್ರವನ್ನು ನಿರ್ದೇಶನ ಮಾಡುವ ಆಸೆ ಹೊಂದಿದ್ದರಂತೆ. ಅದ್ದೂರಿ ವೆಚ್ಚದಲ್ಲಿ ಈ ಚಿತ್ರ ಮೂಡಿಬರಲಿದೆ ಎನ್ನಲಾಗಿತ್ತು. ಆದರೆ ಇದು ಪ್ರಿನ್ಸ್​ಗೆ ಇಷ್ಟವಾಗಲಿಲ್ಲ ಎನ್ನುತ್ತವೆ ಟಾಲಿವುಡ್​ ಮೂಲಗಳು.

ಸದ್ಯ ಸುಕುಮಾರ್ ಚಿತ್ರದಲ್ಲಿ ನಟಿಸುತ್ತಿಲ್ಲ ಎಂದು ಮಹೇಶ್ ಬಾಬು ಟ್ವಿಟರ್​ ಖಾತೆಯಲ್ಲಿ ಅಧಿಕೃತವಾಗಿ ಘೋಷಿಸಿ ಎಲ್ಲ ಊಹಾಪೋಹಗಳಿಗೆ ಪೂರ್ಣ ವಿರಾಮ ಹಾಕಿದ್ದಾರೆ. ಮುಂದಿನ ದಿನಗಳಲ್ಲಿ ಸುಕುಮಾರ್ ಜೊತೆಗೆ ಸಿನಿಮಾ ಮಾಡುವ ಆಶಯವನ್ನು ಟ್ವೀಟ್​ನಲ್ಲಿ ಉಲ್ಲೇಖಿಸಿದ್ದಾರೆ.

ABOUT THE AUTHOR

...view details