ಹೈದರಬಾದ್:ಬಾಲ ನಟನಾಗಿ ಮುಗ್ಧ ಅಭಿನಯದಿಂದ ಚಿತ್ರರಂಗಕ್ಕೆ ಗ್ರ್ಯಾಂಡ್ ಎಂಟ್ರಿಕೊಟ್ಟಿದ್ದ, ಡಾ.ರಾಜ್ ಕುಮಾರ್ರ ಮುದ್ದಿನ ಮಗ ಪುನೀತ್ ರಾಜ್ ಕುಮಾರ್ ಹೃದಯಾಘಾತದಿಂದ ಅಸುನೀಗಿದ್ದಾರೆ. ಇವರ ಅಗಲಿಕೆಗೆ ಚಿತ್ರರಂಗದ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
ಪುನಿತ್ ರಾಜಕುಮಾರ್ ನಿಧನಕ್ಕೆ ಸಂತಾಪ ಮೆಗಾಸ್ಟಾರ್, ಮಹೇಶ್ಬಾಬು, ಜೂ.NTR ಸಂತಾಪ - ಪುನಿತ್ ರಾಜ್ ಕುಮಾರ್ ನಿಧನಕ್ಕೆ ಸಂತಾಪ ಸೂಚಿಸಿದ ಚಿರಜಿಂವಿ
ಈ ದಿನ ಅವರಿಲ್ಲ ಎಂದರೆ ನಂಬಲಸಾಧ್ಯವಾಗಿದೆ. ಈ ದಿನ ಅವರನ್ನು ಕಳೆದು ಕೊಂಡಿದ್ದಕ್ಕೆ ದುಃಖವಾಗಿದೆ. ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ. ದೇವರು ಅವರ ಕುಟುಂಬ ವರ್ಗಕ್ಕೆ ಹಾಗೂ ಅವರ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿ ತುಂಬಲಿ ಎಂದು ಮೆಗಾಸ್ಟಾರ್ ಚಿರಂಜೀವಿ ಸಂತಾಪ ಸೂಚಿಸಿದ್ದಾರೆ.
ಟ್ವೀಟ್ ಮಾಡಿ ಸಂತಾಪ ಸೂಚಿಸಿರುವ ತೆಲಗು ಮೆಗಾಸ್ಟಾರ್ ಚಿರಂಜೀವಿ, ಇದೊಂದು ಆಘಾತಕಾರಿ ಮತ್ತು ಹೃದಯವಿದ್ರಾವಕ ಘಟನೆ ಯಾಗಿದೆ. ಪುನೀತ್ ರಾಜ್ ಕುಮಾರ್ ಬೇಗ ಹೋದರು. Rest in Peace! ಆ ಕುಟುಂಬಕ್ಕೆ ನನ್ನ ಕಣ್ಣೀರಿನ ಸಂತಾಪ. ಒಟ್ಟಾರೆಯಾಗಿ ಕನ್ನಡ ಹಾಗೂ ಭಾರತೀಯ ಚಲನಚಿತ್ರ ಬಂಧುಗಳಿಗೆ ಒಂದು ದೊಡ್ಡ ನಷ್ಟ. ಈ ದುರಂತ ನಷ್ಟವನ್ನು ನಿಭಾಯಿಸುವ ಶಕ್ತಿ ಎಲ್ಲರಿಗೂ ನೀಡಲಿ ಎಂದು ಟ್ವೀಟ್ ಮಾಡಿದ್ದಾರೆ.
ಮತ್ತೊಬ್ಬ ತೆಲಗು ನಟ ಮಹೇಶ್ ಬಾಬು ಪುನಿತ್ ರಾಜ್ ಕುಮಾರ್ ನಿಧನವಾಗಿರುವ ಸುದ್ದಿ ಆಘಾತಕಾರಿ ಮತ್ತು ನಂಬಲು ಅಸಾಧ್ಯವಾದ ಸುದ್ದಿಯಾಗಿದೆ. ಪುನೀತ್ ರಾಜ್‌ಕುಮಾರ್ ಅವರ ನಿಧನದ ದುರಂತ ಸುದ್ದಿಯಿಂದ ಆಘಾತ ಮತ್ತು ತೀವ್ರ ದುಃಖವಾಗಿದೆ. ನಾನು ಭೇಟಿಯಾದ ಮತ್ತು ಸಂವಾದ ನಡೆಸಿದ ಅತ್ಯಂತ ವಿನಮ್ರ ವ್ಯಕ್ತಿಗಳಲ್ಲಿ ಪುನೀತ್ ಒಬ್ಬರು. ಅವರ ಕುಟುಂಬ ಮತ್ತು ಪ್ರೀತಿಪಾತ್ರರಿಗೆ ಸಂತಾಪಗಳು, ಎಂದು ಟ್ವೀಟ್ ಮಾಡಿದ್ದಾರೆ.