ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಅಭಿನಯದ 25ನೇ ಸಿನಿಮಾ 'ಮಹರ್ಷಿ' ಬಿಡುಗಡೆಗೆ ಇನ್ನು ಎರಡೇ ದಿನಗಳು ಬಾಕಿ ಇವೆ. ಅಭಿಮಾನಿಗಳು ಈಗಾಗಲೇ ಮುಂಗಡ ಟಿಕ್ಕೆಟ್ ಬುಕ್ಕಿಂಗ್ ಆರಂಭಿಸಿದ್ದು ಸಿನಿಮಾ ನೋಡಲು ಕಾಯುತ್ತಿದ್ದಾರೆ.
'ಮಹರ್ಷಿ' ದರ್ಶನಕ್ಕೆ ಎರಡೇ ದಿನ ಬಾಕಿ: ಟಿಕೆಟ್ ದರ ಹೆಚ್ಚಿಸಿದ ಥಿಯೇಟರ್ ಮಾಲೀಕರು..! - undefined
ವಂಶಿ ಪೈಡಿಪಲ್ಲಿ ನಿರ್ದೇಶನದ 'ಮಹರ್ಷಿ' ಸಿನಿಮಾ ಮೇ 9 ರಂದು ವಿಶ್ವಾದ್ಯಂತ ಬಿಡುಗಡೆಯಾಗುತ್ತಿದ್ದು ಹೈದರಾಬಾದ್ ಥಿಯೇಟರ್ಗಳಲ್ಲಿ ಮಾಲೀಕರು ಟಿಕೆಟ್ ದರವನ್ನು ಹೆಚ್ಚಿಸಿದ್ದಾರೆ.
ಇನ್ನು ಥಿಯೇಟರ್ ಮಾಲೀಕರು ಇದನ್ನೇ ಎನ್ಕ್ಯಾಶ್ ಮಾಡಿಕೊಳ್ಳಲು ನಿರ್ಧರಿಸಿದ್ದು ಟಿಕೆಟ್ ದರವನ್ನು ಹೆಚ್ಚಿಸಿದ್ದಾರೆ. ಹೈದರಾಬಾದ್ ಸಿಂಗಲ್ ಸ್ಕ್ರೀನ್ ಥಿಯೇಟರ್ ದರವನ್ನು 80 ರೂಪಾಯಿಂದ 110 ರೂಪಾಯಿಗೆ ಏರಿಸಲಾಗಿದೆ. ಇನ್ನು ಮಲ್ಟಿಫ್ಲೆಕ್ಸ್ನಲ್ಲಿ ಈಗಿರುವ ಟಿಕೆಟ್ ಬೆಲೆಗಿಂತ 50 ರೂಪಾಯಿ ಹಾಗೂ ಪ್ರಸಾದ್ ಐಮ್ಯಾಕ್ಸ್ನಲ್ಲಿ 138 ರೂಪಾಯಿ ಇರುವ ದರವನ್ನು 200 ರೂಪಾಯಿಗೆ ಹೆಚ್ಚಿಸಿದ್ದಾರೆ. ಜನರ ಅನುಮತಿ ಪಡೆದೇ ಟಿಕೆಟ್ ದರವನ್ನು ಏರಿಸಲಾಗಿದೆ ಎಂದು ಥಿಯೇಟರ್ ಮಾಲೀಕರು ಹೇಳಿದ್ದಾರೆ. ಸಿನಿಮಾ ಬಿಡುಗಡೆಯಾಗಿ ಎರಡು ವಾರದವರೆಗೂ ಇದೇ ದರ ಮುಂದುವರೆಯಲಿದೆ ಎನ್ನಲಾಗಿದೆ. ಇನ್ನು ತೆಲಂಗಾಣದಲ್ಲಿ ಮೇ 9 ರಿಂದ ಮೇ 22 ವರೆಗೂ ದಿನಕ್ಕೆ 5 ಪ್ರದರ್ಶನಗಳನ್ನು ಏರ್ಪಡಿಸಲಾಗಿದೆ.
ವಂಶಿ ಪೈಡಿಪಲ್ಲಿ ನಿರ್ದೇಶನದ 'ಮಹರ್ಷಿ' ಸಿನಿಮಾವನ್ನು ವೈಜಯಂತಿ ಮೂವೀಸ್, ಶ್ರೀವೆಂಕಟೇಶ್ವರ ಕ್ರಿಯೇಶನ್ಸ್, ಪಿವಿಪಿ ಸಿನಿಮಾ ಜೊತೆ ಸೇರಿ ನಿರ್ಮಿಸಿದ್ದಾರೆ. ಪೂಜಾಹೆಗ್ಡೆ, ಅಲ್ಲರಿ ನರೇಶ್, ಜಗಪತಿ ಬಾಬು, ಪ್ರಕಾಶ್ ರಾಜ್, ಸೋನಾಲ್ ಚೌಹಾನ್, ನರೇಶ್, ಜಯಸುಧಾ, ಸಾಯಿಕುಮಾರ್, ಪವಿತ್ರಾ ಲೋಕೇಶ್ ಹಾಗೂ ಇನ್ನಿತರರು ಸಿನಿಮಾದಲ್ಲಿ ನಟಿಸಿದ್ದಾರೆ. ಸಿನಿಮಾ ಹಾಡುಗಳಿಗೆ ದೇವಿಶ್ರೀ ಪ್ರಸಾದ್ ಸಂಗೀತ ನೀಡಿದ್ದಾರೆ. ಮೇ 9 ರಂದು ಸಿನಿಮಾ ವಿಶ್ವಾದ್ಯಂತ ಬಿಡುಗಡೆಯಾಗಲಿದೆ.