ತೆಲುಗು ಚಿತ್ರರಂಗದ ಖ್ಯಾತ ಹಿರಿಯ ನಟಿ, ನಿರ್ದೇಶಕಿ, ಮಹೇಶ್ ಬಾಬು ಚಿಕ್ಕಮ್ಮ ವಿಜಯನಿರ್ಮಲ ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 73 ವರ್ಷ ವಯಸ್ಸಾಗಿತ್ತು.
ವಿಜಯನಿರ್ಮಲ ನಿಧನ: 'ಮಹರ್ಷಿ' ಸಿನಿಮಾ 50ನೇ ದಿನದ ವಿಜಯೋತ್ಸವ ಮುಂದಕ್ಕೆ - undefined
ಮಹೇಶ್ ಬಾಬು ಚಿಕ್ಕಮ್ಮ ವಿಜಯನಿರ್ಮಲ ಇಂದು ಹೃದಯಾಘಾತದಿಂದ ನಿಧನರಾಗಿದ್ದು, ನಾಳೆ ನಡೆಯಬೇಕಿದ್ದ 'ಮಹರ್ಷಿ' ಚಿತ್ರದ 50ನೇ ದಿನದ ವಿಜಯೋತ್ಸವ ಕಾರ್ಯಕ್ರಮವನ್ನು ಮುಂದೂಡಲಾಗಿದೆ. ನಾಳೆ ವಿಜಯನಿರ್ಮಲ ಅಂತ್ಯಕ್ರಿಯೆ ನೆರವೇರಲಿದೆ.
ವಿಜಯನಿರ್ಮಲ ನಿಧನದಿಂದಾಗಿ ನಾಳೆ ಅಂದರೆ ಜೂನ್ 28ರಂದು ಏರ್ಪಡಿಸಿದ್ದ 'ಮಹರ್ಷಿ' ಸಿನಿಮಾದ 50ನೇ ದಿನದ ವಿಜಯೋತ್ಸವವನ್ನು ಮುಂದೂಡಲಾಗಿದೆ. ಹೈದರಾಬಾದ್ನ ಮಾದಾಪುರ್ನಲ್ಲಿರುವ ಶಿಲ್ಪಕಲಾ ವೇದಿಕೆಯಲ್ಲಿ ಕಾರ್ಯಕ್ರಮ ಜರುಗಬೇಕಿತ್ತು. ಈ ವಿಷಯವನ್ನು ಶ್ರೀ ವೆಂಕಟೇಶ್ವರ ಕ್ರಿಯೇಶನ್ಸ್ ಸಂಸ್ಥೆ ಟ್ವಿಟರ್ ಮೂಲಕ ತಿಳಿಸಿದೆ. ಕಾರ್ಯಕ್ರಮದ ಮುಂದಿನ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಸಂಸ್ಥೆ ತಿಳಿಸಿದೆ. ಮೇ 9ರಂದು 'ಮಹರ್ಷಿ' ಸಿನಿಮಾ ಬಿಡುಗಡೆಯಾಗಿತ್ತು.
ಇನ್ನು ವಿಜಯನಿರ್ಮಲ ನಿಧನಕ್ಕೆ ಟಾಲಿವುಡ್ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್, ನಟರಾದ ಜ್ಯೂ. ಎನ್ಟಿಆರ್, ಮೆಗಾಸ್ಟಾರ್ ಚಿರಂಜೀವಿ, ಪವನ್ ಕಲ್ಯಾಣ್, ಶ್ರೀಕಾಂತ್, ವಿಜಯಶಾಂತಿ ಹಾಗೂ ಇನ್ನಿತರರು ಮಹೇಶ್ ಬಾಬು ತಂದೆ ಕೃಷ್ಣ ಅವರ ನಿವಾಸಕ್ಕೆ ತೆರಳಿ ವಿಜಯನಿರ್ಮಲ ಅಂತಿಮ ದರ್ಶನ ಪಡೆದಿದ್ದಾರೆ. ನಾಳೆ ವಿಜಯನಿರ್ಮಲ ಅಂತ್ಯಕ್ರಿಯೆ ನೆರವೇರಲಿದೆ.