ಯಶಸ್ವಿ ನೂರು ದಿನ ಪೂರೈಸಿದ ಮಹಾನಾಯಕ
ಇಷ್ಟು ದಿನಗಳ ಕಾಲ ಕೇವಲ ವಾರಾಂತ್ಯದಲ್ಲಿ ಮಾತ್ರ ಮಹಾನಾಯಕ ನೋಡಿ ಕಣ್ತುಂಬಿಸಿಕೊಳ್ಳುತ್ತಿದ್ದ ವೀಕ್ಷಕರಿಗೆ ಇದೀಗ ವಾರ ಪೂರ್ತಿ ಮಹಾನಾಯಕನನ್ನು ನೋಡುವ ಸುವರ್ಣಾವಕಾಶ ದೊರೆತಿದೆ.
ಖಾಸಗಿ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಡಬ್ಬಿಂಗ್ ಧಾರಾವಾಹಿ ಮಹಾನಾಯಕ ಯಶಸ್ವಿ ನೂರು ಸಂಚಿಕೆ ಪೂರೈಸಿದೆ. ಬಾಲ್ಯದಿಂದಲೇ ಅಸ್ಪೃಶ್ಯತೆಯ ಸಂಕಷ್ಟ ಎದುರಿಸಿದ ಬಾಬಾಸಾಹೇಬ್ ಅಂಬೇಡ್ಕರ್ ಅದರಿಂದ ಧೃತಿಗಡದೇ, ಬಂದ ಸಂಕಷ್ಟಗಳನ್ನು ಎದುರಿಸಿ ತಮ್ಮ ವಿದ್ಯಾಭ್ಯಾಸ ಪೂರೈಸಿದರು.
ಶೋಷಿತರ ಹಕ್ಕುಗಳನ್ನು ಪ್ರತಿಪಾದಿಸುವ ಅಂಬೇಡ್ಕರ್ ಸ್ವಾತಂತ್ರ್ಯಕ್ಕಾಗಿ ಹೋರಾಡುವ ನಾಯಕನಾಗುತ್ತಾರೆ. ಸ್ವಾತಂತ್ರ್ಯ ಭಾರತದಲ್ಲಿ ಕಾನೂನು ಸಚಿವರಾಗಿ ಗುರುತಿಸಿಕೊಂಡಿರುವ ಅಂಬೇಡ್ಕರ್ ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾಗಿ ನೀಡಿದ ಕೊಡುಗೆ ಅಪಾರ. ಸಂವಿಧಾನ ಶಿಲ್ಪಿ ಎಂದೇ ಗುರುತಿಸಲ್ಪಡುವ ಅಂಬೇಡ್ಕರ್ ಅವರ ಅನುಪಮ ಸೇವೆಗಾಗಿ ಮರಣೋತ್ತರವಾಗಿ 'ಭಾರತ ರತ್ನ' ನೀಡಿ ಪುರಸ್ಕರಿಸಲಾಗಿದೆ.
https://www.instagram.com/p/COwZbZNBSSc/?igshid=192zyrwrj3bkp
ಇಷ್ಟುದಿನಗಳ ಕಾಲ ಕೇವಲ ವಾರಾಂತ್ಯದಲ್ಲಿ ಮಾತ್ರ ಮಹಾನಾಯಕ ನೋಡಿ ಕಣ್ತುಂಬಿಸಿಕೊಳ್ಳುತ್ತಿದ್ದ ವೀಕ್ಷಕರಿಗೆ ಇದೀಗ ವಾರ ಪೂರ್ತಿ ಮಹಾನಾಯಕನನ್ನು ನೋಡುವ ಸುವರ್ಣಾವಕಾಶ ದೊರೆತಿದೆ.