ಕರ್ನಾಟಕ

karnataka

ETV Bharat / sitara

'ಮಗಳು ಜಾನಕಿ' ಖ್ಯಾತಿಯ ಗಾನವಿ ಅಭಿನಯದ ಸಿನಿಮಾ ಚಿತ್ರೀಕರಣ ಮುಕ್ತಾಯ - ಗಾನವಿ ಲಕ್ಷ್ಮಣ್ ಅಭಿನಯದ ಭಾವಚಿತ್ರ ಚಿತ್ರೀಕರಣ ಮುಕ್ತಾಯ

ಚಿಕ್ಕಮಗಳೂರಿನ ಗಾನವಿ ಲಕ್ಷ್ಮಣ್ ಮೂಲತಃ ನೃತ್ಯಗಾರ್ತಿ. ಮಾರ್ಷಲ್ ಆರ್ಟ್ ಕಲೆಯೂ ಗೊತ್ತು, ಜೊತೆಗೆ ನಾಟಕದಲ್ಲೂ ಆಸಕ್ತಿ ಬೆಳಸಿಕೊಂಡವರು. ಅನೇಕ ಪ್ರಾಕಾರಗಳಲ್ಲಿ ಅವರು ನೃತ್ಯ ತರಬೇತಿ ಕೂಡಾ ನೀಡುತ್ತಿದ್ದಾರೆ. ಗಾನವಿ ಅವರಿಗೆ ನಾಯಕ ಆಗಿ ಚಕ್ರವರ್ತಿ ರೆಡ್ಡಿ ಅಭಿನಯಿಸಿದ್ದಾರೆ.

Bhavachitra
ಭಾವಚಿತ್ರ

By

Published : Jan 2, 2020, 9:03 AM IST

ಟಿ.ಎನ್​. ಸೀತಾರಾಮ್​ ನಿರ್ದೇಶನದ 'ಮಗಳು ಜಾನಕಿ' ಜನಪ್ರಿಯ ಧಾರಾವಾಹಿಗಳಲ್ಲಿ ಒಂದು. ಕಲರ್ಸ್ ಸೂಪರ್​ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಈ ಧಾರಾವಾಹಿ ಅದರದ್ದೇ ಆದ ವೀಕ್ಷರನ್ನು ಒಳಗೊಂಡಿದೆ. ಪ್ರತಿರಾತ್ರಿ ವೀಕ್ಷಕರು ಮನೆಮಂದಿಯೆಲ್ಲಾ ಒಟ್ಟಿಗೆ ಕುಳಿತು ಈ ಧಾರಾವಾಹಿ ನೋಡಲು ಮರೆಯುವುದಿಲ್ಲ.

'ಭಾವಚಿತ್ರ' ಸಿನಿಮಾದಲ್ಲಿ ಗಾನವಿ ಲಕ್ಷ್ಮಣ್

ಇನ್ನು, ಈ ಧಾರಾವಾಹಿಯಲ್ಲಿ ಎಲ್ಲರ ಗಮನ ಸೆಳೆದಿರುವುದು ನಾಯಕಿ ಜಾನಕಿ ಅಲಿಯಾಸ್ ಗಾನವಿ ಲಕ್ಷ್ಮಣ್. ಸಹಜ ಅಭಿನಯದ ಮೂಲಕ ಜನರ ಮನಸೂರೆಗೊಂಡಿರುವ ಗಾನವಿ ಇದೀಗ ಬೆಳ್ಳಿತೆರೆಗೂ ಕಾಲಿಟ್ಟಿದ್ದಾರೆ. ‘ಭಾವಚಿತ್ರ’ ಎಂಬ ಸಿನಿಮಾದಲ್ಲಿ ಗಾನವಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಮುನ್ನ ಅವರು ರಿಷಭ್ ಶೆಟ್ಟಿ ಅವರ ‘ನಾಥೂರಾಮ್’ ಚಿತ್ರಕ್ಕೆ ಆಯ್ಕೆ ಆಗಿದ್ದಾರೆ ಎಂಬ ಸುದ್ದಿ ಇತ್ತು. ಭಾವನೆಗಳನ್ನು ಮನ ತಟ್ಟುವ ಹಾಗೆ ವ್ಯಕ್ತ ಮಾಡುವ ನಟಿ ಗಾನವಿ ಲಕ್ಷ್ಮಣ್ ‘ಭಾವಚಿತ್ರ’ ಸಿನಿಮಾ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಚಿಕ್ಕಮಗಳೂರಿನ ಗಾನವಿ ಲಕ್ಷ್ಮಣ್ ಮೂಲತಃ ನೃತ್ಯಗಾರ್ತಿ, ಮಾರ್ಷಲ್ ಆರ್ಟ್ ಕಲೆಯೂ ಗೊತ್ತು, ಜೊತೆಗೆ ನಾಟಕದಲ್ಲೂ ಆಸಕ್ತಿ ಬೆಳೆಸಿಕೊಂಡವರು. ಅನೇಕ ಪ್ರಾಕಾರಗಳಲ್ಲಿ ಅವರು ನೃತ್ಯ ತರಬೇತಿ ಕೂಡಾ ನೀಡುತ್ತಿದ್ದಾರೆ. ಗಾನವಿ ಅವರಿಗೆ ನಾಯಕ ಆಗಿ ಚಕ್ರವರ್ತಿ ರೆಡ್ಡಿ ಅಭಿನಯಿಸಿದ್ದಾರೆ.

'ಭಾವಚಿತ್ರ' ಸಿನಿಮಾ ಚಿತ್ರೀಕರಣ

ಬೆಂಗಳೂರು, ಚಿಕ್ಕಬಳ್ಳಾಪುರ, ಹಾವೇರಿ, ಗುಡಿಬಂಡೆ ಹಾಗೂ ಇನ್ನಿತರ ಸ್ಥಳಗಳಲ್ಲಿ ಚಿತ್ರೀಕರಣ ಜರುಗಿದ್ದು, ಗಿರೀಶ್ ಕುಮಾರ್. ಬಿ ಸಿನಿಮಾವನ್ನು ನಿರ್ದೇಶಿಸಿದ್ದಾರೆ. 2017 ರಲ್ಲಿ ಇವರು ‘ಆವಾಹಯಾಮಿ’ ಎಂಬ ಚಿತ್ರವನ್ನು ನಿರ್ದೇಶಿಸಿದ್ದರು. ‘ಭಾವಚಿತ್ರ’ ಸಿನಿಮಾಗೆ ಅಜಯ್ ಜೈ ಛಾಯಾಗ್ರಹಣ, ನಾಲ್ಕು ಹಾಡುಗಳಿಗೆ ಗೌತಮ್ ಶ್ರೀವಾತ್ಸವ್ ಸಂಗೀತ, ರತೀಶ್ ಕುಮಾರ್​. ಬಿ ಸಂಕಲನ ಇದೆ. ಕಾರ್ಪೊರೇಟ್​ ಸಂಸ್ಥೆಯಲ್ಲಿ ಕೆಲಸ ಮಾಡುವ ವ್ಯಕ್ತಿವೋರ್ವ ಪ್ರವಾಸಕ್ಕೆ ಹೋದಾಗ ಯುವತಿವೋರ್ವಳನ್ನು ನೋಡಿ ಮನಸೋಲುತ್ತಾನೆ. ಅಲ್ಲಿಂದ ಸಿನಿಮಾ ಅನೇಕ ತಿರುವುಗಳನ್ನು ಪಡೆಯುತ್ತಾ ಹೋಗುತ್ತದೆ. ಸಿನಿಮಾದಲ್ಲಿ ಥ್ರಿಲ್ಲರ್ ಅಂಶ ಹೆಚ್ಚಿಗೆ ಇದ್ದು ಪ್ರೇಕ್ಷಕರಿಗೆ ಖಂಡಿತ ಇಷ್ಟವಾಗುತ್ತದೆ ಎನ್ನುತ್ತಾರೆ ನಿರ್ದೇಶಕ ಗಿರೀಶ್. ಗಿರೀಶ್ ಕುಮಾರ್ ಬಿ, ಗಿರೀಶ್​​​​ ಬಿಜ್ಜಲ್, ಶ್ರೀನಾಥ್ ರಾವ್, ರಜತ್ ಮಯಿ ಹಾಗೂ ಇತರರು ಚಿತ್ರದ ತಾರಾಗಣದಲ್ಲಿದ್ದಾರೆ.

'ಭಾವಚಿತ್ರ'

For All Latest Updates

TAGGED:

ABOUT THE AUTHOR

...view details