ಟಿ.ಎನ್. ಸೀತಾರಾಮ್ ನಿರ್ದೇಶನದ 'ಮಗಳು ಜಾನಕಿ' ಧಾರಾವಾಹಿಯಲ್ಲಿ ಸೀತಾರಾಮ್ ಮಗ ಮಧುಕರ್ ಆಗಿ ನಟಿಸುವ ಮೂಲಕ ಕಿರುತೆರೆಗೆ ಕಾಲಿಟ್ಟ ಅಭಿಲಾಷ್ ಮೊದಲ ಧಾರಾವಾಹಿಯಲ್ಲೇ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು. ಇದರ ಜೊತೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಇತ್ತೀಚೆಗಷ್ಟೇ ಆರಂಭವಾಗಿರುವ 'ಸರಸು' ಧಾರಾವಾಹಿಯಲ್ಲಿ ನಾಯಕ ಅರವಿಂದನ ಚಿಕ್ಕಪ್ಪನ ಮಗನಾಗಿ ಅಭಿಲಾಷ್ ನಟಿಸುತ್ತಿದ್ದಾರೆ.
ಹಿರಿತೆರೆಯಲ್ಲಿ ನಾಯಕನಾಗಿ ಮಿಂಚಲಿದ್ದಾರೆ 'ಮಗಳು ಜಾನಕಿ' ಖ್ಯಾತಿಯ ಅಭಿಲಾಷ್..!
'ಮಗಳು ಜಾನಕಿ' ಧಾರಾವಾಹಿಯಲ್ಲಿ ಟಿ.ಎನ್. ಸೀತಾರಾಮ್ ಪುತ್ರ ನಾಗಿ ನಟಿಸಿದ್ದ ಅಭಿಲಾಷ್, ಇದೀಗ ಕಿರುತೆರೆ ಮಾತ್ರವಲ್ಲ ಬೆಳ್ಳಿತೆರೆಯಲ್ಲಿ ಕೂಡಾ ಬ್ಯುಸಿಯಾಗಿದ್ದಾರೆ. ಬಾಲಾದಿತ್ಯ ನಿರ್ದೇಶನದ 'ಮಹಾಕರ್ಮ' ಸಿನಿಮಾದಲ್ಲಿ ಅಭಿಲಾಷ್ ನಾಯಕನಾಗಿ ನಟಿಸುತ್ತಿದ್ದಾರೆ.
ಧಾರಾವಾಹಿಯಲ್ಲಿ ನಟಿಸುವ ಮೂಲಕ ಅಭಿಲಾಷ್ ಬಹಳ ವರ್ಷಗಳ ನಂತರ ಕಿರುತೆರೆಗೆ ವಾಪಸಾಗಿದ್ದು ಈಗ ಬೆಳ್ಳಿತೆರೆಗೂ ಎಂಟ್ರಿ ನೀಡಿದ್ದಾರೆ. ಬಾಲಾದಿತ್ಯ ನಿರ್ದೇಶನದ 'ಮಹಾಕರ್ಮ' ಸಿನಿಮಾದಲ್ಲಿ ನಾಯಕನಾಗಿ ನಟಿಸುವ ಮೂಲಕ ಕಿರುತೆರೆಯಿಂದ ಬೆಳ್ಳಿತೆರೆಗೆ ಪ್ರಮೋಷನ್ ಪಡೆದಿದ್ದಾರೆ ಅಭಿಲಾಷ್. ಈ ವೃತ್ತಿ ಜೀವನದಲ್ಲಿ ಕಿರುತೆರೆ ಮತ್ತು ಹಿರಿತೆರೆ ಎರಡೂ ಕೂಡಾ ನನಗೆ ತುಂಬಾ ಮುಖ್ಯವಾದ ಕ್ಷೇತ್ರಗಳು 'ಸರಸು' ಧಾರಾವಾಹಿಯಲ್ಲಿ ನಟಿಸುತ್ತಿರುವ ನನಗೆ ಸಿನಿಮಾದಲ್ಲಿ ಕೂಡಾ ಅವಕಾಶ ದೊರೆಯುತ್ತಿದೆ. ಸದ್ಯಕ್ಕೆ ನಾನು ಎರಡನ್ನೂ ಜೊತೆಯಲ್ಲಿ ಬ್ಯಾಲೆನ್ಸ್ ಮಾಡಿಕೊಂಡು ಸಾಗುತ್ತೇನೆ ಎನ್ನುತ್ತಾರೆ ಅಭಿಲಾಷ್.
ಅಭಿಲಾಷ್ ಮೂಲತಃ ರಂಗಭೂಮಿ ಕಲಾವಿದ ಕೂಡಾ ಹೌದು. ರಂಗಭೂಮಿಯ ಬಗ್ಗೆ ಆಸಕ್ತಿ ಹುಟ್ಟಿಕೊಂಡಿದ್ದೇ ತಡ ದಾವಣಗೆರೆಯ ಅನ್ವೇಷಕರು ಎಂಬ ತಂಡಕ್ಕೆ ಸೇರಿದ ಅಭಿಲಾಷ್, ಅಲ್ಲಿ ಕೃಷ್ಣೇಗೌಡರ ಆನೆ , ಬೆಳಗೆರೆ ಕೃಷ್ಣ ಶಾಸ್ತ್ರಿಗಳ ಹಳ್ಳಿ ಚಿತ್ರ , ರೋಮಿಯೋ ಜ್ಯೂಲಿಯೆಟ್ ನಾಟಕಗಳಲ್ಲಿ ನಟಿಸಿದರು. ಚಂದ್ರಶೇಖರ ಕಂಬಾರರ ಸಿರಿ ಸಂಪಿಗೆ ಧಾರಾವಾಹಿಯಲ್ಲಿ ರಾಜಕುಮಾರನಾಗಿ ನಟಿಸಿದ ಅಭಿಲಾಷ್ ನಂತರ ಕಾಣಿಸಿಕೊಂಡಿದ್ದು ಕಿರುತೆರೆಯಲ್ಲಿ. 'ಮಗಳು ಜಾನಕಿ'ಯ ಮಧುಕರ್ ಆಗಿ ಕಿರುತೆರೆ ಪಯಣ ಶುರು ಮಾಡಿರುವ ಅಭಿಲಾಷ್ ಇದೀಗ ಕಿರುತೆರೆ ಮಾತ್ರವಲ್ಲದೇ ಹಿರಿತೆರೆಯಲ್ಲೂ ಬ್ಯುಸಿಯಾಗಿದ್ದಾರೆ.