ಲಾಕ್ಡೌನ್ ಸಮಯದಲ್ಲಿ ಅನೇಕ ಸೆಲಬ್ರಿಟಿಗಳು ಸರಳವಾಗಿ ಮದುವೆಯಾಗಿದ್ದಾರೆ. ಇದೀಗ ಮಗಧೀರ ಖ್ಯಾತಿಯ ಕಾಜಲ್ ಅಗರ್ವಾಲ್ ಮದುವೆ ದಿನಾಂಕ ನಿಶ್ಚಯವಾಗಿದೆ. ಸ್ವತ: ಕಾಜಲ್ ಅಗರ್ವಾಲ್ ಈ ವಿಚಾರವನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಅನೌನ್ಸ್ ಮಾಡಿದ್ದಾರೆ.
ಮುಂಬೈ ಮೂಲದ ಗೌತಮ್ ಕಿಚ್ಲು ಎಂಬುವವರನ್ನು ಕಾಜಲ್ ಮದುವೆಯಾಗುತ್ತಿದ್ದಾರೆ. ಕಾಜಲ್ ಹಾಗೂ ಗೌತಮ್ ಇಬ್ಬರೂ ಕೆಲವು ವರ್ಷಗಳಿಂದ ಪ್ರೀತಿಸುತ್ತಿದ್ದು ಇಬ್ಬರೂ ಶೀಘ್ರದಲ್ಲೇ ಮದುವೆಯಾಗುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಆದರೆ ಈ ವಿಚಾರವಾಗಿ ಕಾಜಲ್ ಅಗರ್ವಾಲ್ ಅಧಿಕೃತವಾಗಿ ಘೋಷಿಸಿರಲಿಲ್ಲ. ಇದೀಗ ಮದುವೆ ವಿಚಾರವನ್ನು ಅಧಿಕೃತವಾಗಿ ಘೋಷಿಸಿರುವ ನಟಿ ಅಕ್ಟೋಬರ್ 30 ರಂದು ಮುಂಬೈನಲ್ಲಿ ಗೌತಮ್ ಕೈ ಹಿಡಿಯುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಈ ಕೊರೊನಾ ಸಮಯದಲ್ಲಿ ಮದುವೆಯಾಗುತ್ತಿರುವುದರಿಂದ ಕೆಲವೇ ಮಂದಿ ಸ್ನೇಹಿತರು ಹಾಗೂ ಕುಟುಂಬದವರ ಸಮ್ಮುಖದಲ್ಲಿ ಕಾಜಲ್ ಮದುವೆಯಾಗುತ್ತಿದ್ದಾರೆ.