ಕರ್ನಾಟಕ

karnataka

ETV Bharat / sitara

'ಮದಗಜ' ಇಂಟ್ರಡಕ್ಷನ್​ನಲ್ಲಿ ಸಾಂಗ್​​ನಲ್ಲಿ ಶ್ರೀಮುರಳಿ ರೋರಿಂಗ್: ಮೇಕಿಂಗ್​ ವಿಡಿಯೋ - madhagaja film video songs

74 ದಿನಗಳ ಕಾಲ ವಾರಾಣಸಿ, ಬೆಂಗಳೂರು, ಮೈಸೂರು ಹೀಗೆ ಹಲವು ಕಡೆಗಳಲ್ಲಿ ಮದಗಜ ಸಿನಿಮಾದ ಚಿತ್ರೀಕರಣ ಮಾಡಲಾಗಿದೆ. ಸಿನಿಮಾದಲ್ಲಿ ವಾರಾಣಾಸಿ ಗ್ಯಾಂಗ್‌ಸ್ಟರ್‌ ಆಗಿ ನಟ ಶ್ರೀಮುರಳಿ ನಟಿಸಿದ್ದು, ನಾಯಕಿಯಾಗಿ ಆಶಿಕಾ ರಂಗನಾಥ್ ಕಾಣಿಸಿಕೊಂಡಿದ್ದಾರೆ.

madhagaja-song-making-video-released
ಶ್ರೀಮುರಳಿ, ಮದಗಜ

By

Published : Nov 25, 2021, 10:14 PM IST

ರೋರಿಂಗ್ ಸ್ಟಾರ್ ಶ್ರೀಮುರಳಿ ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿರುವ ಮದಗಜ ಚಿತ್ರ ಇದೇ ಡಿಸೆಂಬರ್ ಮೊದಲ ವಾರ ರಾಜ್ಯಾದ್ಯಂತ ತೆರೆಗೆ ಬರಲಿದೆ. ಈಗಾಗಲೇ ಪ್ರಚಾರ ಕಾರ್ಯ ಶುರು ಮಾಡಿರುವ ಚಿತ್ರತಂಡ ಶ್ರೀಮುರಳಿ ಇಂಟ್ರಡಕ್ಷನ್ ಹಾಡಿನ ಅದ್ದೂರಿ ಮೇಕಿಂಗ್ ವಿಡಿಯೋ ಬಿಡುಗಡೆ ಮಾಡಿದೆ.

ಚಿತ್ರದ ಟೈಟಲ್‌ಗೆ ತಕ್ಕಂತೆ ಈ ಹಾಡನ್ನು ನಿರ್ದೇಶಕ ಮಹೇಶ್ ಕುಮಾರ್ ಚಿತ್ರೀಕರಣ ಮಾಡಿದ್ದಾರೆ. ಬೆಂಗಳೂರಿನ ಹೊರವಲಯದಲ್ಲಿ ಬೃಹತ್​ ಸೆಟ್​ಗಳನ್ನು ಹಾಕಿ ಹಾಡಿನ ಚಿತ್ರೀಕರಣ ಮಾಡಲಾಗಿದೆ. ಕಲಾ ನಿರ್ದೇಶಕ ಮೋಹನ್ ಬಿ. ಕೆರೆ 50ಕ್ಕೂ ಹೆಚ್ಚು ಜನರಿಂದ ಮೂರು ಬಗೆಯ ಅದ್ದೂರಿ ಸೆಟ್​​ಗಳನ್ನು ನಿರ್ಮಿಸಿದ್ದಾರೆ. ಶ್ರೀಮುರಳಿ ಸ್ಟೈಲಿಷ್ ಕಾಸ್ಟೂಮ್​ಲ್ಲಿ 30ಕ್ಕೂ ಡ್ಯಾನ್ಸರ್ ಜೊತೆ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಈ ಅದ್ದೂರಿ ಸಾಂಗ್ ಚಿತ್ರೀಕರಣ ಮಾಡುವುದಕ್ಕಿಂತ ಮುಂಚೆ, ಶ್ರೀಮುರಳಿ ನಾಲ್ಕೈದು ದಿನ ಡ್ಯಾನ್ಸ್ ಪ್ರಾಕ್ಟೀಸ್ ಮಾಡಿ ಈ ಹಾಡನ್ನು ಚಿತ್ರೀಕರಣ ಮಾಡಲಾಗಿದೆ.

ಕೋರಿಯೋಗ್ರಾಫರ್ ಮುರಳಿ ಈ ಅದ್ದೂರಿ ಹಾಡನ್ನು ನೃತ್ಯ ಸಂಯೋಜನೆ ಮಾಡಿದ್ದಾರೆ. ಈ ಹಾಡಿನ ಸಂದರ್ಭದಲ್ಲಿ ಶ್ರೀಮುರಳಿ ಪತ್ನಿ ವಿದ್ಯಾ ಹಾಗು ಮಕ್ಕಳು ಕೂಡ, ಶೂಟಿಂಗ್ ಸ್ಪಾಟ್‌ಗೆ ಭೇಟಿ ನೀಡಿ ಖುಷಿಪಟ್ಟಿದ್ದಾರೆ. ಸಿನಿಮಾಗೆ ರವಿ ಬಸ್ರೂರು ಸಂಗೀತ ನಿರ್ದೇಶನ ಮಾಡಿದ್ದು, ಸಂತೋಷ್​ ವೆಂಕಿ ಧ್ವನಿ ನೀಡಿದ್ದಾರೆ.

ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಅದ್ಧೂರಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣ ಮಾಡಿದ್ದಾರೆ. 74 ದಿನಗಳ ಕಾಲ ವಾರಾಣಸಿ, ಬೆಂಗಳೂರು, ಮೈಸೂರು ಹೀಗೆ ಹಲವು ಕಡೆಗಳಲ್ಲಿ ಮದಗಜ ಸಿನಿಮಾದ ಚಿತ್ರೀಕರಣ ಮಾಡಲಾಗಿದೆ. ಸಿನಿಮಾದಲ್ಲಿ ವಾರಾಣಾಸಿ ಗ್ಯಾಂಗ್‌ಸ್ಟರ್‌ ಆಗಿ ನಟ ಶ್ರೀಮುರಳಿ ನಟಿಸಿದ್ದು, ನಾಯಕಿಯಾಗಿ ಆಶಿಕಾ ರಂಗನಾಥ್ ಕಾಣಿಸಿಕೊಂಡಿದ್ದಾರೆ. ಅಲ್ಲದೆ, ತೆಲುಗು ನಟ ಜಗಪತಿ ಬಾಬು, ಚಿಕ್ಕಣ್ಣ, ಶಿವರಾಜ್ ಕೆ.ಆರ್. ಪೇಟೆ ಮುಂತಾದವರು ಚಿತ್ರದಲ್ಲಿದ್ದಾರೆ.

ಅಯೋಗ್ಯ ಸಿನಿಮಾ ಖ್ಯಾತಿಯ ಮಹೇಶ್ ಕುಮಾರ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಮಫ್ತಿ ಖ್ಯಾತಿಯ ನವೀನ್‌ ಕುಮಾರ್‌ ಸಿನಿಮಾಟೋಗ್ರಫಿ ಕೆಲಸ ಮಾಡಿದ್ದಾರೆ. ಕನ್ನಡ, ತೆಲುಗು, ತಮಿಳು ಭಾಷೆಯಲ್ಲಿ ಮದಗಜ ಸಿನಿಮಾ ಬಿಡುಗಡೆ ಆಗಲಿದೆ.

ABOUT THE AUTHOR

...view details