ಕರ್ನಾಟಕ

karnataka

ETV Bharat / sitara

ಬಿಡುಗಡೆಗೂ ಮುಂಚೆಯೇ 'ಮದಗಜ'ನಿಗೆ ಭಾರಿ ಡಿಮ್ಯಾಂಡ್​​​ : ಟಿವಿ ರೈಟ್ಸ್ ₹____ಕೋಟಿಗೆ ಸೇಲ್​ - ಶ್ರೀಮುರಳಿ ಮದಗಜ ಸಿನಿಮಾ

ಈಗಾಗಲೇ ಮದಗಜ ಸಿನಿಮಾದ ಟ್ರೈಲರ್ ಅ​ನ್ನು ಮಿಲಿಯನ್‌ಗಟ್ಟಲೇ ಜನ ನೋಡಿ ಮೆಚ್ಚಿದ್ದಾರೆ. ಅದ್ದೂರಿ ಮೇಕಿಂಗ್ ಜೊತೆಗೆ ದೊಡ್ಡ ತಾರಾ ಬಳಗ ಹೊಂದಿರುವ ಸಿನಿಮಾ ಸಾಕಷ್ಟು ನಿರೀಕ್ಷೆ ಹುಟ್ಟುಸಿದೆ. ಸಿನಿಮಾದಲ್ಲಿ ಶ್ರೀಮುರಳಿಗೆ ಆಶಿಕಾ ರಂಗನಾಥ್ ಜೋಡಿಯಾಗಿದ್ದಾರೆ. ಇದರ ಜೊತೆಗೆ ತೆಲುಗಿನ ಖ್ಯಾತ ನಟ ಜಗಪತಿ ಬಾಬು ಬಹು ಮುಖ್ಯ ಪಾತ್ರದಲ್ಲಿ ಕಾಣಿಸಿದ್ದಾರೆ..

madhagaja-film
ಮದಗಜ

By

Published : Nov 29, 2021, 4:49 PM IST

ಟ್ರೈಲರ್ ಹಾಗೂ ಹಾಡುಗಳಿಂದಲೇ ಕನ್ನಡ ಚಿತ್ರರಂಗ ಅಲ್ಲದೇ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಸಖತ್​ ಸೌಂಡ್​ ಮಾಡುತ್ತಿರುವ ರೋರಿಂಗ್​ ಸ್ಟಾರ್​​ ಶ್ರೀಮುರಳಿ ಅಭಿನಯದ 'ಮದಗಜ'ನಿಗೆ ಭಾರಿ ಬೇಡಿಕೆ ಶುರುವಾಗಿದೆ. ರಿಲೀಸ್​ಗೂ ಮುನ್ನವೇ ನಿರ್ಮಾಪಕ ಉಮಾಪತಿ ಜೇಬು ಭರ್ತಿಯಾಗುತ್ತಿದೆ.

ಬರೋಬ್ಬರಿ ₹6 ಕೋಟಿಗೆ ಮದಗಜ ಟಿವಿ ರೈಟ್ಸ್ ಸೇಲ್

ಕಳೆದ ಕೆಲವು ದಿನಗಳ ಹಿಂದೆ ಮದಗಜ ಹಿಂದಿ ಡಬ್ಬಿಂಗ್ ರೈಟ್ಸ್ ಬರೋಬ್ಬರಿ ₹8 ಕೋಟಿಗೆ ಮಾರಾಟ ಮಾಡಲಾಗಿತ್ತು. ಈಗ ಮದಗಜ ಟಿವಿ ರೈಟ್ಸ್​ನ ಪ್ರತಿಷ್ಠಿತ ಎಂಟರ್​ಟೈನ್​ಮೆಂಟ್ ಸಂಸ್ಥೆಯೊಂದು ಬಹುಕೋಟಿಗೆ ಖರೀದಿಸಿದೆ.

ಭರ್ಜರಿ ಆ್ಯಕ್ಷನ್ ಜೊತೆಗೆ ತಾಯಿ ಸೆಂಟಿಮೆಂಟ್ ಹೊಂದಿರುವ ಮದಗಜ ಬರೋಬ್ಬರಿ 6 ಕೋಟಿಗೆ ಟಿವಿ ರೈಟ್ಸ್ ಸೇಲ್ ಆಗಿದೆ. ಈ ಬಗ್ಗೆ ಸ್ವತಃ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಹೇಳಿಕೊಂಡಿದ್ದಾರೆ.

ಈಗಾಗಲೇ ಮದಗಜ ಸಿನಿಮಾದ ಟ್ರೈಲರ್ ಅ​ನ್ನು ಮಿಲಿಯನ್‌ಗಟ್ಟಲೇ ಜನ ನೋಡಿ ಮೆಚ್ಚಿದ್ದಾರೆ. ಅದ್ದೂರಿ ಮೇಕಿಂಗ್ ಜೊತೆಗೆ ದೊಡ್ಡ ತಾರಾ ಬಳಗ ಹೊಂದಿರುವ ಸಿನಿಮಾ ಸಾಕಷ್ಟು ನಿರೀಕ್ಷೆ ಹುಟ್ಟುಸಿದೆ. ಸಿನಿಮಾದಲ್ಲಿ ಶ್ರೀಮುರಳಿಗೆ ಆಶಿಕಾ ರಂಗನಾಥ್ ಜೋಡಿಯಾಗಿದ್ದಾರೆ. ಇದರ ಜೊತೆಗೆ ತೆಲುಗಿನ ಖ್ಯಾತ ನಟ ಜಗಪತಿ ಬಾಬು ಬಹು ಮುಖ್ಯ ಪಾತ್ರದಲ್ಲಿ ಕಾಣಿಸಿದ್ದಾರೆ.

ಕೆಜಿಎಫ್ ಸಿನಿಮಾ ಖ್ಯಾತಿಯ ಗರುಡ ರಾಮ್, ತೆಲುಗಿ ನಟಿ ದೇವಯಾನಿ,ಚಿಕ್ಕಣ್ಣ, ಧರ್ಮಣ್ಣ, ಶಿವರಾಜ್ ಕೆ.ಆರ್. ಪೇಟೆ ಹೀಗೆ ದೊಡ್ಡ ತಾರಾ ಬಳಗ ಈ ಚಿತ್ರದಲ್ಲಿದೆ. ಸಂಗೀತ ನಿರ್ದೇಶಕ ರವಿ ಬಸ್ರೂರು ಅವ್ರ ಸಂಗೀತ ಮದಗಜ ಸಿನಿಮಾಕ್ಕಿದೆ. ಮಫ್ತಿ ಖ್ಯಾತಿಯ ನವೀನ್‌ ಕುಮಾರ್‌ ಸಿನಿಮಾಟೋಗ್ರಫಿ ಕೆಲಸ ಮಾಡಿದ್ದಾರೆ. ಹರೀಶ್​ ಕೊಮ್ಮೆ ಸಂಕಲನ ಚಿತ್ರಕ್ಕಿದೆ. ನಿರ್ಮಾಪಕ ಉಮಾಪತಿ ಶ್ರೀನಿವಾಸ್​ ಗೌಡ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ಸೆನ್ಸಾರ್ ಮಂಡಳಿಯಿಂದ ಯು/ಎ ಸರ್ಟಿಫಿಕೆಟ್ ಪಡೆದುಕೊಂಡಿರುವ ಮದಗಜ ಸಿನಿಮಾ, ಕನ್ನಡ, ತೆಲುಗು, ತಮಿಳು ಭಾಷೆಯಲ್ಲಿ ತೆರೆಗೆ ಬರ್ತಾ ಇದೆ. ಇದೇ ಡಿಸೆಂಬರ್ 3ಕ್ಕೆ ರಾಜ್ಯ ಅಲ್ಲದೇ ಬೇರೆ ಭಾಷೆಗಳು ಸೇರಿದಂತೆ 1000ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಮದಗಜ‌ನ‌ ದರ್ಶನ ಆಗಲಿದೆ. ಈ ವರ್ಷದ ಅಂತ್ಯದಲ್ಲಿ ಬಿಡುಗಡೆ ಆಗುತ್ತಿರುವ ಸ್ಟಾರ್ ಸಿನಿಮಾ ಇದಾಗಿದ್ದು, ಶ್ರೀಮುರಳಿ ಅಭಿಮಾನಿಗಳಿ ಸಾಕಷ್ಟು ಕೂತಹಲ ಹುಟ್ಟಿಸಿದೆ.

ABOUT THE AUTHOR

...view details