ಕರ್ನಾಟಕ

karnataka

ETV Bharat / sitara

ಬಹುನಿರೀಕ್ಷಿತ ಮದಗಜ ಟೀಸರ್​​​-2 ಔಟ್​; ಖಡಕ್ - ಪಂಚಿಂಗ್​​​​ ಡೈಲಾಗ್​​ಗಳು ಹೇಗಿದೆ ಅಂದ್ರೆ... - ಖಡಕ್ ಹಾಗೂ ಪಂಚ್ ಡೈಲಾಗ್

ಬಹುನಿರೀಕ್ಷಿತ ಮದಗಜ ಸಿನಿಮಾದ ಟೀಸರ್​​​-2 ರಿಲೀಸ್​​ ಆಗಿದೆ. ಬಹುತೇಕ ಚಿತ್ರೀಕರಣ ಮುಗಿಸಿರುವ ಮದಗಜ ಸಿನಿಮಾ ಶೀಘ್ರದಲ್ಲೇ ತೆರೆಗೆ ಅಪ್ಪಳಿಸಲಿದೆ.

Madagaja Teaser-2
Madagaja Teaser-2

By

Published : Oct 14, 2021, 8:06 PM IST

ಸ್ಯಾಂಡಲ್​ವುಡ್​ನ ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಬಹುನಿರೀಕ್ಷಿತ 'ಮದಗಜ' ಸಿನಿಮಾದ ಟೀಸರ್​​​-2 ರಿಲೀಸ್​​ ಆಗಿದೆ. ಇಂದು ಬಿಡುಗಡೆಯಾಗುತ್ತಿದ್ದಂತೆ ಯೂಟ್ಯೂಬ್​​ನಲ್ಲಿ ಧೂಳೆಬ್ಬಿಸಿದೆ. 'ರಕ್ತ ಒಳಗೆ ಹರಿದ್ರೆ ಸಂಬಂಧ, ಹೊರಗೆ ಹರಿದ್ರೆ ಕ್ರೌರ್ಯ' ಎಂಬ ಶ್ರೀಮುರಳಿ ಖಡಕ್ ಹಾಗೂ ಪಂಚ್ ಡೈಲಾಗ್ ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ.

ಇದಕ್ಕೂ ಮುನ್ನ 'ಮದಗಜ' ಚಿತ್ರತಂಡ ಮೊದಲ ಟೀಸರ್​​​​ ಬಿಡುಗಡೆ ಮಾಡುವ ಮೂಲಕ ಶ್ರೀಮುರಳಿಗೆ ಹುಟ್ಟುಹಬ್ಬದ ಶುಭಾಶಯ ಕೋರಿತ್ತು. ಇನ್ನು ಥಿಯರಿಟಿಕಲ್​ ಟೀಸರ್ ಅನ್ನು ದಸರಾ ಹಬ್ಬದ ಪ್ರಯುಕ್ತ ರಿಲೀಸ್​ ಮಾಡಲಾಗುತ್ತದೆ ಎಂದು ನಿರ್ದೇಶಕ ಮಹೇಶ್ ಈ ಹಿಂದೆಯೇ ತಿಳಿಸಿದ್ದರು. ಅದರಂತೆ ಇಂದು 'ಮದಗಜ' ಸಿನಿಮಾದ ಟೀಸರ್​​​-2 ರಿಲೀಸ್​​ ಆಗಿದೆ. ​

ಅಯೋಗ್ಯ ಸಿನಿಮಾ ಮೂಲಕ ಭರವಸೆ ನಿರ್ದೇಶಕ ಎನಿಸಿಕೊಂಡಿರುವ ಮಹೇಶ್ ಕುಮಾರ್ 'ಮದಗಜ' ಸಿನಿಮಾಕ್ಕೆ ನಿರ್ದೇಶನ ಹೇಳಿದ್ದಾರೆ. ಉಮಾಪತಿ ನಿರ್ಮಾಣದ ಹೊಣೆ ಹೊತ್ತಿದ್ದು ನಾಯಕಿಯಾಗಿ ಆಶಿಕಾ ರಂಗನಾಥ್ ಸೇರಿದಂತೆ ಚಿತ್ರದಲ್ಲಿ ದೊಡ್ಡ ತಾರಾಬಳಗವೇ ಇದೆ. ಬಹುತೇಕ ಚಿತ್ರೀಕರಣ ಮುಗಿಸಿರುವ 'ಮದಗಜ' ಸಿನಿಮಾ ಶೀಘ್ರದಲ್ಲೇ ತೆರೆಗೆ ಅಪ್ಪಳಿಸಲಿದೆ.

ABOUT THE AUTHOR

...view details