ಕಾಲಿವುಡ್ ಸ್ಟಾರ್ ನಟ ಸಿಲಂಬರಸನ್ ಟಿ.ಆರ್. ನಟನೆಯ ಮಾನಾಡು ತಮಿಳು ಚಿತ್ರವು ಐದು ಭಾಷೆಗಳಲ್ಲಿ ನಿರ್ಮಾಣ ಆಗಿದೆ. ಇಂದು ಸಿಂಬು ಹುಟ್ಟುಹಬ್ಬದ ಸಲುವಾಗಿ ಆಯಾ ಭಾಷೆಯ ಟೈಟಲ್ ಮತ್ತು ಟೀಸರ್‌ಅನ್ನು ಸೌತ್ ಸ್ಟಾರ್ ನಟರು ಹಾಗೂ ಸ್ಟಾರ್ ಮೇಕರ್ಸ್ ಬಿಡುಗಡೆ ಮಾಡಿದ್ದಾರೆ.
ಸಿಂಬು ನಟನೆಯ 'ರಿವೈಂಡ್' ಟೀಸರ್ ರಿಲೀಸ್ ಮಾಡಿದ ಕಿಚ್ಚ - ಕಿಚ್ಚ ಸುದೀಪ್ ಸುದ್ದಿ
ಸಿಂಬು ನಟನೆಯ ಮಾನಡು ಸಿನಿಮಾದ ಕನ್ನಡ ಭಾಷೆಯ ಶೀರ್ಷಿಕೆ ರಿವೈಂಡ್ ಆಗಿದ್ದು, ಈ ಚಿತ್ರದ ಟೀಸರ್ಅನ್ನ ಕಿಚ್ಚ ಸುದೀಪ್ ತಮ್ಮ ಟ್ವಿಟರ್ ಖಾತೆಯಲ್ಲಿ ಅನಾವರಣಗೊಳಿಸಿ ಗೆಳೆಯನಿಗೆ ಶುಭ ಹಾರೈಸಿದ್ದಾರೆ.
ಕನ್ನಡ ಭಾಷೆಯ ಶೀರ್ಷಿಕೆ ರಿವೈಂಡ್ ಆಗಿದ್ದು, ಈ ಚಿತ್ರದ ಟೀಸರ್ಅನ್ನ ಕಿಚ್ಚ ಸುದೀಪ್ ತಮ್ಮ ಟ್ವಿಟರ್ ಖಾತೆಯಲ್ಲಿ ಅನಾವರಣಗೊಳಿಸಿ ಗೆಳೆಯನಿಗೆ ಶುಭ ಹಾರೈಸಿದ್ದಾರೆ.
ತಮಿಳಿನಲ್ಲಿ ಎ.ಆರ್.ರೆಹಮಾನ್, ಹಿಂದಿಯಲ್ಲಿ ಅನುರಾಗ್ ಕಶ್ಯಪ್, ತೆಲುಗಿನಲ್ಲಿ ರವಿತೇಜ ಮತ್ತು ಮಲಯಾಳಂನಲ್ಲಿ ಪೃಥ್ವಿರಾಜ್ ಟೀಸರ್ ಲೋಕಾರ್ಪಣೆ ಮಾಡಿದ್ದಾರೆ. ರಚನೆ-ನಿರ್ದೇಶನ ವೆಂಕಟ್ ಪ್ರಭು, ಸಂಗೀತ ಯುವನ್ ಶಂಕರ್‌ರಾಜ್, ಛಾಯಾಗ್ರಹಣ ರಿಚರ್ಡ್ ಎಂ. ನಾಥನ್, ಸಂಕಲನ ಪ್ರವೀಣ್ ಕೆ.ಎಲ್., ಸಾಹಸ ಸ್ಟಂಟ್ ಶಿವ, ನೃತ್ಯ ರಾಜು ಸುಂದರಂ ಅವರದ್ದಾಗಿದೆ. ಸುರೇಶ್ ಕಮತ್‌ಚಿ ’ವಿ ಹೌಸ್ ಪ್ರೊಡಕ್ಷನ್’ ಮೂಲಕ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ತಾರಾಗಣದಲ್ಲಿ ಕಲ್ಯಾಣಿ, ಪ್ರಿಯದರ್ಶನ್, ಎಸ್.ಎ.ಚಂದ್ರಶೇಖರ್, ಎಸ್.ಜೆ.ಸೂರ್ಯ, ಪ್ರೇಮ್‌ಗಿ ಅಮರೆನ್, ಕರುಣಾಕರನ್ ಮುಂತಾದವರಿದ್ದಾರೆ.