ಕರ್ನಾಟಕ

karnataka

By

Published : Oct 4, 2020, 2:50 PM IST

Updated : Oct 4, 2020, 3:27 PM IST

ETV Bharat / sitara

ಕಾನೂನಿನಿಂದಲ್ಲ, ಪ್ರೀತಿಯಿಂದ ಕನ್ವಿನ್ಸ್ ಮಾಡುವೆ.. ಕೆ.ಕಲ್ಯಾಣ ಹೃದಯದಲ್ಲಿನ್ನೂ ಪತ್ನಿ ಬಗ್ಗೆ ಪ್ರೇಮ'ರಾಗ'!!

ವಿಚ್ಛೇದನ ಕುರಿತು ನನಗೆ ಯಾವುದೇ ನೋಟಿಸ್ ಬಂದಿಲ್ಲ. ಹೆಂಡತಿಯನ್ನು ಕಾನೂನಿನಿಂದ ಕನ್ವಿನ್ಸ್​ ಮಾಡುವುದಿಲ್ಲ, ಪ್ರೀತಿಯಿಂದ ಕನ್ವಿನ್ಸ್​ ಮಾಡುತ್ತೇನೆ. ಕೌನ್ಸೆಲಿಂಗ್​​ನಲ್ಲಿ ಪರಸ್ಪರ ಮಾತುಕತೆ ನಡೆಯುತ್ತೆ, ಪ್ರೀತಿ ಉಳಿಯುತ್ತೆ ಎಂಬ ನಂಬಿಕೆ ಇದೆ. ಇದೇ ಬೆಳಗಾವಿಯಲ್ಲಿ ಹೆಂಡತಿ ಜತೆ ಸೇರಿ ಹಾಡು ಬರೆದು ನನ್ನ ಪತ್ನಿಯಿಂದ ಹಾಡಿಸುತ್ತೇನೆ‌‌..

Lyricist k. kalyan pressmeet in belgavi
ಕೆ. ಕಲ್ಯಾಣ್​

ಬೆಳಗಾವಿ: 14 ವರ್ಷಗಳಿಂದ ನಾನು-ಪತ್ನಿ ಅನ್ಯೋನ್ಯವಾಗಿ ಜೀವನ ನಡೆಸಿಕೊಂಡು ಬಂದಿದ್ದೇವೆ. ನಾವಿಬ್ಬರೂ ಒಂದಾಗುತ್ತೇವೆ ಎಂಬ ವಿಶ್ವಾಸ ನನ್ನಲ್ಲಿದೆ ಎಂದು ದಾಂಪತ್ಯ ಕಲಹದ ಬಗ್ಗೆ ಎದ್ದಿರುವ ಗೊಂದಲಗಳಿಗೆ ಚಿತ್ರ ಸಾಹಿತಿ ಕೆ.‌ಕಲ್ಯಾಣ ಪ್ರತಿಕ್ರಿಯೆ ನೀಡಿದರು.

ಪೂಜಾ ವಸ್ತುಗಳು

ಬೆಳಗಾವಿಯ ಖಾಸಗಿ ಹೋಟೆಲ್​ನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ನಾನು ನನ್ನ ಹೆಂಡತಿ ಚೆನ್ನಾಗಿದ್ದೇವೆ. ಯಾವುದೇ ಭಿನ್ನಾಭಿಪ್ರಾಯ ಇಲ್ಲ. ನಮ್ಮದು 14 ವರ್ಷದ ದಾಂಪತ್ಯ ಜೀವನ. ನಮ್ಮ ಸಂಸಾರ ಚೆನ್ನಾಗಿದೆ. ನಮ್ಮ ತಂದೆ ತಾಯಿ ಮೃತಪಟ್ಟ ಬಳಿಕ ಪತ್ನಿ ಅಶ್ವಿನಿಯ ತಂದೆ ತಾಯಿ ನಾನು ಒಟ್ಟಾಗಿ ಒಂದೇ ಕಡೆ ಇದ್ದೇವೆ. ನಮ್ಮ ಮನೆಗೆ ಅಡುಗೆ ಕೆಲಸಕ್ಕೆಂದು ಗಂಗಾ ಕುಲಕರ್ಣಿ ಎಂಬ ಮಹಿಳೆ ಬಂದಳು.

ಗಂಗಾ ಬಂದ ನಾಲ್ಕು ದಿನಗಳ ನಂತರ ನನ್ನ ಪತ್ನಿ ಡಲ್ ಆಗ್ತಾ ಬಂದಳು. ಆಗ ಗಂಗಾ ಕುಲಕರ್ಣಿ ಹೇಳಿದಂತೆ ನಮ್ಮ ಅತ್ತೆ ಪೂಜೆ ಮಾಡೋಕೆ ಶುರು ಮಾಡಿದ್ರು. ಇದಾದ ಬಳಿಕ ಬಾಗಲಕೋಟೆಯಲ್ಲಿ ನಮ್ಮ ಗುರುಗಳು ಇದ್ದಾರೆ ಎಂದು ಗಂಗಾ ನನ್ನ ಪತ್ನಿ ಅಶ್ವಿನಿ, ಮಾವ ಹಾಗೂ ಅತ್ತೆ ಗಮನಕ್ಕೆ ತಂದರು. ನನಗೂ ಒಂದು ಸಲ ಗುರೂಜಿ ಶಿವಾನಂದ ವಾಲಿ ಜೊತೆಗೆ ಫೋನ್​ನಲ್ಲಿ ಮಾತನಾಡಿಸಿದರು. ಪೂಜೆ ಮಾಡಬೇಕು‌ ಅಂತಾ ಶಿವನಾಂದ ವಾಲಿ ಅಕೌಂಟಿಗೆ ಲಕ್ಷಗಟ್ಟಲೇ ಹಣ ವರ್ಗಾವಣೆ ಮಾಡಲಾಗಿತ್ತು.

ಬೆಳಗಾವಿಯಲ್ಲಿರುವ ಅತ್ತೆ ಮಾವನ ಹೆಸರಿನಲ್ಲಿರುವ ಜಾಗ ಕೂಡ ಶಿವಾನಂದ ವಾಲಿ ಹೆಸರಿಗೆ ಮಾಡಿಕೊಂಡಿದ್ದರು. ಕಳೆದ ವರ್ಷವಷ್ಟೇ ಪರಿಚಯವಾದ ಶಿವಾನಂದ ವಾಲಿ ಅಕೌಂಟ್‌ಗೆ‌ ಅಂದಾಜು ₹20 ಲಕ್ಷ ಹೋಗಿರಬಹುದು. ನಂತರ ಪತ್ನಿ, ಅತ್ತೆ-ಮಾವನ ಜತೆಗೆ ಬೆಳಗಾವಿಗೆ ಬಂದಳು. ಕೆಲವು ದಿನಗಳ ನಂತರ ಬೆಳಗಾವಿಗೆ ಪತ್ನಿ ನೋಡಲು ಬಂದಾಗ ನನ್ನ ಅತ್ತೆ ಬಿಡಲಿಲ್ಲ, ಅಲ್ಲಿ ಗಂಗಾ ಕುಲಕರ್ಣಿ ಕೂಡ ಇದ್ದಳು. ಮನೆಯಲ್ಲಿ ವಿಚಿತ್ರ ಪೂಜೆ ಮಾಡುತ್ತಿರುವುದು ಗೊತ್ತಾಯಿತು.

ನಂತರ ನನ್ನ ನಂಬರ್ ಬ್ಲಾಕ್ ಮಾಡಿಸಿದರು. ಮೂರೂವರೆ ತಿಂಗಳು ಕಾಲ ಪತ್ನಿ ಸಂಪರ್ಕಕ್ಕೆ ಸಿಗಲಿಲ್ಲ‌. ಇದಾದ ಬಳಿಕ ಕಾನೂನು ತಜ್ಞರ ಸಲಹೆ ಪಡೆದು ಮಾಳಮಾರುತಿ ಠಾಣೆಯಲ್ಲಿ ದೂರು ದಾಖಲಿಸಿದೆ. 14 ವರ್ಷದಲ್ಲಿ ಪತ್ನಿ ತವರು ಮನೆಯ ಆಸ್ತಿ ಬಗ್ಗೆ ನಾನು ತಲೆ ಕೆಡಿಸಿಕೊಂಡಿಲ್ಲ. ಮಾನಸಿಕವಾಗಿ, ದೈಹಿಕವಾಗಿ ಕಿರುಕುಳ ಕೊಟ್ಟೆ ಅನ್ನುವುದು ಸುಳ್ಳು ಎಂದ್ರು.

ಕೆ.ಕಲ್ಯಾಣ್​ ಮಾಟ ಮಂತ್ರ ಮಾಡ್ತಾರೆ ಎಂಬ ಆರೋಪ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಮಾಟ ಮಂತ್ರ ನಾನು ನಂಬುವುದಿಲ್ಲ. ಅದು ಮಾನಸಿಕ ದೌರ್ಬಲ್ಯ ಇರುವವರ ಮೇಲೆ ಮಾಡುವ ದೌರ್ಜನ್ಯ. ನಾನು ಮಾಟಮಂತ್ರ ಮಾಡೋದಾಗಿದ್ರೇ ಪತ್ನಿಯನ್ನು ಬೆಂಗಳೂರಿನಿಂದ ಬೆಳಗಾವಿಗೆ ಬರುವುದನ್ನ ತಡೆಯಬಹುದಿತ್ತು. ಅರ್ಧಗಂಟೆಯೂ ನನ್ನ ಬಿಟ್ಟು ಇರದ ನನ್ನ ಹೆಂಡತಿ ಒಂಬತ್ತು ತಿಂಗಳು ನನ್ನ ಜತೆಗೆ ಮಾತಾಡುವುದಿಲ್ಲ ಅಂತಾದ್ರೇ, ನನ್ನ ಹೆಂಡತಿಗೆ ಯಾರೋ ಮಿಸ್ ಗೈಡ್ ಮಾಡಿದ್ದಾರೆ ಎಂದ್ರು. ಇನ್ನೂ ನನ್ನ ಹೆಂಡತಿ‌ ವಾಸವಿದ್ದ ಮನೆಗೆ ಹೋಗಿ ಪೊಲೀಸರು ನೋಡಿದಾಗ ಮಾಟ ಮಂತ್ರ ವಸ್ತುಗಳು ಪತ್ತೆಯಾಗಿವೆ ಎಂದು ತಿಳಿಸಿದ್ರು.

ವಿಚ್ಛೇದನ ಕುರಿತು ನನಗೆ ಯಾವುದೇ ನೋಟಿಸ್ ಬಂದಿಲ್ಲ. ಹೆಂಡತಿಯನ್ನು ಕಾನೂನಿನಿಂದ ಕನ್ವಿನ್ಸ್​ ಮಾಡುವುದಿಲ್ಲ, ಪ್ರೀತಿಯಿಂದ ಕನ್ವಿನ್ಸ್​ ಮಾಡುತ್ತೇನೆ. ಕೌನ್ಸೆಲಿಂಗ್​​ನಲ್ಲಿ ಪರಸ್ಪರ ಮಾತುಕತೆ ನಡೆಯುತ್ತೆ, ಪ್ರೀತಿ ಉಳಿಯುತ್ತೆ ಎಂಬ ನಂಬಿಕೆ ಇದೆ. ಇದೇ ಬೆಳಗಾವಿಯಲ್ಲಿ ಹೆಂಡತಿ ಜತೆ ಸೇರಿ ಹಾಡು ಬರೆದು ನನ್ನ ಪತ್ನಿಯಿಂದ ಹಾಡಿಸುತ್ತೇನೆ‌‌ ಎಂದ್ರು.

ಕೆ.ಕಲ್ಯಾಣ ಪರ ವಕೀಲ ಜಾಹೀರ್ ಅಬ್ಬಾಜ್ ಹತ್ತರಕಿ ಮಾತನಾಡಿ, ವಿಚ್ಛೇದನದ ಬಗ್ಗೆ ನಮಗೆ ಮಾಧ್ಯಮದ ಮುಖಾಂತರ ಗೊತ್ತಾಗಿದೆ. ಕೋರ್ಟ್‌ನಿಂದ ಸಮನ್ಸ್ ನಮಗೆ ಬಂದಿಲ್ಲ. ಈ ಪ್ರಕರಣದಲ್ಲಿ ಮೌಢ್ಯತೆ ಕಾಯ್ದೆ ಕಾನೂನು ಅನ್ವಯಿಸುತ್ತಾ, ಇಲ್ವಾ ಗೊತ್ತಿಲ್ಲ. ಈ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೇವೆ. ಕೆ.ಕಲ್ಯಾಣ ಪತ್ನಿ ವಶೀಕರಣಕ್ಕೊಳಗಾಗಿರಬಹುದು. ಕೌನ್ಸೆಲಿಂಗ್​ ಆಗಲಿ, ಶಿವಾನಂದ ವಾಲಿ ಮತ್ತು ಗಂಗಾ ಕುಲಕರ್ಣಿ ಬಂಧನ ಕುರಿತು ಅಧಿಕೃತ ಮಾಹಿತಿ ಇಲ್ಲ ಎಂದರು.

Last Updated : Oct 4, 2020, 3:27 PM IST

ABOUT THE AUTHOR

...view details