ಕನ್ನಡದ ಸುಂದರ ನಟ ನೆನಪಿರಲಿ ಪ್ರೇಮ್ ಈಗ 25ನೇ ಸಿನಿಮಾ ಸಂತಸದಲ್ಲಿದ್ದಾರೆ. ಅದೇ ‘ಲವ್ ರೀವಿಸಿಟೆಡ್ ’ ಉಪ ಶೀರ್ಷಿಕೆಯುಳ್ಳ ಚಿತ್ರ ‘‘ಪ್ರೇಮಂ ಪೂಜ್ಯಂ’. ಚಿತ್ರದ ಮೂರು ನಿರ್ಮಾಪಕರುಗಳು ಹಾಗೂ ಸಂಗೀತ ಮತ್ತು ನಿರ್ದೇಶನ ಮಾಡಿರುವವರು ವೈದ್ಯಕೀಯ ವೃತ್ತಿಯಿಂದ ಬಂದವರು. ಹಾಗಾಗಿ ಇದು ಡೈರೆಕ್ಟರ್ ಸಿನಿಮಾ ಅನ್ನೋದಕ್ಕಿಂತ ಹೆಚ್ಚಾಗಿ ಡಾಕ್ಟರ್ಸ್ ಸಿನಿಮಾ.
ಮೊದಲ ಬಾರಿಗೆ ವಿಯಟ್ನಾಂನಲ್ಲಿ 4000 ಕಿ.ಮೀ. ಪ್ರಯಾಣ ಮಾಡಿ ಚಿತ್ರೀಕರಣ ಮಾಡಿರುವ ಮೊದಲ ಕನ್ನಡ ಸಿನಿಮಾ ‘ಪ್ರೇಮಂ ಪೂಜ್ಯಂ’. ಎರಡು ಹಾಡಿನ ಚಿತ್ರೀಕರಣ ಇಲ್ಲಿ ನಡೆದಿದೆ. 15 ದಿವಸ 54 ಚಿತ್ರತಂಡದ ಸದಸ್ಯರು ಲಾಕ್ಡೌನ್ಗಿಂತ ಮುಂಚೆಯೇ ಚಿತ್ರೀಕರಣ ಮುಗಿಸಿ ಬಂದಿದ್ದಾರೆ. ಈ ಸಿನಿಮಾದಲ್ಲಿ ಲವ್ಲಿ ಸ್ಟಾರ್ ಪ್ರೇಮ್ 9 ಅವತಾರಗಳಲ್ಲಿ ಕಾಣಿಸಿದ್ದಾರೆ. ಕ್ಲೀನ್‌ಶೇವ್, ಗಡ್ಡದಾರಿ, ಸ್ಟೈಲಿಶ್ ಯುವಕ, ಧರ್ಮ ಶಾಲಾ (ಹಿಮಾಚಲ ಪ್ರದೇಶ) ಪೋರ್ಶನ್, ಹೀಗೆ ವಿವಿಧ ಗೆಟಪ್ಗಳಲ್ಲಿ ಕಾನಿಸಿಕೊಂಡಿದ್ದಾರೆ.