ಏಳು ಕಥೆಗಳು, 7 ನಿರ್ದೇಶಕರು, ಆದರೆ ಸಿನಿಮಾ ಒಂದೇ. ಪ್ರಯೋಗಾತ್ಮಕ ಚಿತ್ರಗಳ ಮೂಲಕ ಗಮನ ಸೆಳೆದಿರುವ ನಟ-ನಿರ್ದೇಶಕ ರಿಷಭ್ ಶೆಟ್ಟಿ, ಈಗ 7 ಕಥೆಗಳ 'ಕಥಾಸಂಗಮ' ಚಿತ್ರವನ್ನು ನಿರ್ಮಾಣ ಮಾಡುವುದರ ಜೊತೆಗೆ ಆ ಸಿನಿಮಾದಲ್ಲಿ ಒಬ್ಬ ಭಿಕ್ಷುಕನ ಪಾತ್ರದಲ್ಲಿ ಕೂಡಾ ಕಾಣಿಸಿದ್ದಾರೆ.
'ಕಥಾಸಂಗಮ' ಟ್ರೇಲರ್ಗೆ ಬೋಲ್ಡ್ ಆದ್ರು ಲವ್ಲಿ ಸ್ಟಾರ್ ಪ್ರೇಮ್, ಅವರು ಹೇಳಿದ್ದೇನು? - ಕಥಾಸಂಗಮ ಚಿತ್ರದ ಟ್ರೈಲರ್ ಮೆಚ್ಚಿದ ನಟ ಪ್ರೇಮ್
'ಕಥಾಸಂಗಮ' ಟ್ರೇಲರ್ ನೋಡಿದ ಬಳಿಕ ಚಿತ್ರವನ್ನು ಯಾವಾಗ ನೋಡುತ್ತೇವೋ ಎಂದು ಕಾತರದಿಂದ ಕಾಯುತ್ತಿದ್ದೇವೆ. ಹೊಸ ಪ್ರಯತ್ನ ಮಾಡಿರುವ ರಿಷಭ್ ಶೆಟ್ಟಿ ಹಾಗೂ ಇಡೀ ಚಿತ್ರತಂಡಕ್ಕೆ ಒಳ್ಳೆಯದಾಗಲಿ ಎಂದು ನಟ ಪ್ರೇಮ್ ಚಿತ್ರಕ್ಕೆ ಶುಭ ಕೋರಿದ್ದಾರೆ.
!['ಕಥಾಸಂಗಮ' ಟ್ರೇಲರ್ಗೆ ಬೋಲ್ಡ್ ಆದ್ರು ಲವ್ಲಿ ಸ್ಟಾರ್ ಪ್ರೇಮ್, ಅವರು ಹೇಳಿದ್ದೇನು?](https://etvbharatimages.akamaized.net/etvbharat/prod-images/768-512-4993392-thumbnail-3x2-prem.jpg)
ಕಳೆದವಾರ 'ಕಥಾಸಂಗಮ' ಚಿತ್ರದ ಟ್ರೇಲರ್ ಬಿಡುಗಡೆ ಆಗಿದ್ದು ಚಿತ್ರದ ಟ್ರೇಲರ್ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ರಿಷಭ್ ಶೆಟ್ಟಿ ವಿನೂತನ ಪ್ರಯತ್ನಕ್ಕೆ ಇಡೀ ಸ್ಯಾಂಡಲ್ವುಡ್ ಅವರ ಬೆನ್ನುತಟ್ಟಿದೆ. ಈಗ ಲವ್ಲಿ ಸ್ಟಾರ್ ಪ್ರೇಮ್ ಕೂಡಾ 'ಕಥಾಸಂಗಮ' ಚಿತ್ರದ ಟ್ರೇಲರ್ ನೋಡಿ ಬೋಲ್ಡ್ ಆಗಿದ್ದಾರೆ. ಅಲ್ಲದೆ ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. 'ಇತ್ತೀಚಿಗೆ ಕನ್ನಡ ಚಿತ್ರರಂಗದಲ್ಲಿ ಪ್ರಯೋಗಾತ್ಮಕ ಚಿತ್ರಗಳ ಸಂಖ್ಯೆ ಹೆಚ್ಚಾಗಿದೆ. ಅಲ್ಲದೆ ಕನ್ನಡ ಚಿತ್ರರಂಗದ ಹೆಸರು ಹೊರ ರಾಜ್ಯಗಳಲ್ಲೂ ಹಬ್ಬಿದ್ದು ಇದು ತುಂಬಾ ಸಂತೋಷದ ಸಂಗತಿಯಾಗಿದೆ. ಈಗ ಈ ಪಟ್ಟಿಗೆ 'ಕಥಾಸಂಗಮ' ಕೂಡಾ ಸೇರಿಕೊಂಡಿದೆ. ರಿಷಭ್ ಶೆಟ್ಟಿ ಬ್ಯಾನರ್ನಲ್ಲಿ ಬಂದಿರುವ ಈ ಚಿತ್ರವನ್ನು ಏಳು ಮಂದಿ ನಿರ್ದೇಶಕರು ಏಳು ಮಂದಿ ಕ್ಯಾಮರಾಮ್ಯಾನ್ಗಳು ಬಹಳ ಅದ್ಭುತವಾಗಿ ಒಂದೊಂದು ಭಾಗವನ್ನು ನೀಡಿದ್ದಾರೆ. ಈ ಚಿತ್ರವನ್ನು ಯಾವಾಗ ನೋಡುತ್ತೇವೋ ಎನ್ನುವಷ್ಟು ಕಾತರವನ್ನು ಹುಟ್ಟುಹಾಕಿದೆ. ರಿಷಭ್ ಶೆಟ್ಟಿ ಹಾಗೂ ಹರಿಪ್ರಿಯ ಅಭಿನಯಿಸಿರುವ ಭಾಗವನ್ನು ನಿರ್ದೇಶಿಸಿರುವ ಕಿರಣ್ ರಾಜ್ ಬಹಳ ಪ್ರತಿಭಾವಂತ. ಕಿರಣ್ ರಾಜ್ ಹಾಗೂ ಉಳಿದ ಆರು ನಿರ್ದೇಶಕರಿಗೆ ಹಾಗೂ ಹೊಸ ಪ್ರಯತ್ನ ಮಾಡಿರುವ ರಿಷಭ್ ಶೆಟ್ಟಿ ಅವರಿಗೆ ಒಳ್ಳೆಯದಾಗಲಿ' ಎಂದು ಲವ್ಲಿ ಸ್ಟಾರ್ ಪ್ರೇಮ್ ' ಕಥಾ ಸಂಗಮ' ಚಿತ್ರಕ್ಕೆ ಶುಭ ಕೋರಿದ್ದಾರೆ.