ಸ್ಯಾಂಡಲ್ವುಡ್ನಲ್ಲಿ ಫೋಟೋ ಶೂಟ್ನಿಂದಲೇ ಟಾಕ್ ಆಗುತ್ತಿರುವ ಸಿನಿಮಾ ಲವ್ ಯು ರಚ್ಚು. ಅಜಯ್ ರಾವ್ ಹಾಗೂ ರಚಿತಾ ರಾಮ್ ಒಟ್ಟಿಗೆ ಸ್ಕ್ರೀನ್ ಹಂಚಿಕೊಂಡಿರುವ ಚಿತ್ರ ಇದಾಗಿದೆ. ಚಿತ್ರದ ಪೋಸ್ಟರ್ ಹಾಗೂ ಹಾಡುಗಳಿಂದಲೇ ಡಿಮ್ಯಾಂಡ್ ಹೆಚ್ಚಿಸಿಕೊಂಡಿರುವ ಚಿತ್ರದ ಟ್ರೇಲರ್ ಅನಾವರಣ ಮಾಡಲಾಗಿದೆ.
ಆಂಜನೇಯನ ಮಹಾನ್ ಭಕ್ತ ಧ್ರುವ ಸರ್ಜಾ 'ಲವ್ ಯು ರಚ್ಚು' ಚಿತ್ರದ ಟ್ರೇಲರ್ ಲಾಂಚ್ ಮಾಡಿದ್ದಾರೆ. ಸದ್ಯ ಅಜಯ್ ರಾವ್ ಹಾಗೂ ರಚಿತಾ ರಾಮ್ ರೊಮ್ಯಾಂಟಿಕ್ ಕೆಮಿಸ್ಟ್ರಿ ವರ್ಕ್ ಔಟ್ ಆಗಿದೆ. ಟ್ರೇಲರ್ನಲ್ಲಿ ಮುದ್ದಾದ ಲವ್ ಸ್ಟೋರಿ, ಸಸ್ಪೆನ್ಸ್ ಹಾಗೂ ಥ್ರಿಲ್ಲಿಂಗ್ ಎಲಿಮೆಟ್ಸ್ನೊಂದಿಗೆ ಮರ್ಡರ್ ಮಿಸ್ಟ್ರಿ ಕಥೆ ಒಳಗೊಂಡಿದೆ ಅನಿಸುತ್ತೆ. ಈ ಚಿತ್ರದ ಕ್ರಿಯೇಟಿವ್ ಹೆಡ್ ಆಗಿರುವ ಗುರು ದೇಶಪಾಂಡೆ ನಿರ್ಮಿಸುತ್ತಿರುವ ಲವ್ ಯು ರಚ್ಚು ಚಿತ್ರಕ್ಕೆ ಶಂಕರ್ ಎಸ್. ರಾಜ್ ನಿರ್ದೇಶನವಿದೆ.
ಕೃಷ್ಣನ್ ಲವ್‌ಸ್ಟೋರಿ, ಕೃಷ್ಣಲೀಲಾ ಸಿನಿಮಾಗಳ ಸಕ್ಸಸ್ ನಂತರ ನಿರ್ದೇಶಕ ಶಶಾಂಕ್, ನಟ ಅಜೇಯ್ ರಾವ್ ಅವರಿಗಾಗಿಯೇ ಮಾಡಿಕೊಂಡಿದ್ದ ಕಥೆ ಇದಾಗಿದ್ದು, ಚಿತ್ರಕ್ಕೆ ಶಶಾಂಕ್ ಕಥೆಯ ಜೊತೆಗೆ ಚಿತ್ರಕಥೆ, ಸಂಭಾಷಣೆಯನ್ನ ಬರೆದಿದ್ದಾರೆ.