ಕರ್ನಾಟಕ

karnataka

ETV Bharat / sitara

'ಲವ್ ಯು ರಚ್ಚು' ಸಿನಿಮಾದಲ್ಲಿ ಬ್ಯಾಕ್‌ಲೆಸ್ ಆದ ಡಿಂಪಲ್‌ ಕ್ವೀನ್ - ಕನ್ನಡ ಲವ್​ ಯೂ ರಚ್ಚು ಸಿನಿಮಾ

'ಐ ಲವ್ ಯೂ' ಸಿನಿಮಾದಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದ ರಚಿತಾ ರಾಮ್ ಈಗ 'ಲವ್ ಯೂ ರಚ್ಚು' ಸಿನಿಮಾದಲ್ಲಿ ಬ್ಯಾಕ್‌ಲೆಸ್ ಆಗಿ ಯುವಕರ ಹಾರ್ಟ್​ ಬೀಟ್​ ಹೆಚ್ಚಾಗುವಂತೆ ಮಾಡಿದ್ದಾರೆ.

love-you-rachchu-film-rachita-ram-hot-photos
ರಚಿತಾ ರಾಮ್

By

Published : Nov 8, 2021, 8:38 PM IST

ಕೃಷ್ಣ ಅಜಯ್ ರಾವ್ ಹಾಗು ಡಿಂಪಲ್ ಕ್ವೀನ್ ರಚಿತಾ ರಾಮ್‌‌‌ ಮೊದಲ ಬಾರಿಗೆ ಸ್ಕ್ರೀನ್ ಹಂಚಿಕೊಂಡಿರುವ 'ಲವ್ ಯೂ ರಚ್ಚು' ಸಿನಿಮಾ ಸಿನಿಪ್ರಿಯರ ಗಮನ ಸೆಳೆಯುತ್ತಿದೆ. ಬಹುತೇಕ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಇದೀಗ ಸಿನಿಮಾ ಬಿಡುಗಡೆ ಸಜ್ಜಾಗಿದೆ.

ಡಿಂಪಲ್​ ಕ್ವೀನ್​ ಸದ್ಯ ಹಾಟ್​​ ಗ್ಲಾಮರ್​ ಗೊಂಬೆ ಆಗಿ ಬದಲಾಗಿದ್ದಾರೆ. ಹೌದು, ಅದಕ್ಕೆ ಸಾಕ್ಷಿ ಲವ್ ಯು ರಚ್ಚು ಸಿನಿಮಾದ ಈ ಫೋಟೋಗಳು. ಈಗಾಗಲೇ ಸಿನಿಮಾದ ಹಾಟ್ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಪಡ್ಡೆ ಹುಡುಗರ ನಿದ್ದೆಗೆಡಿಸಿವೆ. ಈ ಹಿಂದೆ 'ಐ ಲವ್ ಯೂ' ಸಿನಿಮಾದಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದ ರಚಿತಾ ರಾಮ್ ಈಗ ಹೊಸ ಸಿನಿಮಾದಲ್ಲಿ ಬ್ಯಾಕ್‌ಲೆಸ್ ಆಗಿದ್ದಾರೆ.


ಈಗಾಗಲೇ ಚಿತ್ರದ ಮೇಕಿಂಗ್ ವಿಡಿಯೋ ಮತ್ತು ಟೀಸರ್ ಹೊರಬಂದು ಸಿನಿಮಾ‌ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ಇದೀಗ ಚಿತ್ರತಂಡ ಮುದ್ದು ನೀನೆ ಅನ್ನೋ ಹಾಡನ್ನು ಬಿಡುಗಡೆ ಮಾಡೋ ಪ್ಲಾನ್​ನಲ್ಲಿದ್ದಾರೆ. ಆ ಹಾಡಿನಲಿ ರಚಿತಾ ಇಷ್ಟೊಂದು ಬೋಲ್ಡ್ ಆಗಿ ನಟಿಸಿದ್ದಾರಂತೆ. ದಕ್ಷಿಣ ಭಾರತದ ಖ್ಯಾತ ಗಾಯಕ ಸಿದ್ದು ಶ್ರೀರಾಮ್ ಈ ಹಾಡಿಗೆ ಧ್ವನಿಯಾಗಿದ್ದು, ಮಣಿಕಾಂತ್ ಕಂದ್ರಿ ಮ್ಯೂಸಿಕ್ ಮಾಡಿದ್ದಾರೆ.


ಶಂಕರ್ ರಾಜ್ ಆಕ್ಷನ್ ಕಟ್ ಹೇಳಿರೋ 'ಲವ್ ಯೂ ರಚ್ಚು' ಚಿತ್ರವನ್ನು ನಿರ್ದೇಶಕ ಕಮ್ ನಿರ್ಮಾಪಕ ಗುರುದೇಶ್ ಪಾಂಡೆ ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ. ಸದ್ಯ ರಚ್ಚು ಹಾಟ್ ಸ್ಟಿಲ್ಸ್ ನೋಡಿ ಫಿದಾ ಆಗಿರೋ ಫ್ಯಾನ್ಸ್, ಇನ್ನೂ ಸಿನಿಮಾದ ಸಾಂಗ್ ನೋಡಿದ್ರೆ ಕಳೆದು ಹೋಗೋದು ಗ್ಯಾರಂಟಿ. ಸದ್ಯದಲ್ಲೇ ಲವ್ ಯು ರಚ್ಚು ಸಿನಿಮಾದ ಹಾಡು ಬಿಡುಗಡೆ ಆಗಲಿದೆ.


ABOUT THE AUTHOR

...view details