ಕರ್ನಾಟಕ

karnataka

ETV Bharat / sitara

ಕಿಚ್ಚನಿಂದ ಲಾಂಚ್​​ ಆಯ್ತು ಲವ್ ಮಾಕ್ಟೈಲ್ ಆಡಿಯೋ! - Love moctail Audio Released by Kicha

ಕೃಷ್ಣ ನಿರ್ದೇಶನದ ಲವ್ ಮಾಕ್ಟೈಲ್ ಚಿತ್ರದ ಆಡಿಯೋವನ್ನು ಕಿಚ್ಚ ಸುದೀಪ್ ಲಾಂಚ್​ ಮಾಡಿದ್ರು. ಅಲ್ಲದೇ ಲವ್ ಮಾಕ್ಟೈಲ್ ಚಿತ್ರದ ಟ್ರೇಲರ್​ಗೆ​​ಕಿಚ್ಚ ಸುದೀಪ್ ವಾಯ್ಸ್ ನೀಡುವ ಮೂಲಕ ಮದರಂಗಿ ಕೃಷ್ಣನಿಗೆ ಸಾಥ್​​​ ನೀಡಿದ್ದಾರೆ.

Love moctail Audio Released by Kicha
ಕಿಚ್ಚನಿಂದ ಲಾಂಚ್​​ ಆಯ್ತು ಲವ್ ಮಾಕ್ಟೈಲ್ ಆಡಿಯೋ!

By

Published : Jan 17, 2020, 8:17 AM IST

ಟೈಟಲ್, ಟ್ರೇಲರ್ ಮತ್ತು ಹಾಡುಗಳಿಂದಲೇ ಸಿನಿಪ್ರಿಯರಿಗೆ ಮತ್ತೇರಿಸಿದ ಕೃಷ್ಣ ನಿರ್ದೇಶನದ ಲವ್ ಮಾಕ್ಟೈಲ್ ಚಿತ್ರದ ಆಡಿಯೋವನ್ನು ಕಿಚ್ಚ ಸುದೀಪ್ ಲಾಂಚ್​ ಮಾಡಿದ್ರು. ಅಲ್ಲದೇ ಲವ್ ಮಾಕ್ಟೈಲ್ ಚಿತ್ರದ ಟ್ರೇಲರ್​ಗೆ​​ಕಿಚ್ಚ ಸುದೀಪ್ ವಾಯ್ಸ್ ನೀಡುವ ಮೂಲಕ ಮದರಂಗಿ ಕೃಷ್ಣನಿಗೆ ಸಾಥ್​​​ ನೀಡಿದ್ದಾರೆ.

ಸಿನಿಮಾ ಮಾಡೋಕೆ ದುಡ್ಡು ಬೇಕಾಗಿಲ್ಲ. ಸಿನಿಮಾ ಮಾಡಲೇಬೇಕು ಎಂಬ ಇಂಟೆಂಷನ್ ಇರಬೇಕು. ಆ ಇಂಟೆಂಷನ್​​​ನಿಂದಲೇ‌ ಕೃಷ್ಣ ಮೊದಲ ಬಾರಿ ನಿರ್ದೇಶನ ಮಾಡಿ, ನಾಯಕನಾಗಿ ನಟಿಸಿ, ನಿರ್ಮಾಣ ಮಾಡಿದ್ದಾರೆ. ಇಡೀ ಚಿತ್ರತಂಡಕ್ಕೆ ಒಳ್ಳೆದಾಗಲಿ. ಲವ್ ಮಾಕ್ಟೈಲ್ ಚಿತ್ರತಂಡದ ಜೊತೆ ನಾನು ಸದಾ ಇರ್ತೀನಿ ಎಂದು ಕಿಚ್ಚ ಸುದೀಪ್ ಚಿತ್ರತಂಡಕ್ಕೆ ಶುಭ ಹಾರೈಸಿದರು.

ಕಿಚ್ಚನಿಂದ ಲಾಂಚ್​​ ಆಯ್ತು ಲವ್ ಮಾಕ್ಟೈಲ್ ಆಡಿಯೋ!

'ಲವ್ ಮಾಕ್ಟೈಲ್' ಚಿತ್ರ ಲವ್ ಸ್ಟೋರಿ ಸಿನಿಮಾವಾಗಿದ್ದು, ನಾಲ್ಕೈದು ಲವ್ ಸ್ಟೋರಿಗಳ ಮಿಶ್ರಣ. ಅಲ್ಲದೇ ಪ್ರತಿಯೊಬ್ಬರ ಲೈಫಲ್ಲಿ ಕಾಲೇಜು ಮತ್ತು ಸ್ಕೂಲ್ ಲೈಫ್​ನಲ್ಲಿ ಹಲವು ಹುಡುಗ, ಹುಡುಗಿಯರು ಬಂದು ಹೋಗಿರುತ್ತಾರೆ. ಚಿತ್ರದಲ್ಲಿ ಒಂದು ಕ್ಯೂಟ್ ಲವ್ ಸ್ಟೋರಿ ಹೆಣೆಯಲಾಗಿದೆ. ಸ್ವಲ್ಪ ಬೋಲ್ಡ್ ಆಗಿದ್ದರೂ ಯಾರಿಗೂ ಮುಜುಗರವಾಗದಂತೆ ಚಿತ್ರ ಮೂಡಿ ಬಂದಿದೆ ಎಂದು ಮದರಂಗಿ ಕೃಷ್ಣ ಹೇಳಿದರು.

ಚಿತ್ರದಲ್ಲಿ ಮಿಲನ ನಾಗರಾಜ್ ಹಾಗೂ ಅಮೃತ ಇಬ್ಬರು ನಾಯಕಿಯರಿದ್ದು, ಮಿಲನ ನಾಗರಾಜ್ ಅವರಿಗೆ ನಟ ಮದರಂಗಿ ಕೃಷ್ಣರಿಗೆ ನಿರ್ಮಾಣದಲ್ಲಿ ಸಹಕರಿಸಿದ್ದಾರೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ರಘು ದೀಕ್ಷಿತ್ ಸಂಗೀತ ನೀಡಿದ್ದಾರೆ.

ABOUT THE AUTHOR

...view details