ಕರ್ನಾಟಕ

karnataka

ETV Bharat / sitara

ಗಂಡನಿಗೆ ಜಾಡಿಸಿ ಒದ್ದ ಮಿಲನಾ ನಾಗರಾಜ್.. ಕಾರಣ, ಲವ್‌Mocktail2.. - Love mocktail 2 movie preparing to release

ಲವ್ ಮಾಕ್​ಟೈಲ್​ 2 ಸಿನಿಮಾವನ್ನ‌ ಡಾರ್ಲಿಂಗ್ ಕೃಷ್ಣ ನಟಿಸಿ, ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರೀಕರಣ ಮುಗಿಸಿ ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರೋ ಚಿತ್ರದ ಟ್ರೈಲರ್ ಬಿಡುಗಡೆ ಮಾಡಿಲ್ಲ ಅಂತಾ ಕೃಷ್ಣ ಪತ್ನಿ ಮಿಲನಾ ನಾಗರಾಜ್ ಜಾಡಿಸಿ ಒದ್ದಿದ್ದಾರೆ..

Milana Nagaraj
ಕೃಷ್ಣ ಪತ್ನಿ ಮಿಲನಾ ನಾಗರಾಜ್

By

Published : Jan 28, 2022, 5:17 PM IST

ಲವ್ ಮಾಕ್​​ಟೈಲ್ 2020ರ ಆರಂಭದಲ್ಲಿ ಬಿಡುಗಡೆಯಾದ ಸೂಪರ್ ಹಿಟ್ ಸಿನಿಮಾ. ಡಾರ್ಲಿಂಗ್ ಕೃಷ್ಣ ನಟಿಸಿ, ನಿರ್ದೇಶನ ಮಾಡಿದ್ದ ಲವ್ ಮಾಕ್​ಟೈಲ್​ ಸಿನಿಮಾ ಸ್ಯಾಂಡಲ್​ವುಡ್​ನಲ್ಲಿ ಹೊಸ ಅಲೆ ಎಬ್ಬಿಸಿತ್ತು. ಡಾರ್ಲಿಂಗ್ ಕೃಷ್ಣ ಜೋಡಿಯಾಗಿ ಮಿಲನಾ ನಾಗರಾಜ್ ನಟಿಸಿ ಪ್ರೇಕ್ಷಕರ ಕಣ್ಣಲ್ಲಿ ಕಣ್ಣೀರು ತರಿಸಿದ್ದರು.

ಈ ಜೋಡಿ ರೀಲ್ ಅಲ್ಲದೆ ರಿಯಲ್ ಆಗಿ ಗಂಡ-ಹೆಂಡತಿ ಆಗಿದಾರೆ. ಲವ್ ಮಾಕ್​ಟೈಲ್​ ಸಿನಿಮಾ ಸಕ್ಸಸ್ ಬಳಿಕ ಈ ಸ್ಟಾರ್ ಜೋಡಿ ಲವ್ ಮಾಕ್ ಟೈಲ್ ಪಾರ್ಟ್ 2 ಮಾಡ್ತಾ ಇದೆ. ಈ ಸಿನಿಮಾ ವಿಚಾರವಾಗಿ ಮಿಲನಾ ನಾಗರಾಜ್ ಸ್ವತಃ ಗಂಡ ಡಾರ್ಲಿಂಗ್ ಕೃಷ್ಣನಿಗೆ ಜಾಡಿಸಿ ಒದ್ದಿದ್ದಾರೆ.

ಮಿಲನಾ ನಾಗರಾಜ್ ಮಾತನಾಡಿರುವುದು..

ಲವ್ ಮಾಕ್​ಟೈಲ್​ 2 ಸಿನಿಮಾವನ್ನ‌ ಡಾರ್ಲಿಂಗ್ ಕೃಷ್ಣ ನಟಿಸಿ, ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರೀಕರಣ ಮುಗಿಸಿ ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರೋ ಚಿತ್ರದ ಟ್ರೈಲರ್ ಬಿಡುಗಡೆ ಮಾಡಿಲ್ಲ ಅಂತಾ ಕೃಷ್ಣ ಪತ್ನಿ ಮಿಲನಾ ನಾಗರಾಜ್ ಜಾಡಿಸಿ ಒದ್ದಿದ್ದಾರೆ.

ಏಕೆಂದರೆ, ಲವ್ ಮಾಕ್​ಟೈಲ್​ 2 ಸಿನಿಮಾವನ್ನ ಮಿಲನಾ ನಾಗರಾಜ್ ನಿರ್ಮಾಣ ಮಾಡಿದ್ದು, ಟ್ರೈಲರ್ ಬಿಡುಗಡೆ ಮಾಡಿಲ್ಲ‌ ಎಂಬ ಕೋಪ. ಕನ್​​ಫ್ಯೂಜ್ ಆಗ್ಬೇಡಿ ಲವ್ ಮಾಕ್​ಟೈಲ್​ 2 ಚಿತ್ರ ಟ್ರೈಲರ್ ಬಗ್ಗೆ ಮಾಡಿರೋ ವಿಭಿನ್ನ ಪ್ರಮೋಷನ್ ಇದು‌. ಹೌದು. ತಮ್ಮ ಲವ್ ಮಾಕ್​ಟೈಲ್​ ಸಿನಿಮಾದ ಶೈಲಿಯಲ್ಲಿ ಮಿಲನಾ ನಾಗರಾಜ್​, ಡಾರ್ಲಿಂಗ್​ ಕೃಷ್ಣನಿಗೆ ಒದಿಯುತ್ತಾರೆ. ಇವರಿಬ್ಬರ ನಡುವಿನ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಇಬ್ಬರ ನಡುವಿನ ಮಾತುಕತೆ ಹೀಗಿದೆ.

ಕೃಷ್ಣ ಯಾಕ್​ ಚಿನ್ನೀ.. ಅದಕ್ಕೆ ಮಿಲನಾ ನಾಗರಾಜ್: ಏನು.. ಚಿನ್ನಿನಾ? ಯಾವಳೋ ಚಿನ್ನಿ? ಅವ್ರು ಯಾರ್ಯಾರೋ ಟ್ರೇಲರ್​ ರಿಲೀಸ್​ ಮಾಡ್ಕೊಂಡು ಓಡಾಡ್ತಾ ಇದಾರೆ. ನಿಂಗೇನೋ ಬಂದಿರೋದು ದೊಡ್ಡ ರೋಗ? ಟ್ರೇಲರ್​ ರೆಡಿ ಆಗಿ ಒಂದು ತಿಂಗಳಾಯ್ತು ತಾನೆ? ಇವತ್ತು ರಿಲೀಸ್​ ಆಗತ್ತೆ, ನಾಳೆ ರಿಲೀಸ್​ ಆಗತ್ತೆ ಅಂತಾ ನಾನು ಕಾಯ್ತಾನೇ ಇದೀನಿ. ನೀವು ಬೇರೆ ಶೂಟಿಂಗ್​ನಲ್ಲಿ ಮಜಾ ಮಾಡ್ಕೊಂಡು ಓಡಾಡ್ತಾ ಇದೀರಾ? ಅದಕ್ಕೆ ಕೃಷ್ಣ, ನಾನು ಶೂಟಿಂಗ್​ಗೆ ಹೋಗೋದು ಶೂಟಿಂಗ್​ ಮಾಡೋಕೆ. ಮಜಾ ಮಾಡೋಕಲ್ಲ.

ಮಿಲನಾ, ಆಹಾಹಾ.. ನೋಡಿದೀನಿ ನಿಮ್ಮ ರೀಸೆಂಟ್​ ಫೋಟೋಶೂಟ್ ​ನಾ.. ಕೃಷ್ಣ: ಅಲ್ಲಾ.. ಅದು ಏನಾಯ್ತು ಅಂದರೆ, ಮಿಲನಾ ಮನೆಗೆ ಬಂದವರಿಗೆಲ್ಲ ಟ್ರೇಲರ್​ ನೋಡಿ, ಟ್ರೇಲರ್​ ನೋಡಿ ಅಂತಾ ಹಲ್ಲು ಕಿಸ್ಕೊಂಡು ತೋರ್ಸೋಕೆ ಆಗತ್ತೆ. ಟ್ರೇಲರ್​ ಮಾಡಿರೋದು ಜನರಿಗೆ ತೋರಿಸೋಕಾ ಅಥವಾ ಮನೆಗೆ ಬಂದವರಿಗೆ ತೋರಿಸೋಕಾ?. ಕೃಷ್ಣ, ಯಾಕೆ ತೋರಿಸ್ತೀನಿ ಅಂದ್ರೆ.. ಅವರ ಒಪೀನಿಯನ್​ ಬೇಕಾಗತ್ತಲ್ಲಾ…ಇನ್ನು ಮಿಲನಾ ಆಹಾ.. ಒಪೀನಿಯನ್​? ನೀವು ಒಪೀನಿಯನ್​ ತಗೋಳೋದು? ಶೂಟಿಂಗ್​ನಲ್ಲಿ ನಾನು ಏನಾದರೂ ಒಪೀನಿಯನ್​ ಕೊಡೋಕೆ ಬಂದ್ರೆ ಡೈರೆಕ್ಟರ್​ ನಾನಾ ನೀನಾ? ಅಂತಾ ಕಿಂಡಲ್​ ಮಾಡೋಕೆ ಆಗತ್ತೆ. ದುಡ್ಡು ಹಾಕಿ ಕೂತಿರುವ ಪ್ರೊಡ್ಯೂಸರ್​ಗೆ ಏನ್​ ಬೆಲೆ ಇಲ್ವಾ?

ಕೃಷ್ಣ ಅಮ್ಮ.. ಈಗೇನು ಟ್ರೇಲರ್​ ತಾನೆ?. ರಿಲೀಸ್​ ಮಾಡ್ತೀನಿ.. ಮಿಲನಾ, ಹೇ ಫಸ್ಟ್​ ಪಾರ್ಟ್​​ನಲ್ಲೇ ನಾನು ಸತ್ತು ಹೋಗಾಯ್ತು. ಸೆಕೆಂಡ್​ ಪಾರ್ಟ್​ನಲ್ಲಿ ನೀನು ಏನ್​ ಮಾಡಿದರೂ ನಂಗೇನು ಆಗಬೇಕಿದೆ. ನಿನ್ನಿಷ್ಟ ಅಂತಾ ಮಿಲನಾ ನಾಗರಾಜ್ ಕೋಪ ಮಾಡಿಕೊಳ್ಳುತ್ತಾರೆ. ಇದು ಸಿನಿಮಾ ಪ್ರಚಾರಕ್ಕಾಗಿ ಮಾಡಿರೋ ವಿಡಿಯೋ.

ಓದಿ:ಬೊಮ್ಮಾಯಿ ಸರ್ಕಾರದ ಆರು ತಿಂಗಳ ಸಾಧನಾ ಸಮಾರಂಭ : ಕೆಲ ಸಚಿವರ ಅನುಪಸ್ಥಿತಿ

ABOUT THE AUTHOR

...view details