ಕರ್ನಾಟಕ

karnataka

ETV Bharat / sitara

'ಲವ್ ಮಾಕ್​ಟೇಲ್​​' ಸೀಕ್ವೆಲ್ ಸ್ಕ್ರಿಪ್ಟ್​ ಪೂಜೆ ನೆರವೇರಿಸಿದ ಲವ್​ಬರ್ಡ್ಸ್​ - Milana nagaraj Love mock tail 2

ಲಾಕ್​ಡೌನ್ ಸಮಯದಲ್ಲಿ 'ಲವ್ ಮಾಕ್​ಟೇಲ್​​' ಸೀಕ್ವೆಲ್​​​ಗಾಗಿ ಸ್ಕ್ರಿಪ್ಟ್​ ಬರೆದು ಮುಗಿಸಿದ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಇಂದು ಬೆಂಗಳೂರಿನ ದೇವಸ್ಥಾನವೊಂದರಲ್ಲಿ ಸರಳವಾಗಿ ಸ್ಕ್ರಿಪ್ಟ್ ಪೂಜೆ ನೆರವೇರಿಸಿದ್ದಾರೆ.

Love mock tail 2 script pooja
ಸ್ಕ್ರಿಪ್ಟ್​ ಪೂಜೆ

By

Published : Jun 17, 2020, 3:58 PM IST

'ಲವ್ ಮಾಕ್​ಟೇಲ್​​' ಸ್ಯಾಂಡಲ್​​​ವುಡ್​​ನಲ್ಲಿ ಜನರ ಮನಸ್ಸಲ್ಲಿ ಒಂದೊಳ್ಳೆ ಛಾಪು ಮೂಡಿಸಿದ ಚಿತ್ರ. ಸಿನಿಮಾದಲ್ಲಿ ನಾಯಕ ನಾಯಕಿಯಾಗಿ ನಟಿಸಿದ್ದ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ನಿಜಜೀವನದಲ್ಲಿ ಪ್ರೇಮಿಗಳು ಎಂದು ಚಿತ್ರ ಬಿಡುಗಡೆ ನಂತರ ಅಭಿಮಾನಿಗಳಿಗೆ ತಿಳಿಯಿತು.

'ಲವ್ ಮಾಕ್​ಟೇಲ್​​' ಸೀಕ್ವೆಲ್ ಸ್ಕ್ರಿಪ್ಟ್​ ಪೂಜೆ

ಲಾಕ್​ಡೌನ್​ ಸಮಯದಲ್ಲಿ 'ಲವ್ ಮಾಕ್​ಟೇಲ್​​' ಭಾಗ 2 ರ ಸ್ಕ್ರಿಪ್ಟ್​​ ಬರೆದು ಮುಗಿಸಿದ ಈ ಜೋಡಿ, ಇಂದು ಒಳ್ಳೆಯ ದಿನ ಎಂದು ಚಿತ್ರದ ಸ್ಕ್ರಿಪ್ಟ್​ ಪೂಜೆ ನೆರವೇರಿಸಿದೆ. 'ಲವ್ ಮಾಕ್​ಟೇಲ್​​' ಸಿನಿಮಾ ಹಿಟ್ ಆದ ಕಾರಣ ಚಿತ್ರದ ನಿರ್ದೇಶಕ ಕೃಷ್ಣ ಭಾಗ 2 ನ್ನು ತಯಾರಿಸಲು ನಿರ್ಧರಿಸಿದರು. ಲಾಕ್​ಡೌನ್​​ನಲ್ಲಿ ಸುಮ್ಮನೆ ಕುಳಿತು ಸಮಯ ವ್ಯರ್ಥ ಮಾಡದೆ ಚಿತ್ರದ ಸ್ಕ್ರಿಪ್ಟ್ ಬರೆದು ಬೆಂಗಳೂರಿನ ಗಂಗಾನಗರದಲ್ಲಿ ಇರುವ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಸರಳವಾಗಿ ಸ್ಕ್ರಿಪ್ಟ್ ಪೂಜೆಯನ್ನು ಈ ಪ್ರಣಯ ಪಕ್ಷಿಗಳು ಸೇರಿ ನೆರವೇರಿಸಿದ್ದಾರೆ.

'ಲವ್ ಮಾಕ್​ಟೇಲ್​​' ಸೀಕ್ವೆಲ್ ಸ್ಕ್ರಿಪ್ಟ್​ ಪೂಜೆ

ಲಾಕ್​ಡೌನ್​​​​​​​ ಸಂಪೂರ್ಣವಾಗಿ ಸಡಿಲಿಕೆ ಆದ ನಂತರ 'ಲವ್ ಮಾಕ್​ಟೇಲ್​​' ಸೀಕ್ವೆಲ್ ಶೂಟಿಂಗ್ ಆರಂಭಿಸುವುದಾಗಿ ಚಿತ್ರತಂಡ ಹೇಳಿದೆ. ಭಾಗ 1 ರಲ್ಲಿ ಕೆಲಸ ಮಾಡಿದ್ದ ಸಂಗೀತ ನಿರ್ದೇಶಕ ರಘು ದೀಕ್ಷಿತ್, ಎಡಿಟರ್ ಹಾಗೂ ಕ್ಯಾಮರಾಮ್ಯಾನ್ ಕ್ರೇಜಿ ಮೈಂಡ್ ತಂಡ ಮತ್ತೆ ಭಾಗ 2 ರಲ್ಲಿ ಕೆಲಸ ಮಾಡಲಿದ್ದಾರಂತೆ. ಈ ಬಾರಿ ಕೂಡಾ ವರ್ಷದ ಕೊನೆಯಲ್ಲಿ ಸೀಕ್ವೆಲ್ ಬಿಡುಗಡೆ ಮಾಡಲು ಕೃಷ್ಣ ನಿರ್ಧರಿಸಿದ್ದಾರೆ. ಈ ಚಿತ್ರದ ಮೇಲೆ ಕೂಡಾ ನಿರೀಕ್ಷೆ ಹೆಚ್ಚಾಗಿದ್ದು ಜನರ ನಂಬಿಕೆಯನ್ನು ಸಿನಿಮಾ ಹೇಗೆ ಉಳಿಸಿಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕು.

'ಲವ್ ಮಾಕ್​ಟೇಲ್​​' ಸೀಕ್ವೆಲ್ ಸ್ಕ್ರಿಪ್ಟ್​ ಪೂಜೆ

For All Latest Updates

ABOUT THE AUTHOR

...view details