ಕರ್ನಾಟಕ

karnataka

ETV Bharat / sitara

ದೊಡ್ಡ ಪರದೆ ಮೇಲೆ ಲವ್​ ಮಾಕ್​ಟೈಲ್​​: ಇದೇ 16ಕ್ಕೆ ರಿ ರಿಲೀಸ್​​​ - ಡಾರ್ಲಿಂಗ್​​ ಕೃಷ್ಣ

ಲಾಕ್​ಡೌನ್​ ವೇಳೆ ಸೂಪರ್​ ಹಿಟ್​​ ಕೊಟ್ಟಿದ್ದ ಲವ್​ ಮಾಕ್​ಟೈಲ್​ ಸಿನಿಮಾ ಇದೇ 16ಕ್ಕೆ ರಿ ರಿಲೀಸ್​ ಆಗುತ್ತಿದೆ.

love Macktile move re release
ದೊಡ್ಡ ಪರದೆ ಮೇಲೆ ಲವ್​ ಮಾಕ್​ಟೈಲ್​ : ಇದೇ 15ಕ್ಕೆ ರಿ ರಿಲೀಸ್​​​

By

Published : Oct 7, 2020, 10:58 PM IST

ಲವ್ ಮಾಕ್ ಟೈಕ್ ಚಿತ್ರಮಂದಿರಗಳಿಗಿಂತ, ಡಿಜಿಟಲ್ ಪ್ಲಾಟ್ ಫಾರ್ಮ್​​​ನಲ್ಲಿ ಸೂಪರ್ ಹಿಟ್ ಆದ ಸಿನಿಮಾ. ಮದರಂಗಿ ಸಿನಿಮಾ ಖ್ಯಾತಿಯ ಕೃಷ್ಣ ಹಾಗೂ ಮಿಲನ‌ ನಾಗರಾಜ್ ಅಭಿನಯದ ಚಿತ್ರ ಇದು. ಈ ಸಿನಿಮಾಕ್ಕೆ ಸ್ವತಃ ಡಾರ್ಲಿಂಗ್​ ಕೃಷ್ಣ ನಿರ್ದೇಶನ ಮಾಡಿದ್ದಾರೆ.

ದೊಡ್ಡ ಪರದೆ ಮೇಲೆ ಲವ್​ ಮಾಕ್​ಟೈಲ್​ : ಇದೇ 16ಕ್ಕೆ ರಿ ರಿಲೀಸ್​​​

ಇದೀಗ ಈ ಚಿತ್ರ ಲಾಕ್ ಡೌನ್ ಬಳಿಕ ರಿ ರಿಲೀಸ್ ಆಗ್ತಾ ಇರೋ ಮೊಟ್ಟ ಮೊದಲ ಚಿತ್ರವಾಗಿದೆ. ಹೌದು ಕೊರೊನಾ ಸಂದರ್ಭದಲ್ಲಿ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣ್ತಾ ಇದ್ದ ಲವ್ ಮಾಕ್ ಟೈಲ್ ಚಿತ್ರ ಲಾಕ್ ಡೌನ್ ಇದ್ದ ಕಾರಣ ಪ್ರದರ್ಶನ ರದ್ದಾಗಿತ್ತು. 43‌ ದಿನಗಳ‌ ಯಶಸ್ವಿ ಪ್ರದರ್ಶನ ಕಾಣುತ್ತಿದ್ದ ಲವ್ ಮಾಕ್ ಟೈಲ್ ಈಗ ಅಕ್ಟೋಬರ್ 16ರಂದು ರಿ ರಿಲೀಸ್ ಆಗುತ್ತಿರುವ ಮೊದಲ ಚಿತ್ರವಾಗಿದೆ.

ಈ ಸಿನಿಮಾನ್ನ ಬಿಗ್ ಸ್ಕ್ರೀನ್​​ನಲ್ಲಿ ನೋಡೋದಿಕ್ಕೆ ಆಗಲಿಲ್ಲ ಅಂತಾ ತುಂಬಾ ಜನ ಮೆಸೇಜ್​​​ಗಳನ್ನ ಮಾಡಿದ್ರು. ಹೀಗಾಗಿ ಈ ಸಿನಿಮಾವನ್ನ ಮತ್ತೆ ರಿಲೀಸ್ ಮಾಡ್ತಾ ಇದ್ದೀವಿ ಅಂದ್ರು ನಿರ್ದೇಶಕ ಕಮ್ ನಟ ಕೃಷ್ಣ ಹೇಳಿದ್ದಾರೆ.

ಇನ್ನು ಮಿಲನಾ ನಾಗರಾಜ್ ಮಾತನಾಡಿ, ಥಿಯೇಟರ್​​ನಲ್ಲಿ ಮತ್ತೆ ಜನರು ಈ ಸಿನಿಮಾ ನೋಡ್ತಾರೆ ಅಂತಾ ವಿಶ್ವಾಸ ವ್ಯಕ್ತಪಡಿಸಿದರು.

ABOUT THE AUTHOR

...view details