ಸ್ಯಾಂಡಲ್ವುಡ್ನಲ್ಲಿ ವಾರಕ್ಕೆ ಎಂಟರಿಂದ ಒಂಬತ್ತು ಚಿತ್ರಗಳ ಬಿಡುಗಡೆ ಒಂದು ಕಡೆಯಾದ್ರೆ ಮತ್ತೊಂದು ಕಡೆ ಚಿತ್ರಮಂದಿರಗಳ ಸಮಸ್ಯೆ. ಇವುಗಳ ಮಧ್ಯೆ ಪರಭಾಷಾ ಚಿತ್ರಗಳ ಹಾವಳಿ ಇವುಗಳೆಲ್ಲದರ ನಡುವೆಯೂ, ಮದರಂಗಿ ಕೃಷ್ಣ ಫಸ್ಟ್ ಟೈಮ್ ನಿರ್ದೇಶನ ಮಾಡುವುದರ ಜೊತೆಗೆ ನಿರ್ಮಾಣ ಮಾಡಿರುವ 'ಲವ್ ಮಾಕ್ಟೈಲ್ ಚಿತ್ರ ಯಶಸ್ಸಿನ ಓಟ ಮುಂದುವರೆಸಿದೆ.
ಸಮಸ್ಯೆಗಳ ನಡುವೆ ಗೆದ್ದು ಬೀಗಿದ 'ಲವ್ ಮಾಕ್ಟೈಲ್ - love cocktail success meet
ಕಳೆದ ವಾರ ಡಾರ್ಲಿಂಗ್ ಕೃಷ್ಣ ನಿರ್ದೇಶನ ಮಾಡಿರುವ ಲವ್ ಮಾಕ್ಟೈಲ್ ರಾಜ್ಯಾದ್ಯಂತ ಸುಮಾರು 100ಕ್ಕೂ ಹೆಚ್ಚಿನ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಆದ್ರೆ ಮೊದ ಮೊದಲು ಸಿನಿಮಾ ಸೋಲುಕಂಡರೂ ನಂತ್ರ ಸೆಟೆದು ನಿಂತಿದೆ.
ಕಳೆದ ವಾರ ಡಾರ್ಲಿಂಗ್ ಕೃಷ್ಣ ನಿರ್ದೇಶನ ಮಾಡಿರುವ ಲವ್ ಮಾಕ್ಟೈಲ್ ರಾಜ್ಯಾದ್ಯಂತ ಸುಮಾರು 100ಕ್ಕೂ ಹೆಚ್ಚಿನ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಅಲ್ಲದೇ ಚಿತ್ರವನ್ನು ನೋಡಿದ ಪ್ರೇಕ್ಷಕರು ಚಿತ್ರಕ್ಕೆ ಉಘೇ ಅಂದಿದ್ರು. ದುರಂತ ಅಂದ್ರೆ ಜನರು ಚಿತ್ರವನ್ನು ನೋಡಿ ಒಪ್ಪಿದ್ದರು ಸಹ ಕಲೆಕ್ಷನ್ ವಿಚಾರದಲ್ಲಿ ಲವ್ ಮಾಕ್ಟೈಲ್ ಹಿಂದೆ ಬಿದ್ದಿತ್ತು. ಅಲ್ಲದೆ ಈ ಚಿತ್ರ ಎರಡನೇ ವಾರಕ್ಕೆ ಎಂಟ್ರಿ ಕೊಟ್ರು ಚಿತ್ರದ ಕಲೆಕ್ಷನ್ ಮಾತ್ರ ಡಲ್ ಆಗಿತ್ತು. ಸದ್ಯ ಲವ್ ಮಾಕ್ಟೈಲ್ ಯಶಸ್ವಿ ಪ್ರದರ್ಶನ ಕಾಣುತಿದೆ.
ಈ ಬಗ್ಗೆ ಚಿತ್ರತಂಡ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದೆ.