ಕರ್ನಾಟಕ

karnataka

ETV Bharat / sitara

ಕೆಜಿಎಫ್​​-2 ಆಡಿಷನ್​​​​ಗೆ ಬಂದ ಮಕ್ಕಳು, ಗಡ್ಡಧಾರಿಗಳು: ಆಫ್ರಿಕಾ ಕಲಾವಿದನೂ ಭಾಗಿ - undefined

ಇಂದು ಬೆಂಗಳೂರಲ್ಲಿ ನಡೆದ ಕೆಜಿಎಫ್​​​​-2 ಆಡಿಷನ್​​ಗೆ ಸಾಕಷ್ಟು ಸಂಖ್ಯೆಯಲ್ಲಿ ಮಕ್ಕಳು ಹಾಗೂ ಯುವಕರು ಭಾಗವಹಿಸಿದ್ದರು. ಕೆಜಿಎಫ್ ಚಿತ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದು ಹೊಸ ಪ್ರತಿಭೆಗಳು ಆಡಿಷನ್​​​​​ನಲ್ಲಿ ಉತ್ಸಾಹದಿಂದ ಭಾಗವಹಿಸಲು ಕಾರಣವಾಗಿದೆ.

ಕೆಜಿಎಫ್​​​-2

By

Published : Apr 26, 2019, 5:40 PM IST

Updated : Apr 26, 2019, 8:53 PM IST

ಸ್ಯಾಂಡಲ್​​ವುಡ್​​ನಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿದ ಸಿನಿಮಾ ಕೆಜಿಎಫ್​. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಭಾಷೆಗಳಲ್ಲಿ ಒಟ್ಟಿಗೆ ಬಿಡುಗಡೆಯಾದ ಕೆಜಿಎಫ್ ಪಾಕಿಸ್ತಾನದಲ್ಲಿ ಬಿಡುಗಡೆಯಾದ ಮೊದಲ ಕನ್ನಡ ಸಿನಿಮಾ ಎಂಬ ದಾಖಲೆ ಕೂಡಾ ಮಾಡಿದೆ.

ಆಡಿಷನ್​​ನಲ್ಲಿ ಭಾಗವಹಿಸಿದ್ದ ಗಡ್ಡಧಾರಿಗಳು

ಕೆಜಿಎಫ್-2 ಶೂಟಿಂಗ್ ಕೂಡಾ ಈಗಾಗಲೇ ಆರಂಭವಾಗಿದ್ದು ಚಿತ್ರತಂಡ ಹೊಸ ಪ್ರತಿಭೆಗಳಿಗೆ ತಮ್ಮ ಸಿನಿಮಾದಲ್ಲಿ ನಟಿಸುವ ಅವಕಾಶ ನೀಡಿದೆ. ಕೆಲವು ದಿನಗಳ ಹಿಂದೆ ಹೊಂಬಾಳೆ ಫಿಲಮ್ಸ್​​​​ ತನ್ನ ಟ್ವಿಟರ್​​​ನಲ್ಲಿ ಕೆಜಿಎಫ್​ 2ಕ್ಕೆ ಹೊಸ ಪ್ರತಿಭೆಗಳು ಬೇಕಾಗಿದ್ದಾರೆ ಎಂದು ಟ್ವೀಟ್ ಮಾಡಿದ್ದೇ ತಡ ಎಲ್ಲರೂ ಅಲರ್ಟ್ ಆದರು. ಇಂದು ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಆಡಿಷನ್ ನಡೆದಿದೆ. ಈ ಆಡಿಷನ್​​​​ಗೆ ಜನಸಾಗರವೇ ಹರಿದುಬಂದಿತ್ತು. ಪೊಲೀಸರಿಗಂತೂ ಜನರನ್ನು ಕಂಟ್ರೋಲ್ ಮಾಡುವುದೇ ದೊಡ್ಡ ಕೆಲಸವಾಗಿತ್ತು.

ಕೆಜಿಎಫ್​​-2 ಆಡಿಷನ್​​

ಬೆಳಗ್ಗೆ 8 ರಿಂದಲೇ ಚಿತ್ರದ ಆಡಿಷನ್ ಶುರುವಾಗಿದ್ದು, ಸಂಜೆ ಆರು ಗಂಟೆಯವರೆಗೂ ನಡೆಯಲಿದೆ. ಚಿತ್ರದಲ್ಲಿ ನಟಿಸಲು ಅವಕಾಶ ಗಿಟ್ಟಿಸುವ ಆಸೆಯಿಂದ ಸಾಕಷ್ಟು ಪ್ರತಿಭೆಗಳು ಬೆಳಗ್ಗಿನಿಂದಲೇ ಸಾಲಿನಲ್ಲಿ ನಿಂತಿದ್ದು ಕಂಡುಬಂತು. ಆಡಿಷನ್​​​​ಗೆ 8-16 ವರ್ಷದ ಮಕ್ಕಳು ಕೂಡಾ ಉತ್ಸಾಹದಿಂದ ಭಾಗವಹಿಸಿದ್ದರು. ಪೋಷಕರು ಕೂಡಾ ಮಕ್ಕಳನ್ನು ಆಡಿಷನ್​​​ಗೆ ಕರೆತಂದು ಹುರಿದುಂಬಿಸುತ್ತಿದ್ದರು. ನಿಗದಿಪಡಿಸಿದ 30 ಸೆಕೆಂಡ್​ ಡೈಲಾಗನ್ನು ಹೇಳಲು ಆಡಿಷನ್​​​ನಲ್ಲಿ ಭಾಗವಹಿಸಿದ್ದವರಿಗೆ ಚಿತ್ರತಂಡ ನೀಡಿತ್ತು. ತಮಗೆ ನೀಡಿದ ಡೈಲಾಗನ್ನು ಕೆಲವರು ಪಟಪಟ ಹೇಳಿದರೆ ಮತ್ತೆ ಕೆಲವರು ಡೈಲಾಗ್ ಹೇಳಲು ಕಷ್ಟಪಟ್ಟಿದ್ದಾರೆ.

ಕೆಜಿಎಫ್​​​​​-2 ಆಡಿಷನ್​​

ಇನ್ನು ಆಫ್ರಿಕಾದ ರ್‍ಯಾಂಬೋ ಎಂಬುವವರು ಕೂಡಾ ಆಡಿಷನ್​​​ಗೆ ಬಂದಿದ್ದು ಕೆಜಿಎಫ್​​​-2 ರಲ್ಲಿ ನಟಿಸುವ ಆಸೆ ವ್ಯಕ್ತಪಡಿಸಿದ್ದಾರೆ. ವಿಶೇಷ ಎಂದರೆ 'ನಾಗರಹಾವು' ಚಿತ್ರದ ಜಲೀಲ ಡೈಲಾಗನ್ನು ರ್‍ಯಾಂಬೋ ಸರಾಗವಾಗಿ ಹೇಳಿದ್ದು ಎಲ್ಲರಿಗೂ ಆಶ್ಚರ್ಯವಾಯ್ತು. ಕೆಜಿಎಫ್​​​-2 ಶೂಟಿಂಗ್ ಮುಗಿಸುವ ಮುನ್ನವೇ ಹವಾ ಶುರುವಾಗಿದ್ದು ಇನ್ನು ಸಿನಿಮಾ ಯಾವ ರೀತಿ ಸುನಾಮಿ ಎಬ್ಬಿಸುವುದೋ ಚಿತ್ರ ಬಿಡುಗಡೆವರೆಗೂ ಕಾದು ನೋಡಬೇಕು.

ಆಡಿಷನ್​​​ನಲ್ಲಿ ಭಾಗವಹಿಸಿದ್ದ ಯುವಕರು
Last Updated : Apr 26, 2019, 8:53 PM IST

For All Latest Updates

TAGGED:

ABOUT THE AUTHOR

...view details