ನಟ ಲೂಸ್ ಮಾದ ಯೋಗಿ ಈಗಾಗಲೇ ಮಲ್ಟಿ ಸ್ಟಾರ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಲ್ಲದೇ ಮಲ್ಟಿ ಸ್ಟಾರ್‌ಗಳ ಜೊತೆ ನಡೆಸಿದ ಸಿನಿಮಾ ಕೂಡಾ ಯೋಗಿಗೆ ಸಕ್ಸಸ್ ಸಹ ತಂದುಕೊಟ್ಟಿವೆ. ಈಗ ಲೂಸ್ ಮಾದ ಯೋಗಿ, ದರ್ಶನ್ ಅವರ ಜೊತೆ ಸ್ಕ್ರೀನ್ ಶೇರ್ ಮಾಡುವ ಇಂಗಿತ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಚಾಲೆಂಜಿಂಗ್ ಸ್ಟಾರ್ ಸಹ ಯೋಗಿ ಜೊತೆ ಸ್ಕ್ರೀನ್ ಶೇರ್ ಮಾಡೋದಕ್ಕೆ ಓಕೆ ಎಂದಿದ್ದಾರಂತೆ.
ದರ್ಶನ್ ಜೊತೆ ಸ್ಕ್ರೀನ್ ಶೇರ್ ಮಾಡಲು ಲೂಸ್ ಮಾದ ಯೋಗಿ ಮಾಡಿದ ಪ್ಲಾನ್.. - ದಚ್ಚು, ಯೋಗಿ ಜೊತೆ ಆ್ಯಕ್ಟ್ ಮಾಡಲು ಗ್ರೀನ್ ಸಿಗ್ನಲ್
ನಟ ಲೂಸ್ ಮಾದ ಯೋಗಿಗೆ ಡಿ-ಬಾಸ್ ಜೊತೆ ನಟಿಸೋ ಆಸೆ ಇದೆಯಂತೆ. ಅದಕ್ಕಾಗಿ ದರ್ಶನ್ ಹತ್ರ ಹೇಳಿದಾಗ, ನೀನು ಸ್ವಲ್ಪ ದಪ್ಪ ಆಗು ಅಂತಾ ಯಾವಾಗ್ಲೂ ಬಾಸ್ ಹೇಳ್ತಾನೆ ಇರ್ತಾರಂತೆ. ಅದಕ್ಕೆ ಬೇಗ ದಪ್ಪ ಆಗೋಣ ಅಂತಾ ಲೂಸ್ ಮಾದ ಡಿಸೈಡ್ ಮಾಡವ್ರಂತೆ.
ದಚ್ಚು, ಯೋಗಿ ಜೊತೆ ಆ್ಯಕ್ಟ್ ಮಾಡಲು ಗ್ರೀನ್ ಸಿಗ್ನಲ್ ಕೊಟ್ಟಿದ್ದರೂ ಇನ್ನೂ ಯಾಕೆ ಇವರಿಬ್ಬರ ಕಾಂಬಿನೇಷನ್‌ನಲ್ಲಿ ಸಿನಿಮಾ ಬಂದಿಲ್ಲ ಅನ್ನೋದಕ್ಕೆ ಲೂಸ್ ಮಾದ ಯೋಗಿ ಕಾರಣ ಹೇಳಿದ್ದಾರೆ. ಪರಿಮಳ ಲಾಡ್ಜ್ ಟೀಸರ್ ಲಾಂಚ್ ಕಾರ್ಯಕ್ರಮದಲ್ಲಿ ಮಾತನಾಡಿದ ಯೋಗಿ, ತುಂಬಾ ದಿನಗಳಿಂದ ದರ್ಶನ್ ಅವರ ಜೊತೆ ಆ್ಯಕ್ಟ್ ಮಾಡಬೇಕೆಂದು ಹೇಳಿದ್ದೇನೆ. ಆದರೆ, ದರ್ಶನ್ ಅವರ ಜೊತೆ ಆ್ಯಕ್ಟ್ ಮಾಡೋಕೆ, ನನಗೆ ಯಾವಾಗಲೂ ಅವರು ಹೇಳೋದು ಒಂದೇ ಮಾತು. ಅದೇನಪ್ಪ ಅಂದ್ರೇ ನೀನು ಸ್ವಲ್ಪ ದಪ್ಪ ಆಗು ಅಂತಾ ನನಗೆ ಸಿಕ್ಕಿದಾಗಲೆಲ್ಲ ಹೇಳ್ತಾರೆ. ಸೋ ಈಗ ನಾನು ಡಿಸೈಡ್ ಮಾಡಿದ್ದೀನಿ. ದಪ್ಪ ಆದರೆ, ದರ್ಶನ್ ಅವರ ಜೊತೆ ಆ್ಯಕ್ಟ್ ಮಾಡೋ ಅಡವಕಾಶ ಸಿಗಬಹುದು. ಅದಕ್ಕಾಗಿ ನಾನು ಈಗ ದಪ್ಪ ಆಗ್ತೀನಿ ಎಂದು ಲೂಸ್ ಮಾದ ಹೇಳಿದ್ದಾರೆ.
ಅಲ್ಲದೆ ನಾನು ಸಣ್ಣ ಇರೋದರಿಂದ ದರ್ಶನ್ ಅವರು ಪ್ರೀತಿಯಿಂದಲೇ ಟೂತ್ ಪಿಕ್ ಅಂತಾ ಕರೀತಾರೆ ಎಂದು ಲೂಸ್ ಮಾದ ಯೋಗಿ ತಿಳಿಸಿದರು.