ಕರ್ನಾಟಕ

karnataka

ETV Bharat / sitara

ಲೂಸ್ ಮಾದ ಯೋಗಿ ಈಗ "ಕಿರಿಕ್ ಶಂಕರ್" - loose mada yogi kannada cinema

ಲೂಸ್ ಮಾದ ಯೋಗಿ ನಟನೆಯ ಕಿರಿಕ್ ಶಂಕರ್ ಚಿತ್ರ ಇದೇ ಏಪ್ರಿಲ್ ನಲ್ಲಿ ಬಿಡುಗಡೆಗೊಳ್ಳುತ್ತಿರುವುದಾಗಿ ಚಿತ್ರ ತಂಡ ಹೇಳಿದೆ. ಯೋಗಿಗೆ ಜೋಡಿಯಾಗಿ ರಂಗಭೂಮಿ ಕಲಾವಿದೆ ಅದ್ವಿಕಾ ನಟಿಸಿದ್ದಾರೆ. ಎಂ.ಎನ್.ಕುಮಾರ್ ಈ ಚಿತ್ರವನ್ನು ನಿರ್ಮಿಸಿದ್ದು, ಆರ್ ಅನಂತರಾಜು ಸಿನೆಮಾ ನಿರ್ದೇಶನ ಮಾಡಿದ್ದಾರೆ. ಚಿತ್ರಕ್ಕೆ ವೀರ ಸಮರ್ಥ್ ಅವರು ಸಂಗೀತ ನೀಡಿದ್ದಾರೆ.

loose-mada-yogi-upcoming-kannada-cinema
ಲೂಸ್ ಮಾದ ಯೋಗಿ ಈಗ "ಕಿರಿಕ್ ಶಂಕರ್"

By

Published : Mar 14, 2022, 4:01 PM IST

ಬೆಂಗಳೂರು: ಲೂಸ್ ಮಾದ ಯೋಗಿ ನಾಯಕನಾಗಿ ನಟಿಸಿರುವ "ಕಿರಿಕ್ ಶಂಕರ್ " ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಲೂಸ್ ಮಾದ ಯೋಗಿಗೆ ಜೋಡಿಯಾಗಿ ಹೊಸ ಪ್ರತಿಭೆ ಅದ್ವಿಕಾ ನಟಿಸಿದ್ದಾರೆ. ಚಿತ್ರರಂಗಕ್ಕೆ ಸಾಕಷ್ಟು ಯಶಸ್ವಿ ಚಿತ್ರಗಳನ್ನು ನೀಡಿರುವ ಎಂ.ಎನ್. ಕುಮಾರ್ ಈ ಸಿನೆಮಾ ನಿರ್ಮಿಸಿದ್ದು, ಆರ್ ಅನಂತರಾಜು ಆ್ಯಕ್ಷನ್​ ಕಟ್​​ ಹೇಳಿದ್ದಾರೆ.

ಖಾಸಗಿ ಹೋಟೆಲ್ ನಲ್ಲಿ ಮಾಧ್ಯಮಗೋಷ್ಟಿ ನಡೆಸಿದ ಚಿತ್ರತಂಡ, ತುಂಬಾ ದಿನಗಳ ನಂತರ ನಮ್ಮ ಭೇಟಿಯಾಗುತ್ತಿದೆ. ಇದೇ ಏಪ್ರಿಲ್ ನಲ್ಲಿ ನಮ್ಮ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದೇವೆ. ಚಿತ್ರ ಚೆನ್ನಾಗಿ ಮೂಡಿಬಂದಿದೆ ಎಂದು ನಿರ್ಮಾಪಕ ಎಂ.ಎನ್.ಕುಮಾರ್ ಹೇಳಿದ್ದಾರೆ.

ಲೂಸ್ ಮಾದ ಯೋಗಿ ನಟನೆಯ ಕಿರಿಕ್ ಶಂಕರ್ ಚಿತ್ರ ತಂಡ

ಇದೊಂದು ನಗರದ ಹೊರವಲಯದಲ್ಲಿ ನಡೆಯುವ ಕಥೆ. ನಾಯಕನಿಗೆ ಇಬ್ಬರು ತಂಗಿಯರು. ತುಂಬು ಕುಟುಂಬ. ಸಂಸಾರದ ಜವಾಬ್ದಾರಿ ಹೆಗಲ ಮೇಲಿದ್ದರೂ, ಯಾವುದಕ್ಕೂ ತಲೆ ಕೆಡಸಿಕೊಳ್ಳದಾತ. ಆತನ ಜೀವನದಲ್ಲಿ ನಾಯಕಿಯ ಆಗಮನವಾಗುತ್ತಿದಂತೆ ಏನೆಲ್ಲಾ ಆಗುತ್ತದೆ ಎಂಬುದೇ ಕಥಾ ಸಾರಾಂಶ ಎಂದು ಹೇಳಿದ್ದಾರೆ. ತಾಂತ್ರಿಕ ವರ್ಗದವರ ಹಾಗೂ ಕಲಾವಿದರ ಸಹಕಾರದಿಂದ ನಮ್ಮ ಚಿತ್ರ ಚೆನ್ನಾಗಿ ಮೂಡಿಬಂದಿದ್ದು, ಜನರ ಮಾಧ್ಯಮದವರ ಪ್ರೋತ್ಸಾಹ ಚಿತ್ರಕ್ಕೆ ಇರಲಿ ಎಂದು ನಿರ್ದೇಶಕ ಅನಂತರಾಜು ಹೇಳಿದ್ದಾರೆ.

ಲೂಸ್ ಮಾದ ಯೋಗಿ ಮತ್ತು ಅದ್ವಿಕಾ

ಚಿತ್ರದ ನಾಯಕ ಲೂಸ್ ಮಾದ ಯೋಗೀಶ್ ಮಾತನಾಡಿ, ಇದೊಂದು ಪಕ್ಕಾ ಕಮರ್ಷಿಯಲ್ ಚಿತ್ರ. ಅವಕಾಶ ನೀಡಿದ ಎಂ.ಎನ್ ಕುಮಾರ್ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ. ಅನಂತರಾಜು ರ ಜೊತೆ ಕೆಲಸ ಮಾಡಿದ್ದು ಸಂತಸ ತಂದಿದೆ. ಪ್ರತಿಯೊಂದು ಸಿನಿಮಾದಲ್ಲೂ ಕಲಿಯುವುದು ಇರುತ್ತದೆ. ಈ ಚಿತ್ರದಲ್ಲೂ ಸಾಕಷ್ಟು ಕಲಿಯುದ್ದೇನೆ. ನನ್ನ ಜೊತೆ ನಟಿಸಿರುವ ಎಲ್ಲಾ ಕಲಾವಿದರ ಅಭಿನಯ ಚೆನ್ನಾಗಿದೆ ಲೂಸ್ ಮಾದ ಯೋಗಿ ಹೇಳಿದರು.

ಚಿತ್ರದ ನಾಯಕಿ ಅದ್ವಿಕಾ ಅವರು ಮಾತನಾಡಿ, ನಾನು ರಂಗಭೂಮಿ ಕಲಾವಿದೆ. ನಿರ್ದೇಶಕ ಗಿರಿರಾಜ್ ನನ್ನ ಗುರುಗಳು. ನಾನು ಅವರ ಸಾಕಷ್ಟು ನಾಟಕಗಳಲ್ಲಿ ನಟಿಸಿದ್ದೇನೆ. ಹಿರಿತೆರೆಯಲ್ಲಿ ಇದು ನನ್ನ ಮೊದಲ ಚಿತ್ರ. ಪಾತ್ರ ತುಂಬಾ ಚೆನ್ನಾಗಿದೆ. ಅವಕಾಶ ಕೊಟ್ಟ ನಿರ್ಮಾಪಕ, ನಿರ್ದೇಶಕರಿಗೆ ಧನ್ಯವಾದನ್ನು ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.

ಚಿತ್ರಕ್ಕೆ ವೀರ ಸಮರ್ಥ್ ಸಂಗೀತ ನೀಡಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆಯನ್ನು ಯೋಗೀಶ್ ಹುಣಸೂರು ಅವರು ಬರೆದಿದ್ದಾರೆ. ಈ ಸಂದರ್ಭದಲ್ಲಿ ರಿತೇಶ್, ಆನಂದ್ ಆಡಿಯೋ ಶ್ಯಾಮ್ ಹಾಗೂ ಗೀತರಚನೆಕಾರ ಕಿನ್ನಾಳ್ ರಾಜ್ ಮತ್ತಿತರರು ಉಪಸ್ಥಿತರಿದ್ದರು.

ಓದಿ :ತಮ್ಮ ಡೇಟಿಂಗ್​ ನಿಜ ಎಂಬುದಕ್ಕೆ ಸಾಕ್ಷಿಯಾದ ಬಾಲಿವುಡ್​​ ಪ್ರೇಮ ಪಕ್ಷಿಗಳು!

ABOUT THE AUTHOR

...view details