ಕರ್ನಾಟಕ

karnataka

ETV Bharat / sitara

ಪ್ಯಾನ್​​​​​​ ಇಂಡಿಯಾ ಸಿನಿಮಾ ಮಾಡ್ತಿದ್ದಾರೆ ಲೂಸ್​​​ ಮಾದ ಯೋಗಿ! - ಪ್ಯಾನ್​ ಇಂಡಿಯಾ ಸಿನಿಮಾ

ಕೆಲವು ದಿನಗಳಿಂದ ಬೆಳ್ಳಿ ತೆರೆ ಮೇಲೆ ಕಾಣಿಸಿಕೊಳ್ಳದ ಲೂಸ್ ಮಾದ ಯೋಗೀಶ್ ಇದೀಗ ಪ್ಯಾನ್ ಇಂಡಿಯಾ ಸಿನಿಮಾ ಮಾಡ್ತಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ಇದರೊಂದಿಗೆ ಯೋಗಿ 'ಪರಿಮಳ ಲಾಡ್ಜ್'​ ಎಂಬ ಸಿನಿಮಾ ಸೇರಿ ಇನ್ನೂ ಎರಡು ಸಿನಿಮಾಗಳಲ್ಲಿ ಬ್ಯುಸಿ ಇದ್ದಾರಂತೆ.

ಲೂಸ್ ಮಾದ ಯೋಗಿ

By

Published : Aug 27, 2019, 9:43 PM IST

ಲಂಬೋದರ ಚಿತ್ರದ ನಂತರ ಲೂಸ್ ಮಾದ ಖ್ಯಾತಿಯ ಯೋಗೀಶ್ ಯಾವ ಸಿನಿಮಾ ಮಾಡ್ತಿದ್ದಾರೆ ಎಂಬ ಪ್ರಶ್ನೆ ಎಲ್ಲರಿಗೂ ಕಾಡುತ್ತಿದೆ. ಕೆಲವು ದಿನಗಳ ಹಿಂದೆ ಹೆಣ್ಣು ಮಗುವಿಗೆ ತಂದೆಯಾದ ಯೋಗಿ ಇದೀಗ ಪ್ಯಾನ್ ಇಂಡಿಯಾ ಸಿನಿಮಾ ಮಾಡಲು ಪ್ಲ್ಯಾನ್ ಮಾಡ್ತಿದ್ದಾರಂತೆ.

ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾದ್ರು ಯೋಗೀಶ್

ತಮಿಳಿನ ಖ್ಯಾತ ನಿರ್ದೇಶಕ ಹಾಗೂ ನಟ ಸಮುದ್ರಕಣಿ ಜೊತೆ ಲೂಸ್ ಮಾದ ಯೋಗಿ ಪ್ಯಾನ್ ಇಂಡಿಯಾ ಸಿನಿಮಾ‌ ಮಾಡುತ್ತಿದ್ದಾರೆ. ನಿನ್ನೆ ಅಣ್ಣನ 'ತಮಸ್' ಚಿತ್ರಕ್ಕೆ ವಿಶ್ ಮಾಡೋದಿಕ್ಕೆ ಬಂದಿದ್ದ ಯೋಗಿ, ತಮಿಳು ಸೇರಿ ಕನ್ನಡದಲ್ಲಿ ಮೂರು ಪ್ರಾಜೆಕ್ಟ್​​ಗಳಲ್ಲಿ ಬ್ಯುಸಿಯಾಗಿದ್ದಾರೆ. ತಮಿಳು ನಿರ್ದೇಶಕ ಸಮುದ್ರ ಖಣಿ, ಜೊತೆ ಯೋಗಿ ಕನ್ನಡದಲ್ಲಿ 'ಯಾರೇ ಕೂಗಾಡಲಿ' ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಆಗ ಯೋಗಿಯ ನಟನೆ ಕಂಡು, ಸಮುದ್ರಕಣಿ ಕೂಡಾ ಮೆಚ್ಚಿಕೊಂಡು ಒಟ್ಟಿಗೆ ಕೆಲಸ ಮಾಡುವ ಮಾತುಗಳನ್ನಾಡಿದ್ದರಂತೆ. ಈಗ ಅದಕ್ಕೆ ಕಾಲ ಕೂಡಿ ಬಂದಿದ್ದು, ಇಬ್ಬರ ಕಾಂಬಿನೇಶನ್‌ ಸಿನಿಮಾ ಸದ್ಯದಲ್ಲೇ ಸೆಟ್ಟೇರಲಿದೆ.

ಅಂದಹಾಗೆ ಈ ಚಿತ್ರಕ್ಕೆ 'ಕೃಷ್ಣ' ಎಂಬ ಹೆಸರಿಡಲು ಯೋಚಿಸಲಾಗಿದ್ದು, ಇದು ಫೈನಲ್ ಅಲ್ಲ ಎಂದು ಯೋಗಿ ಹೇಳಿದ್ದಾರೆ. ಇನ್ನು ಯೋಗಿ ಕನ್ನಡದಲ್ಲಿ ಎಕ್ಸ್​​ಪಿರಿಮೆಂಟ್ ಸಿನಿಮಾಗಳತ್ತ ತಲೆ ಹಾಕದೆ ಮತ್ತೆ ಕಮರ್ಷಿಯಲ್ ಸಿನಿಮಾ ಮಾಡ್ತಾರಂತೆ. ಸಿದ್ಲಿಂಗು ಸಿನಿಮಾ ನಂತ್ರ ಲೂಸ್ ಮಾದ ಯೋಗಿ ಮತ್ತೆ ನಿರ್ದೇಶಕ ವಿಜಯ್ ಪ್ರಸಾದ್ ಜೊತೆ 'ಪರಿಮಳ ಲಾಡ್ಜ್' ಎಂಬ ಸಿನಿಮಾ ಮಾಡ್ತಾ ಇದ್ದಾರೆ. ಇದರ ಜೊತೆಗೆ ನಿರ್ದೇಶಕ ದಯಾಳ್ ಪದ್ಮನಾಭನ್, ಗುರುದೇಶ್​ಪಾಂಡೆ ಜೊತೆ ಯೋಗಿ ಸಿನಿಮಾಗಳನ್ನು ಮಾಡ್ತಿದ್ದಾರೆ. ಸ್ಯಾಂಡಲ್​​​ವುಡ್​​​ನಲ್ಲಿ ಈಗಾಗಲೇ ನಿರ್ದೇಶಕ ಸಮುದ್ರಕಣಿ ಜೊತೆ ಯಶ್​, ಸುದೀಪ್, ದರ್ಶನ್​​​​ ಪ್ಯಾನ್​ ಇಂಡಿಯಾ ಸಿನಿಮಾ ಮಾಡಿದ್ದು, ಇದೀಗ ಈ ಸಾಲಿಗೆ ಯೋಗಿ ಸೇರಿದ್ದಾರೆ.

ABOUT THE AUTHOR

...view details