ಕರ್ನಾಟಕ

karnataka

ETV Bharat / sitara

ಅಮ್ಮನ ಕೈಯಿಂದ ತಲೆಗೆ ಎಣ್ಣೆ ಮಸಾಜ್​ ಮಾಡಿಸಿಕೊಂಡ ಕಂಗನಾ.. ಫೋಟೋಗೆ ಫ್ಯಾನ್ಸ್ ಮೆಚ್ಚುಗೆ - ಅಮ್ಮನ ಕೈಯಿಂದ ತಲೆಗೆ ಎಣ್ಣೆ ಮಸಾಜ್​ ಮಾಡಿಸಿಕೊಂಡ ಕಂಗನಾ

ಈ ಫೋಟೋದಲ್ಲಿ ಕಂಗನಾ ಬ್ಲ್ಯಾಕ್ ಡ್ರೆಸ್​​​ನಲ್ಲಿ ಗುಡ್ಡವೊಂದರ ಮಧ್ಯೆಯಿರುವ ತಮ್ಮ ಮನೆಯ ಮುಂಭಾಗ ಕುಳಿತು ಅಮ್ಮನೊಂದಿಗೆ ತೆಲೆಗೆ ಎಣ್ಣೆ ಮಸಾಜ್​​ ಮಾಡಿಸಿಕೊಂಡಿದ್ದಾರೆ.

Lockdown diaries: Kangana gets head massage by mom, fans laud her for 'living real life'
ಕಂಗನಾ

By

Published : Apr 4, 2020, 4:50 PM IST

ಮುಂಬೈ: ಸದ್ಯ ಕೋವಿಡ್​-19 ವೈರಸ್​​​ನಿಂದ ಇಡೀ ದೇಶವೇ ಲಾಕ್​​ಡೌನ್​ ಆಗಿದೆ. ಹೀಗಾಗಿ ಮನೆಯಲ್ಲಿಯೇ ಸಮಯ ಕಳೆಯುತ್ತಿರುವ ಸೆಲಿಬ್ರಿಟಿಗಳು ಫ್ಯಾಮಿಲಿಯೊಂದಿಗೆ ಕಾಲಕಳೆಯುತ್ತಾ ಖುಷಿ ಹಂಚಿಕೊಳ್ಳುತ್ತಿದ್ದಾರೆ.

ಬಾಲಿವುಡ್​ ಬೆಡಗಿ ಕಂಗನಾ ರನೌತ್​​ ತನ್ನ ತಾಯಿಯ ಕೈಯಿಂದ ತಲೆಗೆ ಎಣ್ಣೆ ಹಚ್ಚಿಸಿಕೊಂಡು ಮಸಾಜ್​ ಮಾಡಿಸಿಕೊಳ್ಳುತ್ತಿರುವ ಫೋಟೋಗಳನ್ನು ತಮ್ಮ ಇನ್​​ಸ್ಟಾಗ್ರಾಮ್​​ನಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಕಂಗನಾ ಬ್ಲ್ಯಾಕ್ ಡ್ರೆಸ್​​​ನಲ್ಲಿ ಗುಡ್ಡವೊಂದರ ಮಧ್ಯೆಯಿರುವ ತಮ್ಮ ಮನೆಯ ಮುಂಭಾಗ ಕುಳಿತು ಅಮ್ಮನೊಂದಿಗೆ ತೆಲೆಗೆ ಎಣ್ಣೆ ಮಸಾಜ್​​ ಮಾಡಿಸಿಕೊಂಡಿದ್ದಾರೆ.

ಈ ಬಗ್ಗೆ ಕಂಗನಾ ಅಭಿಮಾನಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಎಂತಹ ಸುಂದರ ಜಾಗದಲ್ಲಿ ಕಂಗನಾ ಇದ್ದಾರೆ. ಇದು ನಿಜವಾದ ಜೀವನ ಎಂದು ಪ್ರತಿಕ್ರಿಯಿಸಿದ್ದಾರೆ. ಕೆಲವರು ಬಾಲ್ಯ ನೆನಪಾಗುತ್ತಿದೆ ಎಂದು ಪ್ರತಿಕ್ರಿಯಿಸಿದ್ದಾರೆ. ಕೆಲವರು ಇಂತಹ ಪರಿಸರದಲ್ಲಿ ಜೀವಿಸುವುದೇ ಚೆಂದ. ನಾನು ಕೂಡ ಈ ರೀತಿಯ ಮನೆ ಹೊಂದಲು ಬಯಸುತ್ತೇನೆ ಎಂದು ತಮ್ಮ ಇಂಗಿತ ವ್ಯಕ್ತಪಡಿಸಿದ್ದಾರೆ.

ಸದ್ಯ ಕಂಗನಾ ಸ್ವತಃ ಯಾವುದೇ ಸಾಮಾಜಿಕ ಜಾಲತಾಣಗಳನ್ನು ನಿರ್ವಹಿಸುತ್ತಿಲ್ಲ, ಅವರ ಇನ್​​​ಸ್ಟಾಗ್ರಾಮ್​ ಖಾತೆ ನಿರ್ವಹಿಸುತ್ತಿರುವ ಟೀಮ್​ ಈ ಫೋಟೋವನ್ನು ವೈರಲ್​ ಮಾಡಿದೆ.

ABOUT THE AUTHOR

...view details