ಕನ್ನಡ ಚಿತ್ರರಂಗದ ಆರಾಧ್ಯದೈವ, ಕನ್ನಡಿಗರ ಕಣ್ಮಿಣಿ, ನಟಸಾರ್ವಭೌಮ ಡಾ.ರಾಜ್ಕುಮಾರ್ರ ಇಂದು 92ನೇ ವರ್ಷದ ಹುಟ್ಟು ಹಬ್ಬ. ಅಣ್ಣಾವ್ರು ದೈಹಿಕವಾಗಿ ನಮ್ಮೊಂದಿಗೆ ಇಲ್ಲದೇ, ಇದ್ದರು ಇವತ್ತಿಗೂ ಕೋಟ್ಯಂತರ ಅಭಿಮಾನಿಗಳ ಹೃದಯದಲ್ಲಿ ಉಳಿದಿದ್ದಾರೆ. ಇನ್ನು ಪ್ರತಿವರ್ಷ ರಾಜ್‍ಕುಮಾರ್ ಅಭಿಮಾನಿಗಳು, ಹುಟ್ಟು ಹಬ್ಬವನ್ನ, ರಾಜ್ಯಾದ್ಯಂತ ಅದ್ಧೂರಿಯಾಗಿ ಆಚರಣೆ ಮಾಡುತ್ತಿದ್ದರು. ಆದರೆ, ಈ ಬಾರಿಯ ವರನಟನ ಹುಟ್ಟುಹಬ್ಬಕ್ಕೆ ಲಾಕ್ಡೌನ್ ಎಫೆಕ್ಟ್ ಆಗಿದೆ.
ಕಳೆದ ವರ್ಷವು ರಾಜ್ ಕುಮಾರ್ ಹುಟ್ಟುಹಬ್ಬದ ದಿನ ಲಾಕ್ಡೌನ್ ಘೋಷಣೆಯಾಗಿತ್ತು. ಈ ವರ್ಷವು ಲಾಕ್ಡೌನ್ ಆಗಿರೋ ಕಾರಣ ಅಭಿಮಾನಿಗಳು, ರಾಜ್ ಸ್ಮಾರಕಕ್ಕೆ ಪೂಜೆ ಮಾಡೋದನ್ನ ಮಿಸ್ ಮಾಡಿಕೊಂಡಿದ್ದಾರೆ. ಇನ್ನು ಅಣ್ಣಾವ್ರ ಸಮಾಧಿಗೆ ಬಣ್ಣ, ಬಣ್ಣದ ಹೂಗಳಿಂದ ಅಲಂಕಾರ ಮಾಡಲಾಗಿದ್ದು, ರಾಘವೇಂದ್ರ ರಾಜ್ ಕುಮಾರ್ ಕಂಠೀರವ ಸ್ಟುಡಿಯೋದಲ್ಲಿರುವ ರಾಜ್ ಕುಮಾರ್ ಸ್ಮಾರಕಕ್ಕೆ, ಪೂಜೆ ಸಲ್ಲಿಸಿದ್ದಾರೆ.