ಕರ್ನಾಟಕ

karnataka

ETV Bharat / sitara

'ಲಿವಾ ಮಿಸ್ ದಿವಾ 2021': ಗ್ರ್ಯಾಂಡ್ ಫಿನಾಲೆಯಲ್ಲಿ ಮಿಂಚಿದ ಮಲೈಕಾ ಅರೋರಾ, ಕೃತಿ ಸನೋನ್

ಮುಂಬೈನಲ್ಲಿ 'ಲಿವಾ ಮಿಸ್ ದಿವಾ 2021' ರ ಗ್ರಾಂಡ್ ಫಿನಾಲೆ ಅದ್ಧೂರಿಯಾಗಿ ನಡೆಯಿತು. ಈ ಕಾರ್ಯಕ್ರಮದಲ್ಲಿ 'ಮಿಮಿ' ಸಿನಿಮಾ ಖ್ಯಾತಿಯ ಬಾಲಿವುಡ್​ ನಟಿ ಕೃತಿ ಸನೋನ್ ಮತ್ತು ಸಖತ್ ಬೋಲ್ಡ್ ನಟಿ ಮಲೈಕಾ ಅರೋರಾ ವಿಭಿನ್ನ ಉಡುಗೆಗಳಲ್ಲಿ ಮಿಂಚಿದರು.

LIVA Miss Diva 2021
ಮಲೈಕಾ ಅರೋರಾ, ಕೃತಿ ಸನೋನ್

By

Published : Oct 2, 2021, 7:17 AM IST

Updated : Oct 2, 2021, 8:02 AM IST

ಮುಂಬೈ: 'ಲಿವಾ ಮಿಸ್ ದಿವಾ 2021' ರ ಗ್ರಾಂಡ್ ಫಿನಾಲೆ ಗುರುವಾರ ಸಂಜೆ ಮುಂಬೈನಲ್ಲಿ ನಡೆಯಿತು. ಈ ವೇಳೆ ನಟಿ ಮಲೈಕಾ ಅರೋರಾ, ಕೃತಿ ಸನೋನ್ ಸೇರಿದಂತೆ ಅನೇಕ ಸೆಲೆಬ್ರೆಟಿಗಳು ವಿಭಿನ್ನ ಉಡುಗೆಗಳಲ್ಲಿ ಮಿಂಚಿದರು.

ಬಾಲಿವುಡ್‌ನಲ್ಲಿ ಸಖತ್ ಬೋಲ್ಡ್ ನಟಿ ಎನಿಸಿಕೊಂಡವರು ಮಲೈಕಾ ಅರೋರಾ, ಈಗಲೂ ಹರೆಯದ ನಟಿಯರನ್ನು ನಾಚಿಸುವಂತಹ ಮೈಮಾಟ ಹೊಂದಿದ್ದಾರೆ. ಯಾಕೆಂದರೆ, ಅವರು ಫಿಟ್‌ನೆಸ್ ಬಗ್ಗೆ ಅಷ್ಟೊಂದು ಕಾಳಜಿ ಮಾಡುತ್ತಾರೆ.'ಲಿವಾ ಮಿಸ್ ದಿವಾ 2021' ಕಾರ್ಯಕ್ರಮದಲ್ಲಿ ಸಹ ತನ್ನದೇ ಆದ ಲುಕ್​ನಲ್ಲಿ ರೆಡ್ ಕಾರ್ಪೆಟ್ ಮೇಲೆ ವಾಕ್​ ಮಾಡಿ ಬೆರಗುಗೊಳಿಸಿದರು.

ಇನ್ನು ಬಾಲಿವುಡ್​ ನಟಿ ಕೃತಿ ಸನೋನ್​ ಅವರು ನಟಿಸಿದ 'ಮಿಮಿ' ಸಿನಿಮಾ ಸೂಪರ್​ ಹಿಟ್​ ಆಗಿದ್ದು, ಇದೇ ಸಿನಿಮಾದ 'ಪರಮ ಸುಂದರಿ' ಹಾಡು ಸಖತ್ ವೈರಲ್​ ಆಗಿದೆ. ಸಿನಿಮಾ ಹಿಟ್​ ಆದ ಸಂಭ್ರಮದಲ್ಲಿರುವ ಕೃತಿ, 'ಲಿವಾ ಮಿಸ್ ದಿವಾ 2021' ಕಾರ್ಯಕ್ರಮದಲ್ಲಿ ಗುಲಾಬಿ ಬಣ್ಣದ ಬಟ್ಟೆ ತೊಟ್ಟು ಅಭಿಮಾನಿಗಳ ಮನಸ್ಸಿಗೆ ಲಗ್ಗೆಇಟ್ಟರು.

'ಲಿವಾ ಮಿಸ್ ದಿವಾ 2021' ರ ಗ್ರಾಂಡ್ ಫಿನಾಲೆ
Last Updated : Oct 2, 2021, 8:02 AM IST

ABOUT THE AUTHOR

...view details