ಚಾಲೆಂಜಿಂಗ್ ಸ್ಟಾರ್ ದರ್ಶನ್ ಪುತ್ರ ವಿನೀಶ್ ಅಪ್ಪನ ದಾರಿಯಲ್ಲೇ ಸಾಗುತ್ತಿದ್ದಾರೆ. ತಂದೆ ದರ್ಶನ್ ಅವರಂತೆ ವಿನೀಶ್ಗೆ ಕೂಡಾ ಪ್ರಾಣಿ, ಪಕ್ಷಿಗಳೆಂದರೆ ಬಹಳ ಇಷ್ಟ. ಇದೀಗ ವಿನೀಶ್ ಅಪ್ಪನಂತೆ ಕುದುರೆ ಸವಾರಿ ಕೂಡಾ ಮಾಡುತ್ತಾರೆ.
ಅಪ್ಪನ ಹಾದಿಯನ್ನೇ ಫಾಲೋ ಮಾಡುತ್ತಿರುವ ಜ್ಯೂನಿಯರ್ ದರ್ಶನ್ - Vineesh horse riding
ನಟ ದರ್ಶನ್ ಫೋಟೋಗ್ರಫಿಗಾಗಿ ಶಿವಮೊಗ್ಗ-ಚಿಕ್ಕಮಗಳೂರು ಗಡಿ ವ್ಯಾಪ್ತಿಯಲ್ಲಿ ಇರುವ ಅರಣ್ಯ ಪ್ರದೇಶಕ್ಕೆ ತೆರಳಿದ್ದಾರೆ. ಇತ್ತ ಪುತ್ರ ವಿನೀಶ್ ಮೈಸೂರಿನ ಫಾರಂಹೌಸ್ನಲ್ಲಿ ಯಾರ ಸಹಾಯವೂ ಇಲ್ಲದೆ ಕುದುರೆ ಸವಾರಿ ಮಾಡುತ್ತಿದ್ದಾರೆ.
ದರ್ಶನ್ ಆಗ್ಗಾಗ್ಗೆ ಮೈಸೂರಿನ ತಮ್ಮ ಫಾರಂಹೌಸ್ನಲ್ಲಿ ಪುತ್ರ ವಿನೀಶ್ಗೆ ಕುದುರೆ ಸವಾರಿ ಹೇಳಿಕೊಡುತ್ತಿದ್ದರು. ಇದೀಗ ವಿನೀಶ್ ಯಾವುದೇ ಭಯ ಇಲ್ಲದೆ, ಸಪೋರ್ಟ್ ಇಲ್ಲದೆ ಕುದುರೆ ಸವಾರಿ ಮಾಡುತ್ತಿದ್ದಾರೆ. ವಿನೀಶ್ ಕುದುರೆ ಸವಾರಿ ಮಾಡುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಕೊರೊನಾ ಸಮಸ್ಯೆ ಇರುವುದರಿಂದ ಸದ್ಯಕ್ಕೆ ಶಾಲೆಗಳಿಗೆ ರಜೆ ಇರುವ ಕಾರಣ ತಾಯಿ ವಿಜಯಲಕ್ಷ್ಮಿ ಜೊತೆ ಫಾರಂಹೌಸ್ಗೆ ತೆರಳಿರುವ ವಿನೀಶ್, ಅಲ್ಲಿ ಕುದುರೆ ಸವಾರಿ ಮಾಡುತ್ತಿದ್ದಾರೆ. ಸದ್ಯಕ್ಕೆ ದರ್ಶನ್, ತಮ್ಮ ಆಪ್ತರೊಂದಿಗೆ ಶಿವಮೊಗ್ಗ ಭದ್ರಾ ಅರಣ್ಯ ಪ್ರದೇಶದಲ್ಲಿ ಫೋಟೋಗ್ರಫಿಗೆ ತೆರಳಿದ್ದಾರೆ.