ಕರ್ನಾಟಕ

karnataka

ETV Bharat / sitara

ಚಾಲೆಂಜಿಂಗ್​ ಸ್ಟಾರ್​​ ದರ್ಶನ್ ಸಿನಿಮಾ ಕರಿಯರ್​​​ನ ದಿ ಬೆಸ್ಟ್ ಸಿನಿಮಾಗಳು ಇವು - Actor Darshan movie carrier

ಲೈಟ್​​ಬಾಯ್ ಆಗಿ ಚಿತ್ರರಂಗದಲ್ಲಿ ಕರಿಯರ್ ಆರಂಭಿಸಿ, ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸುವ ಮೂಲಕ ಇಂದು ಸ್ಯಾಂಡಲ್​​​​ವುಡ್​​​ ಬೇಡಿಕೆ ನಟನಾಗಿ ಮಿಂಚುತ್ತಿರುವ ನಟ ದರ್ಶನ್. ಚಾಲೆಂಜಿಂಗ್ ಸ್ಟಾರ್ ಇದುವರೆಗೂ 53 ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ಚಿತ್ರಗಳಲ್ಲಿ ಬೆಸ್ಟ್ ಸಿನಿಮಾಗಳು ಸಾಕಷ್ಟಿವೆ.

Darshan best movies
ದರ್ಶನ್ ಸಿನಿಜರ್ನಿಯ ಬೆಸ್ಟ್ ಸಿನಿಮಾಗಳು

By

Published : Aug 11, 2020, 2:39 PM IST

ಶ್ರಮದ ಜೊತೆಗೆ ಅದೃಷ್ಟ ಒಂದೊದ್ದಿರೆ ಸಾಕು, ಯಾವುದೇ ಕ್ಷೇತ್ರದಲ್ಲಾದರೂ ಸಕ್ಸಸ್ ಸಾಧಿಸಬಹುದು. ಈ ಮಾತು ಚಿತ್ರರಂಗಕ್ಕೆ ಕೂಡಾ ಅನ್ವಯಿಸುತ್ತದೆ. ಅವಕಾಶಕ್ಕಾಗಿ ಅಲೆದು, ಶೂಟಿಂಗ್ ಸೆಟ್​​​ನಲ್ಲಿ ಸಣ್ಣ ಪುಟ್ಟ ಕೆಲಸಗಳನ್ನು ಮಾಡಿಕೊಂಡು ಇಂದು ದೊಡ್ಡ ಮಟ್ಟಕ್ಕೆ ಬೆಳೆದ ಎಷ್ಟೋ ಪ್ರತಿಭೆಗಳಿದ್ದಾರೆ.

ದರ್ಶನ್ ಸಿನಿಜರ್ನಿಯ ಬೆಸ್ಟ್ ಸಿನಿಮಾಗಳು

ಖಳನಟ ತೂಗುದೀಪ್ ಶ್ರೀನಿವಾಸ್ ಪುತ್ರ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೂ ಈ ಮಾತು ಅನ್ವಯವಾಗುತ್ತದೆ. ಲೈಟ್ ಬಾಯ್​ ಆಗಿ ಕೆಲಸ ಆರಂಭಿಸಿದ ನಟ ದರ್ಶನ್ ಇಂದು ಸ್ಯಾಂಡಲ್​​ವುಡ್ ಬಾಕ್ಸ್​ ಆಫೀಸ್ ಸುಲ್ತಾನ ಎಂಬ ಹೆಸರು ಪಡೆದಿದ್ದಾರೆ. ಚಿತ್ರರಂಗದಲ್ಲಿ ಬರೋಬ್ಬರಿ 23 ವಸಂತಗಳನ್ನು ಪೂರೈಸಿರುವ ದರ್ಶನ್ ತಮ್ಮ ಸಿನಿಕರಿಯರ್​​​ನಲ್ಲಿ ಸಾಕಷ್ಟು ಏಳು-ಬೀಳುಗಳನ್ನು ಕಂಡಿದ್ದಾರೆ.

ದರ್ಶನ್ ಸಿನಿಜರ್ನಿಯ ಬೆಸ್ಟ್ ಸಿನಿಮಾಗಳು

ಕನ್ನಡ ಚಿತ್ರರಂಗದಲ್ಲಿ ಅತಿ ಹೆಚ್ಚು ಅಭಿಮಾನಿ ಬಳಗ ಹೊಂದಿರುವ ದರ್ಶನ್ ಇದುವರೆಗೂ 53 ಸಿನಿಮಾಗಳನ್ನು ಮಾಡಿದ್ದಾರೆ. ಈ ಸಿನಿಮಾಗಳಲ್ಲಿ ದರ್ಶನ್​​ ಕರಿಯರ್​​ನಲ್ಲಿ ದಿ ಬೆಸ್ಟ್ ಎನಿಸಿಕೊಳ್ಳುವ ಸಿನಿಮಾಗಳು ಸಾಕಷ್ಟಿವೆ. ದರ್ಶನ್ ಮೊದಲ ಬಾರಿಗೆ ಬಣ್ಣ ಹಚ್ಚಿದ್ದು ಎಸ್. ನಾರಾಯಣ್ ನಿರ್ದೇಶನದ 'ಮಹಾಭಾರತ' ಸಿನಿಮಾದಲ್ಲಿ. ಈ ಚಿತ್ರದಲ್ಲಿ ದರ್ಶನ್ ಅವರದ್ದು ವಿನೋದ್ ರಾಜ್ ಎದುರು ಖಳನಟನ ಪಾತ್ರ. ಈ ಚಿತ್ರ 1997 ಆಗಸ್ಟ್ 11 ರಂದು ರಿಲೀಸ್ ಆಗಿತ್ತು. ಆದರೆ ದರ್ಶನ್​​​​​​ಗೆ ಈ ಸಿನಿಮಾದಿಂದ ಗುರುತಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ದರ್ಶನ್ ಸಿನಿಜರ್ನಿಯ ಬೆಸ್ಟ್ ಸಿನಿಮಾಗಳು

2000ರಲ್ಲಿ ಡಿ. ರಾಜೇಂದ್ರಸಿಂಗ್ ​​​​​​​ಬಾಬು ನಿರ್ದೇಶನದ 'ದೇವರ ಮಗ', 'ಎಲ್ಲರ ಮನೆ ದೋಸೆನೂ' ಚಿತ್ರಗಳಲ್ಲಿ ದರ್ಶನ್ ವಿಲನ್ ಪಾತ್ರಗಳಲ್ಲಿ ನಟಿಸಿದರು. ಈ ಚಿತ್ರಗಳ ನಂತರ ಅವರು 'ಮೆಜೆಸ್ಟಿಕ್' ಚಿತ್ರದ ನಂತರ ಪೂರ್ಣ ಪ್ರಮಾಣದ ನಾಯಕನಾಗಿ ನಟಿಸಿದರು. ದರ್ಶನ್​​​ಗೆ ಐಡೆಂಟಿಟಿ ಅಂತ ದೊರೆತಿದ್ದು ಇದೇ ಸಿನಿಮಾ ಮೂಲಕ. 2002ರಲ್ಲಿ ನಿರ್ಮಾಪಕರಾದ ಭಾಮಾ ಹರೀಶ್ ಹಾಗೂ ರಾಮಮೂರ್ತಿ ಸುಮಾರು 30 ಲಕ್ಷ ರೂಪಾಯಿ ವೆಚ್ಚದಲ್ಲಿ ಈ ಸಿನಿಮಾ ನಿರ್ಮಾಣ ಮಾಡಿದ್ರು. ಅಂದು ಮೆಜೆಸ್ಟಿಕ್ ಚಿತ್ರ ಬಾಕ್ಸ್ ಆಫೀಸ್​​ ಕೊಳ್ಳೆ ಹೊಡೆದಿದ್ದು ಬರೋಬ್ಬರಿ 3 ಕೋಟಿ ರೂಪಾಯಿ. ಪಿ.ಎನ್​. ಸತ್ಯ ನಿರ್ದೇಶನದ ಮೆಜೆಸ್ಟಿಕ್ ಚಿತ್ರ ದರ್ಶನ್ ಸಿನಿಮಾ ಕರಿಯರ್​​​ಗೆ ದೊಡ್ಡ ಬುನಾದಿ ಹಾಕಿ ಕೊಡ್ತು.

ದರ್ಶನ್ ಸಿನಿಜರ್ನಿಯ ಬೆಸ್ಟ್ ಸಿನಿಮಾಗಳು

ಮೆಜೆಸ್ಟಿಕ್ ಚಿತ್ರದಲ್ಲಿ ಗಮನ ಸೆಳೆದ ದರ್ಶನ್​​​​​​ಗೆ ಸ್ಟಾರ್ ಪಟ್ಟ ತಂದುಕೊಟ್ಟ ಚಿತ್ರ 'ಕರಿಯ'. ರಿಯಲ್ ರೌಡಿಗಳನ್ನು ಬಳಸಿಕೊಂಡು ನಿರ್ದೇಶಕ ಪ್ರೇಮ್ ಈ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ್ರು. ಆನೇಕಲ್ ಬಾಲರಾಜ್ 2003ರಲ್ಲಿ ಈ ಚಿತ್ರವನ್ನು 2 ಕೋಟಿ ಖರ್ಚು ಮಾಡಿ ನಿರ್ಮಾಣ ಮಾಡಿದ್ರು. ಚಿತ್ರದ ಹಾಡುಗಳ ಜೊತೆಗೆ ರೌಡಿಸಂ ಕಥೆ ಆಧರಿಸಿದ ಕರಿಯ ಚಿತ್ರ 8 ಕೋಟಿ ಕಲೆಕ್ಷನ್ ಮಾಡುವ ಮೂಲಕ ದರ್ಶನ್​​​​​​​​​​ಗೆ ಸ್ಟಾರ್ ವ್ಯಾಲ್ಯೂ ತಂದು ಕೊಡ್ತು. ಕರಿಯ ಸಕ್ಸಸ್ ನಂತರ ಮತ್ತೊಂದು ಹಿಟ್ ಆದ ಚಿತ್ರ 'ಲಾಲಿಹಾಡು'. ಹೆಚ್​​​​​. ವಾಸು ನಿರ್ದೇಶನದ ಈ ಚಿತ್ರಕ್ಕೆ, ನಿರ್ಮಾಪಕ ಸಾ.ರಾ. ಗೋವಿಂದು 1.5 ಕೋಟಿ ಹಣ ಹೂಡಿದ್ದರು. ಈ ಚಿತ್ರ ಬಾಕ್ಸ್ ಆಫೀಸ್​​​​​​​​​​ನಲ್ಲಿ 3 ಕೋಟಿ ಗಳಿಸುವ ಮೂಲಕ ದರ್ಶನ್​​ಗೆ ಇನ್ನೂ ಹೆಚ್ಚಿನ ಹೆಸರು ನೀಡಿತು.

ದರ್ಶನ್ ಸಿನಿಜರ್ನಿಯ ಬೆಸ್ಟ್ ಸಿನಿಮಾಗಳು

ರೌಡಿಸಂ ಹಾಗೂ ಲವರ್ ಬಾಯ್ ಪಾತ್ರಗಳಲ್ಲಿ ಮಿಂಚಿದ್ದ ದರ್ಶನ್ ಮೊದಲ ಬಾರಿಗೆ ಅಂಧನಾಗಿ ನಟಿಸಿದ ಚಿತ್ರ 'ನಮ್ಮ ಪ್ರೀತಿಯ ರಾಮು'. ಈ ಚಿತ್ರ ಬಾಕ್ಸ್ ಆಫೀಸ್​​​​​​​ನಲ್ಲಿ ಸದ್ದು ಮಾಡದಿದ್ರೂ ದರ್ಶನ್ ಅಭಿನಯಕ್ಕೆ ಎಲ್ಲರಿಂದ ಪ್ರಶಂಸೆ ದೊರೆಯಿತು. ಇದೇ ಸಮಯಲ್ಲಿ ಹಿಟ್ ಆದ ಚಿತ್ರ 'ದಾಸ' ಮತ್ತೆ ದರ್ಶನ್ ರೌಡಿಯಾಗಿ ಕಾಣಿಸಿಕೊಂಡ ಸಿನಿಮಾ. ಪಿ.ಎನ್. ಸತ್ಯ ನಿರ್ದೇಶನದ ದಾಸ ಚಿತ್ರಕ್ಕೆ ರಮೇಶ್ ಯಾದವ್ 1 ಕೋಟಿ ಹಣ ಸುರಿದರು. ಈ ಚಿತ್ರ ಲಾಭ ಮಾಡಿದ್ದು 4 ಕೋಟಿ ರೂಪಾಯಿ. ಹೀಗೆ ಬ್ಯಾಕ್ ಟೂ ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡುತ್ತಿದ್ದ ದರ್ಶನ್​​​​ಗೆ ಮೈಸೂರಿನ ಹುಣಸೂರು ತಾಲೂಕಿನ ದೇಸಿಗೌಡ ಎಂಬುವವರು 'ಚಾಲೆಂಜಿಂಗ್ ಹೀರೋ' ಅಂತ ಬಿರುದು ಕೊಟ್ರು.

ದರ್ಶನ್ ಸಿನಿಜರ್ನಿಯ ಬೆಸ್ಟ್ ಸಿನಿಮಾಗಳು

2004ರಲ್ಲಿ ಬಂದ 'ಕಲಾಸಿಪಾಳ್ಯ' ಸಿನಿಮಾ ಚಾಲೆಂಜಿಂಗ್ ಹೀರೋಗೆ ಇನ್ನೂ ದೊಡ್ಡ ಇಮೇಜ್ ತಂದುಕೊಡ್ತು. ಓಂ ಪ್ರಕಾಶ್ ರಾವ್ ನಿರ್ದೇಶನದ ಕಲಾಸಿಪಾಳ್ಯ ಚಿತ್ರವನ್ನು ನಿರ್ಮಾಪಕ ರಾಮು 3 ಕೋಟಿ ಬಜೆಟ್​​​​ನಲ್ಲಿ ನಿರ್ಮಾಣ ಮಾಡಿದ್ರು. ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಗಳಿಸಿದ್ದು 7 ಕೋಟಿ ರೂಪಾಯಿ. ಅಂದಿನಿಂದ ಚಾಲೆಂಜಿಂಗ್ ಹೀರೋ ಆಗಿದ್ದ ದರ್ಶನ್ ಚಾಲೆಂಜಿಂಗ್ ಸ್ಟಾರ್ ಆದ್ರು. ದರ್ಶನ್ ಮತ್ತು ರಕ್ಷಿತಾ ಜೋಡಿ ಸೂಪರ್ ಹಿಟ್ ಆಗಿತ್ತು. ಈ ಚಿತ್ರದ ಬಳಿಕ ದರ್ಶನ್​​​​ಗೆ ಮತ್ತೊಂದು ಹಿಟ್ ಕೊಟ್ಟ ಚಿತ್ರ 'ಅಯ್ಯ'. ಮೊದಲ ಬಾರಿಗೆ ಪೊಲೀಸ್ ಪಾತ್ರದಲ್ಲಿ ಅವರು ಮಿಂಚಿದರು. ಭೈರೇಗೌಡ ಎಂಬುವರು 2 ಕೋಟಿ ಬಜೆಟ್​​​​​​ನಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದರು. ಈ ಸಿನಿಮಾವನ್ನು ಕೂಡಾ ಓಂ ಪ್ರಕಾಶ್ ರಾವ್ ನಿರ್ದೇಶಿಸಿದ್ದರು. ಈ ಸಿನಿಮಾ ಬಾಕ್ಸ್ ಆಫೀಸಿನಲ್ಲಿ 5 ಕೋಟಿ ರೂಪಾಯಿ ಲಾಭ ಮಾಡ್ತು.

ದರ್ಶನ್ ಸಿನಿಜರ್ನಿಯ ಬೆಸ್ಟ್ ಸಿನಿಮಾಗಳು

ಅಯ್ಯ ನಂತರ ಮತ್ತೊಂದು ಹಿಟ್ ಸಿನಿಮಾ ಅನಿಸಿಕೊಂಡ ಚಿತ್ರ 'ಶಾಸ್ತ್ರಿ'. ಪಿ.ಎನ್​. ಸತ್ಯ ನಿರ್ದೇಶನದ ಶಾಸ್ತ್ರಿ ಚಿತ್ರವನ್ನು ಅಣಜಿ ನಾಗರಾಜ್ 2 ಕೋಟಿ ಹಣ ಹೂಡಿ ನಿರ್ಮಿಸಿದ್ದರು. ಈ ಸಿನಿಮಾ ಗಳಿಸಿದ್ದು 5 ಕೋಟಿ ರೂಪಾಯಿ. ಈ ಎರಡು ಚಿತ್ರಗಳ ಸಕ್ಸಸ್​​​​​​​​​​​​​​​​​​ನಿಂದ ದರ್ಶನ್ ಸಂಭಾವನೆ ಕೋಟಿಗೆ ಏರಿತು. ಸ್ವಾಮಿ, ಮಂಡ್ಯ, ಸುಂಟರಗಾಳಿ, ಅನಾಥರು ಚಿತ್ರಗಳ ನಡುವೆ ಸೂಪರ್ ಹಿಟ್ ಆದ ಚಿತ್ರ 'ಗಜ'. ಕೆ. ಮಾದೇಶ ನಿರ್ದೇಶನದ ಈ ಚಿತ್ರವನ್ನು ಸುರೇಶಗೌಡ ಎಂಬ ನಿರ್ಮಾಪಕರು 4 ಕೋಟಿ ಬಜೆಟ್​​​​​​ನಲ್ಲಿ ನಿರ್ಮಾಣ ಮಾಡಿದ್ರು. ಈ ಚಿತ್ರ ಲಾಭ ಮಾಡಿದ್ದು 8 ಕೋಟಿ ರೂಪಾಯಿ.

ದರ್ಶನ್ ಸಿನಿಜರ್ನಿಯ ಬೆಸ್ಟ್ ಸಿನಿಮಾಗಳು

ಗಜ ಚಿತ್ರ ಬಳಿಕ 7 ಕೋಟಿ ಬಜೆಟ್​​​​​​​​​​​​​​​​​​ನಲ್ಲಿ 'ಪೊರ್ಕಿ' ಸಿನಿಮಾ ನಿರ್ಮಾಣ ಆಯ್ತು. ಈ ಸಿನಿಮಾ ಲಾಭ ಮಾಡಿದ್ದು 10 ಕೋಟಿ ರೂಪಾಯಿ. ನಂತರ ಬಂದ 'ಸಾರಥಿ' ಚಿತ್ರ ಮತ್ತೆ ದರ್ಶನ್​​ಗೆ ಬ್ರೇಕ್​ ನೀಡಿತು. ಈ ಚಿತ್ರವನ್ನು ಸತ್ಯಪ್ರಕಾಶ್ 7 ಕೋಟಿ ಬಜೆಟ್​​​​​​​​ನಲ್ಲಿ ನಿರ್ಮಾಣ ಮಾಡಿದ್ರು. 14 ಕೋಟಿ ರೂಪಾಯಿ ಲಾಭ ಮಾಡುವ ಮೂಲಕ ಈ ಸಿನಿಮಾ ದರ್ಶನ್​​​​​​ಗೆ ಅಭಿಮಾನಿಗಳ ಸಂಖ್ಯೆಯನ್ನು ಹೆಚ್ಚು ಮಾಡಿತು. ಅದೇ ಸಮಯದಲ್ಲಿ ಮೊದಲ ಬಾರಿ ದರ್ಶನ್ ನಟಿಸಿದ ಐತಿಹಾಸಿಕ ಚಿತ್ರ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ'. ದರ್ಶನ್ ಸಿನಿಮಾ ಕರಿಯರ್​​​ನಲ್ಲಿ 30 ಕೋಟಿ ಬಂಡವಾಳ ಹೂಡಿದ ಮೊದಲ ಸಿನಿಮಾ ಇದು. ಈ ಚಿತ್ರದಲ್ಲಿ ದರ್ಶನ್ ರಾಯಣ್ಣನಾಗಿ ಮಿಂಚಿದ್ದರು.

ದರ್ಶನ್ ಸಿನಿಜರ್ನಿಯ ಬೆಸ್ಟ್ ಸಿನಿಮಾಗಳು

ಈ ಚಿತ್ರದ ಜೊತೆಗೆ ದರ್ಶನ್ ಸೂಪರ್ ಹಿಟ್ ಲಿಸ್ಟ್​​​​​​ಗೆ ದಾಖಲಾದ ಚಿತ್ರ 'ಬುಲ್ ಬುಲ್'. ತಮ್ಮದೇ ಬ್ಯಾನರ್​​​​​​​​​​​​​​​ನಲ್ಲಿ ಸುಮಾರು 15 ಕೋಟಿ ರೂಪಾಯಿ ಬಜೆಟ್ ಖರ್ಚು ಮಾಡಿ ದರ್ಶನ್ ನಿರ್ಮಾಣ ಮಾಡಿದ್ರು. ಈ ಚಿತ್ರ ಗಳಿಸಿದ್ದು 25 ಕೋಟಿ ರೂಪಾಯಿ. ಇನ್ನು 2019ರಲ್ಲಿ ಶತದಿನ ಆಚರಿಸಿ ಬಾಕ್ಸ್ ಆಫೀಸ್​​​​​​ ಕೊಳ್ಳೆ ಹೊಡೆದ ಚಿತ್ರ 'ಯಜಮಾನ'. ಪಕ್ಕಾ ಆ್ಯಕ್ಷನ್ ಜೊತೆಗೆ ಫ್ಯಾಮಿಲಿ ಸೆಂಟಿಮೆಂಟ್ ಹೊಂದಿದ್ದ ಯಜಮಾನ ಚಿತ್ರವನ್ನು ಶೈಲಜಾ ನಾಗ್ 30 ಕೋಟಿ ರೂಪಾಯಿ ಬಜೆಟ್​​​​​​ನಲ್ಲಿ ನಿರ್ಮಾಣ ಮಾಡಿದ್ರು. ಪೊನ್ನಮ್ ಕುಮಾರ್ ಮತ್ತು ವಿ. ಹರಿಕೃಷ್ಣ ನಿರ್ದೇಶನದ ಯಜಮಾನ ಗಲ್ಲಾ ಪೆಟ್ಟಿಗೆಯಲ್ಲಿ 40 ಕೋಟಿ ಬಾಚಿತ್ತು. ಚಿತ್ರದಲ್ಲಿ ದರ್ಶನ್ ಮತ್ತು ರಶ್ಮಿಕಾ ಮಂದಣ್ಣ ಜೋಡಿ ಮೋಡಿ ಮಾಡಿತ್ತು.

ದರ್ಶನ್ ಸಿನಿಜರ್ನಿಯ ಬೆಸ್ಟ್ ಸಿನಿಮಾಗಳು

ಸಂಗೊಳ್ಳಿ ರಾಯಣ್ಣ ನಂತರ ದರ್ಶನ್ ಮತ್ತೆ ಐತಿಹಾಸಿಕ ಸಿನಿಮಾ ಅಂತ ಮಾಡಿದ್ದು 'ಕುರುಕ್ಷೇತ್ರ' ಚಿತ್ರ. ಈ ಸಿನಿಮಾದಲ್ಲಿ ದರ್ಶನ್ ದುರ್ಯೋಧನನಾಗಿ ಅಬ್ಬರಿಸಿದ್ದು ಸುಳ್ಳಲ್ಲ. ನಿರ್ಮಾಪಕ ಮುನಿರತ್ನ 60 ಕೋಟಿ ಬಜೆಟ್​​​​ನಲ್ಲಿ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ರು. ಈ ಸಿನಿಮಾ ಲೂಟಿ ಮಾಡಿದ್ದು 100 ಕೋಟಿ ರೂಪಾಯಿ. ಈ ಮೂಲಕ ಕುರುಕ್ಷೇತ್ರ ದರ್ಶನ್ ಸಿನಿಮಾ ಜರ್ನಿಯಲ್ಲಿ ಹೊಸ ದಾಖಲೆ ಬರೆದಿದೆ. ಸದ್ಯ 'ರಾಬರ್ಟ್' ಸಿನಿಮಾದಲ್ಲಿ ದರ್ಶನ್ ಹೊಸ ಲುಕ್​​​ನಲ್ಲಿ ಮಿಂಚಿದ್ದಾರೆ. ನಿರ್ಮಾಪಕ ಉಮಾಪತಿ 35 ಕೋಟಿ ರೂಪಾಯಿ ಬಜೆಟ್​​​​​​​​​ನಲ್ಲಿ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ತರುಣ್ ಸುಧೀರ್ ನಿರ್ದೇಶನದ ಈ ಚಿತ್ರ ರಿಲೀಸ್​​​​​​​​​​​​​ಗೂ ಮುಂಚೆ 30 ಕೋಟಿ ರೂಪಾಯಿ ವ್ಯಾಪಾರ ಮಾಡಿದೆ ಎನ್ನಲಾಗಿದೆ.

ದರ್ಶನ್ ಸಿನಿಜರ್ನಿಯ ಬೆಸ್ಟ್ ಸಿನಿಮಾಗಳು

ಇದಾದ ನಂತರ ಡಿ. ರಾಜೇಂದ್ರಸಿಂಗ್ ಬಾಬು ನಿರ್ದೇಶನದಲ್ಲಿ ದರ್ಶನ್ 'ಗಂಧದ ಗುಡಿ' ಹೆಸರಿನಲ್ಲೇ ಮತ್ತೊಂದು ಸಿನಿಮಾ ಮಾಡಲಿದ್ದಾರೆ ಎನ್ನಲಾಗುತ್ತಿದ್ದರೂ ಈ ಬಗ್ಗೆ ಇನ್ನೂ ಅಧಿಕೃತವಾಗಿ ಯಾರೂ ಹೇಳಿಕೊಂಡಿಲ್ಲ.

ದರ್ಶನ್ ಸಿನಿಜರ್ನಿಯ ಬೆಸ್ಟ್ ಸಿನಿಮಾಗಳು

ABOUT THE AUTHOR

...view details