ಹೈದರಾಬಾದ್ :ಲಿಗರ್ ಸಿನಿಮಾ ರಿಲೀಸ್ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ನಟ ವಿಜಯ್ ದೇವರಕೊಂಡ ಗರಂ ಆಗಿದ್ದಾರೆ. ಯಾವುದೇ ಕಾರಣಕ್ಕೂ ‘ಲಿಗರ್’ ಓಟಿಟಿ ವೇದಿಕೆಯಲ್ಲಿ ಬಿಡುಗಡೆಯಾಗುವುದಿಲ್ಲ ಎಂಬುದನ್ನು ಅವರು ಟ್ವಿಟರ್ನಲ್ಲಿ ಸ್ಪಷ್ಟಪಡಿಸಿದ್ದಾರೆ. ಲಿಗರ್ ಸಿನಿಮಾ ಓಟಿಟಿಯಲ್ಲಿ ಬಿಡುಗಡೆಯಾಗುತ್ತದೆ. ಇದಕ್ಕಾಗಿ ನಿರ್ಮಾಪಕರು ಸುಮಾರು 200 ಕೋಟಿ ರೂಪಾಯಿ ವ್ಯವಹಾರ ಖುದುರಿಸಿದೆ ಎಂಬ ಸುದ್ದಿ ಹರಿದಾಡಿದ್ದವು.
ಓಟಿಟಿ ಎಂಬುದು ತುಂಬಾ ಚಿಕ್ಕ ವೇದಿಕೆ, ಥಿಯೇಟರ್ಗಳಲ್ಲೇ ಚಿತ್ರ ನೋಡಿದರೆ ಚೆನ್ನಾಗಿರುತ್ತದೆ ಎಂದು ದೇವರಕೊಂಡ ಉಲ್ಲೇಖಿಸಿದ್ದಾರೆ. ತೆಲುಗಿನ ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್ ನಿರ್ದೇಶಿಸುತ್ತಿರುವ ಲಿಗರ್ನಲ್ಲಿ ವಿಜಯ್ ದೇವರಕೊಂಡ, ಅನನ್ಯಾ ಪಾಂಡೆ, ಮಕರಂದ ದೇಶಪಾಂಡೆ, ರೋನಿ ರಾಯ್, ಮೈಕ್ ಟೈಸನ್, ರಮ್ಯಾ ಕೃಷ್ಣ ಮುಖ್ಯ ತಾರಾಗಣದಲ್ಲಿ ಅಭಿನಯಿಸಿದ್ದಾರೆ.